ಹಾರುವ ಕಾರುಗಳ ನಿರ್ಮಾಣ ಆರಂಭಿಸಿದ ಸುಜುಕಿ: ವಿಶ್ವಗುರು ಭಾರತದಲ್ಲೇ ಮೊದಲ ಹಾರಾಟವಂತೆ!
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆ ಊಹಿಸಲೂ ಸಾಧ್ಯವಾಗದ ಮಟ್ಟಿಗೆ ಬೆಳೆಯುತ್ತಿದೆ. ತಂತ್ರಜ್ಞಾನ ಭರಿತ ಕಾರುಗಳು, ಗ್ಯಾಜೆಟ್‌ಗಳು ನಮ್ಮ ದಿನನಿತ್ಯದ ದಿನಚರಿಗಳಲ್ಲಿ ಹುದುಗಿ ಹೋಗಿದೆ. ದಿನ ಕಳೆದಂತೆ ಇದರ ಬೆಳವಣಿಗೆ ಹೆಚ್ಚಾಗುತ್ತದೆಯೇ ಹೊರತು, ಕಮ್ಮಿಯಂತು ಆಗಲು ಸಾಧ್ಯವಿಲ್ಲ. ಇಂದಿನ ಲೇಖನದಲ್ಲಿ ವಿಶೇವಾದ ತಂತ್ರಜ್ಞಾನವೊಂದರ ಕುರಿತಾಗಿ ನೋಡಲಿದ್ದೇವೆ.
ಕೆಲವು ತಿಂಗಳುಗಳ ಹಿಂದಿನಿಂದಲೇ, ಹಾರುವ ಕಾರುಗಳ (Flying Cars) ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಲೇ ಇದೆ. ಇದರ ಬಗ್ಗೆ ಈ ಹಿಂದೆಯೂ ವರದಿಯನ್ನು ನಾವು ಮಾಡಿದ್ದೆವು. ಇದೀಗ ಹಾರುವ ಕಾರುಗಳ ಕುರಿತಾದ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು, ಎಲ್ಲರೂ ಅವಕ್ಕಾಗಿದ್ದಾರೆ. ವಿಶ್ವದ ಪ್ರತಿಷ್ಟಿತ ವಾಹನ ನಿರ್ಮಣ ಕಂಪನಿಯೊಂದು ಇದೀಗ ಹಾರುವ ಕಾರುಗಳ ನಿರ್ಮಾಣವನ್ನೇ ಆರಂಭಿಸಿದೆ ಎಂದು ತಿಳಿದು ಬಂದಿದೆ.

ಹೌದು, ಜಪಾನ್ ಮೂಲದ ಸುಜುಕಿ ಕಂಪನಿ ಇದೀಗ ಹಾರುವ ಕಾರುಗಳ ಉತ್ಪಾದನೆಯನ್ನು ಆರಭಿಸಿದೆ ಎಂದು ವರದಿಯಾಗಿದೆ. ಜಪಾನ್‌ನ ಶಿಜುಕಾದಲ್ಲಿ ಇರುವ ಕಾರ್ಖಾನೆಯಲ್ಲಿ ಹಾರುವ ಕಾರುಗಳ ಉತ್ಪಾದನೆಯನ್ನು ಸುಜುಕಿ ಆರಂಭಿಸಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಸ್ಕೈ ಡ್ರೈವ್ ಮತ್ತು ಸುಜುಕಿ ಹಾರುವ ಕಾರುಗಳ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದೀಗ ಎರಡೂ ಕಂಪನಿಗಳು ಸಹಭಾಗಿತ್ವದಲ್ಲಿ ಈ ಕಾರುಗಳ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದೆ.
ಇನ್ನು ಈಗಾಗಲೇ ಸ್ಕೈ ಡ್ರೈವ್ ಕಂಪನಿಯು ಸಿದ್ದಗೊಳಿಸಿರುವ ಕಾರ್ಗೋ ಡ್ರೋನ್‌ಗಳು ಈಗಾಗಲೇ ಜಪಾನ್‌ನಲ್ಲಿ ಕಾರ್ಯ ನಿರ್ವಹಿಸಲು ಸಿದ್ದವಾಗಿರುವ ಬೆನ್ನಲ್ಲೇ ಸುಜುಕಿ ಹಾರುವ ಕಾರುಗಳ ನಿರ್ಮಾಣಕ್ಕೂ ಕೈ ಹಾಕಿದೆ. 2027ರ ವೇಳೆಗೆ ಈ ಹಾರುವ ಕಾರುಗಳನ್ನು ಸುಜುಕಿ ಭಾರತದ ಗುಜರಾತ್‌ನಲ್ಲಿ ಪರೀಕ್ಷಣಾರ್ಥ ಹಾರಾಟ ನಡೆಸಲಿದೆ ಎನ್ನಲಾಗುತ್ತಿದೆ.

ಇನ್ನೂ ಈ ಕಾರುಗಳು ಸಂಪೂರ್ಣ ಆಟೋಮ್ಯಾಟಿಕ್ ಆಗಿರಲಿದ್ದು, ಎಲ್ಲವನ್ನೂ ದೂರದಿಂದಲೇ ಕಂಟ್ರೋಲ್ ಮಾಡಲಾಗುತ್ತದೆ. ಜಪಾನ್‌ನ ಶಿಜುಕಾದಲ್ಲಿ ಇರುವ ಸುಜುಕಿ ಕಾರ್ಖಾನೆಯಲ್ಲಿ ವರ್ಷಕ್ಕೆ ಸುಮಾರು ನೂರು ಹಾರುವ ಕಾರುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಸಾರಿಗೆಯ ಡಿಮ್ಯಾಂಡ್ ವಿಪರೀತವಾಗಿ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ದುಬಾರಿ ಹಾರುವ ಕಾರುಗಳನ್ನು ನಿರ್ಮಿಸಲಾಗುತ್ತಿದೆ.
ಜನವರಿ 2024 ರಲ್ಲಿ ಲಾಸ್ ವೇಗಾಸ್‌ನಲ್ಲಿ ನಡೆದ ಗ್ರಾಹಕ ಎಲೆಕ್ಟ್ರಾನಿಕ್ಸ್ ಪ್ರದರ್ಶನದಲ್ಲಿ, ಎಕ್ಸ್ ಪೆಂಗ್ ಲ್ಯಾಂಡ್ ಏರ್ ಕ್ರಾಫ್ಟ್ ಕ್ಯಾರಿಯರ್ ಮಾಡ್ಯುಲರ್ ಫ್ಲೈಯಿಂಗ್ ಕಾರು 2024 ರ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರೀ-ಆರ್ಡರ್ ಗೆ ಲಭ್ಯವಿರುತ್ತದೆ ಎಂದು ಹೇಳಿತ್ತು. ವಿತರಣೆಗಳನ್ನು ನಾಲ್ಕನೇ ತ್ರೈಮಾಸಿಕ, 2025 ರಿಂದ ಪ್ರಾರಂಭಿಸಲು ಯೋಜಿಸಲಾಗಿದೆ.
ಎಕ್ಸ್ ಪೆಂಗ್ 1 ಮಿಲಿಯನ್ ಯುವಾನ್ (ಅಂದಾಜು 1.15 ಕೋಟಿ ರೂ.) ಬೆಲೆಯನ್ನು ಹೊಂದಿದೆ. ಈ ಬೆಲೆಯಲ್ಲಿ, ಹಾರುವ ಕಾರು ನಿರ್ದಿಷ್ಟ ಪ್ರೇಕ್ಷಕರಿಗೆ ಮಾತ್ರ ಸಿಗಲಿದೆ. ಹಾರುವ ಕಾರುಗಳಿಗೆ ವಾಯುಪ್ರದೇಶದ ನಿಯಮಗಳು ಮತ್ತೊಂದು ಸವಾಲಾಗಬಹುದು. ಅಲ್ಲದೆ, ಹಾರುವ ಯಂತ್ರದೊಂದಿಗೆ ವ್ಯವಹರಿಸಲು ವಿಶೇಷ ಕೌಶಲ್ಯಗಳು ಬೇಕಾಗುತ್ತವೆ. ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದರೂ ಸಹ, ಹಾರುವ ಕಾರು ಮೊದಲ ಬಾರಿಗೆ ಬಳಕೆದಾರರಿಗೆ ಸವಾಲುಗಳನ್ನು ಒಡ್ಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications