ವಿಂಟೇಜ್ ಟಚ್‌ನಲ್ಲಿ ಸುಜುಕಿ ಸ್ವಿಫ್ಟ್ '69' ಎಡಿಷನ್: ಇದರಲ್ಲಿ ಸಂಪೂರ್ಣ ಅನಲಾಗ್, ನೋ ಡಿಜಿಟಲ್!
ಇತ್ತೀಚಿನ ದಿನಗಳಲ್ಲಿ ಕಾರುಗಳು ಹೊಸ ಹೊಸ ಫೀಚರ್‌ಗಳನ್ನು ಪಡೆದುಕೊಂಡು, ಹಳೇ ಫೀಚರ್‌ಗಳನ್ನು ಒಂದೊಂದಾಗೆ ಕಳೆದುಕೊಳ್ಳುತ್ತಾ ಬರುತ್ತಿದೆ. ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಅಡಾಸ್‌ನಂತಹ ಫೀಚರ್‌ಗಳು ಇಂದಿನ ಕಾರುಗಳಲ್ಲಿ ಬರುತ್ತಿರುವ ಸಮಯದಲ್ಲೇ ಸುಜುಕಿ ತನ್ನ ಸ್ವಿಫ್ಟ್ ಕಾರಿಗೆ ಕ್ಲಾಸಿಕ್ ಟಚ್ ನೀಡಿ ಅನಾವರಣ ಗೊಳಿಸಿದ್ದಾರೆ.
ಹೌದು, ಸದ್ಯ ಬ್ಯಾಂಕಾಕ್ ಇಂಟರ್‌ನ್ಯಾಷನಲ್ ಮೋಟಾರ್ ಶೋ ನಡೆಯುತ್ತಿದ್ದು, ಈ ಮೋಟಾರ್ ಶೋನಲ್ಲಿ ಸುಜುಕಿ ಸದ್ಯಕ್ಕೆ ತನ್ನ ಬಳಿಯಿರಯವ ಎಲ್ಲಾ ಕಾರು ಮಾದರಿಯನ್ನು ಪ್ರದರ್ಶನಕ್ಕೆ ಇಟ್ಟಿತ್ತು. ಇದರಲ್ಲಿ ಗಮನ ಸೆಳೆದದ್ದು ಸುಜುಕಿ ಸ್ವಿಫ್ಟ್ (Suzuki Swift). ಸ್ವಿಫ್ಟ್ ಕ್ಲಾಸಿಕ್ 69 ಎಡಿಷನ್ ಅನ್ನು ಈ ಶೋನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದು, ಇದರಲ್ಲಿ ಹೊರಭಾಗ ಮತ್ತು ಒಳಭಾಗಗಳಲ್ಲಿ ಬದಲಾವಣೆಗಳಿರುವುದನ್ನು ಕಾಣಬಹುದಾಗಿದೆ.

ಇದರ ಕುರಿತಾದ ಫೊಟೋಗಳು ಈಗಾಲೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಫೊಟೋದಲ್ಲಿ ಕಾಣುವಂತೆ ಈ ಕಾರಿನ ಬಣ್ಣದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದು. ಬಾನೆಟ್‌ನಲ್ಲಿ ಎರಡು ಲೈನ್‌ಗಳ ಜೊತೆಗೆ 69 ಎಂಬ ಸಂಖ್ಯೆಯನ್ನು ನೋಡಬಹುದಾಗಿದೆ. ಈ ಲೈನ್ ಹಿಂಭಾಗವರೆಗೂ ಹರಡಿಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ರೀತಿಯಲ್ಲೇ ಇದ್ದರೂ, ಇದರ ಒಳಭಾಗದಲ್ಲಿ ಕಂಪ್ಲೀಟ್ ರೆಟ್ರೋ ಟಚ್ ನೀಡಲಾಗಿದೆ.
ಕಾರಿನ ಒಳಭಾಗದಲ್ಲಿ ಎಲ್ಲವೂ ರೆಟ್ರೋ ಲುಕ್‌ನಲ್ಲಿ ಇದ್ದು ಇದರ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಸಂಪೂರ್ಣ ಅನಲಾಗ್ ಆಗಿದೆ. ಡ್ಯಾಶ್ ಬೋರ್ಡ್ ಸಹ ಅಲ್ಲಲ್ಲಿ ತಿಳಿ ಹಸಿರು ಬಣ್ಣದ ಟಚ್ ಹೊಂದಿದ್ದು, ಇದು ನೋಡುಗರನ್ನು ಆಕರ್ಷಿಸುತ್ತಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸ್ವಿಫ್ಟ್ ಕಾರನ್ನು ಆಧರಿಸಿ ಈ ಕಾರನ್ನು ತಯಾರಿಸಲಾಗಿದೆ.

ಸುಜುಕಿ ಸ್ವಿಫ್ಟ್‌ನ ಮಾಹಿತಿಗಳನ್ನು ನೋಡುವುದಾದರೆ, ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್, ರೂ.5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್, ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ . ರೂಪಾಂತರಗಳಿಗೆ ಅನುಗುಣವಾಗಿ 22.38 - 22.56 kmpl ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ 2024, ಹೈಬ್ರಿಡ್ ಎಂಜಿನ್ ನೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಮೂಲಕ ಈಗಿರುವ ಮಾರುತಿ ಸುಜುಕಿ ಸ್ವಿಫ್ಟ್‌ಗಿಂತಲೂ, ಅಧಿಕ ಮೈಲೇಜ್ ಮತ್ತು ಹೆಚ್ಚು ರಿಫೈನ್ ಆಗಿರುವ ಎಂಜಿನ್ ಈ ಕಾರಿನಲ್ಲಿ ಸಿಗಲಿದೆ ಎನ್ನಲಾಗುತ್ತಿದೆ. ಸಾಧಾರಣವಾಗಿ ಸ್ವಿಫ್ಟ್ ಉತ್ತಮ ಮೈಲೇಜ್ ನೀಡುತ್ತಿದೆಯಾದರೂ, ಹೈಬ್ರಿಡ್ ಎಂಜಿನ್ ಬಂದರೆ ಈ ಕಾರು ಏನಿಲ್ಲವೆಂದರೂ ಸುಮಾರು 35 ಕಿಮೀ ಮೈಲೇಜ್ ನೀಡಲಿದೆ ಎಂದು ಹೇಳಲಾಗುತ್ತಿದೆ.

ಮುಂಬರಲಿವ ಈ ಕಾರು, 1.2 - ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ ಇ - ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗುವ ಸಾಧ್ಯತೆಯಿದ್ದು, 30 - 35 kmpl ಮೈಲೇಜ್ ನೀಡಬಹುದು ಎನ್ನಲಾಗಿದೆ. ಮತ್ತೊಂದು, ನಾನ್ ಹೈಬ್ರಿಡ್ 1.2 - ಲೀಟರ್ 3 - ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೂ ಖರೀದಿದಾರಿಗೆ ಲಭ್ಯವಾಗಬಹುದು.
ಅಲ್ಲದೆ, ನೂತನ ಸ್ವಿಫ್ಟ್, ಮರು - ವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ನವೀನವಾದ ಕಪ್ಪು ಬಣ್ಣದ ಗ್ರಿಲ್, ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್, ಡ್ಯುಯಲ್ - ಟೋನ್ ವೀಲ್ಸ್ ಕೂಡ ಹೊಂದಿದೆ. ಇದನ್ನು ಜಾಗತಿಕವಾಗಿ ಪ್ರದರ್ಶಿಸಲಾದ ಮಾದರಿಯಲ್ಲಿ ನೋಡಬಹುದು. ಸುರಕ್ಷತೆಯ ಸಲುವಾಗಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯದೊಂದಿಗೆ ಲಾಂಚ್ ಆಗಬಹುದು ಎಂದು ಹೇಳಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications