ಸೇಫ್ಟಿಯಲ್ಲಿ ಕೇವಲ 1 ಸ್ಟಾರ್ ಗಳಿಸಿ ಆತಂಕ ಹೆಚ್ಚಿಸಿದೆ ಸ್ವಿಫ್ಟ್ ಕಾರು! ಡಮ್ಮಿ ಎಂದುಬಿಟ್ಟ ಏಜೆನ್ಸಿ!
ಭಾರತದಲ್ಲಿ ಮಾರುತಿ ಸುಜುಕಿ ಬ್ರಾಂಡ್‌ನಡಿ ಮಾರಾಟವಾಗುವ ಜನಪ್ರಿಯ ಸ್ವಿಫ್ಟ್ ಕಾರು, ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸುಜುಕಿ ಸ್ವಿಫ್ಟ್ ಆಗಿ ಮಾರಾಟವಾಗುತ್ತದೆ. ಇತ್ತೀಚೆಗೆ ಸ್ವಿಫ್ಟ್ 4ನೇ ಜೆನ್ ಮಾಡೆಲ್ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬಿಡುಗಡೆಯಾಗಿದೆ. ಭಾರತದ 4ನೇ ಜೆನ್ ಸ್ವಿಫ್ಟ್ ಅನ್ನು ಕ್ರ್ಯಾಶ್-ಟೆಸ್ಟ್ ಮಾಡಲಾಗಿಲ್ಲವಾದರೂ, ಯುರೋಪ್‌ನಲ್ಲಿ ಮಾರಾಟವಾಗುತ್ತಿರುವ ಸ್ವಿಫ್ಟ್‌ಗೆ ಯುರೋ ಎನ್‌ಸಿಎಪಿ 3 ಸ್ಟಾರ್ ರೇಟಿಂಗ್ ನೀಡಿದೆ. ಇದೀಗ ಆಸ್ಟ್ರೇಲಿಯಾದ ಎನ್‌ಸಿಎಪಿ (ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಕ್ರ್ಯಾಶ್ ಟೆಸ್ಟಿಂಗ್) ಕೇವಲ 1 ಸ್ಟಾರ್ ನೀಡಿದೆ.
ವಿವಿಧ ದೇಶಗಳಲ್ಲಿ ಬದಲಾಗುವ ಕಾರು ನಿರ್ಮಾಣ ಗುಣಮಟ್ಟವು ಅಲ್ಲಿನ ಗ್ರಾಹಕರ ಆರ್ಥಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಮಾರಾಟ ಮಾಡಲಾಗುತ್ತದೆ. ಆಯಾ ದೇಶಗಳಲ್ಲಿ ಕಾರಿನ ಬೆಲೆಯನ್ನು ಅವಲಂಭಿಸಿ ಕಾರು ತಯಾರಕರು ಗುಣಮಟ್ಟದ ಕಾರುಗಳನ್ನು ಮಾರಾಟ ಮಾಡುತ್ತಾರೆ. ಉದಾಹರಣೆಗೆ ಭಾರತದಲ್ಲಿ ಈ ಹಿಂದೆ 3ನೇ ಜೆನ್ ಸ್ವಿಫ್ಟ್ ಕಾರು 6 ಕೇವಲ ಲಕ್ಷ ಆರಂಭಿಕ ಬೆಲೆಯಲ್ಲಿ ಲಭ್ಯವಿತ್ತು. ಈ ಕಾರು ಸೇಫ್ಟಿ ಟೆಸ್ಟ್‌ನಲ್ಲಿ ಕೇವಲ 1 ಸ್ಟಾರ್ ಗಳಿಸಿತ್ತು.

ಇದೇ ಕಾರು ಜಪಾನ್‌ನಲ್ಲಿ ಆರಂಭಿಕ ಬೆಲೆ 7.79 ಲಕ್ಷವಿದ್ದು, ಇದನ್ನು ಕ್ರಾಷ್ ಟೆಸ್ಟ್‌ಗೆ ಒಳಪಡಿಸಿದಾಗ 4 ಸ್ಟಾರ್ ರೇಟಿಂಗ್ ಗಳಿಸಿತ್ತು. ಹೀಗೆ ಕಾರಿನ ಬೆಲೆ ಹೆಚ್ಚಾದಂತೆ ನಿರ್ಮಾಣ ಗುಣಮಟ್ಟವಿರುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ. ಇದೀಗ ಆಸ್ಟ್ರೇಲಿಯಾದ ಎನ್‌ಸಿಎಪಿ ಸ್ವಿಫ್ಟ್ 4ನೇ ಜೆನ್ ಮಾಡೆಲ್‌ಗೆ ಕೇವಲ 1 ಸ್ಟಾರ್ ನೀಡಿ ಕಾರಿನ ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತಪಡಿಸಿದೆ.
ಆಸ್ಟ್ರೇಲಿಯಾದ ಮಾದರಿಯು ಯುರೋಪಿಯನ್ ಮಾದರಿಯಂತೆಯೇ 3 ಸ್ಟಾರ್ ರೇಟಿಂಗ್ ಪಡೆಯುವ ನಿರೀಕ್ಷೆಗಳಿದ್ದವು. ಆದರೆ ಅಚ್ಚರಿಯೆಂಬಂತೆ ಕೇವಲ 1 ಸ್ಟಾರ್ ರೇಟಿಂಗ್ ಪಡೆದಿರುವುದು ಗಾಬರಿಗೊಳಿಸಿದೆ. ವಯಸ್ಕ ಪ್ರಯಾಣಿಕರ ರಕ್ಷಣೆ ಪರೀಕ್ಷೆಯಲ್ಲಿ 40 ಅಂಕಗಳಿಗೆ 18.88 ಅಂಕಗಳು, ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲಿ 49 ಅಂಕಗಳಿಗೆ 29.24 ಅಂಗಳನ್ನು ಗಳಿಸಿದೆ.

ರಸ್ತೆ ಬಳಕೆದಾರ ಸಂರಕ್ಷಣಾ ಪರೀಕ್ಷೆಯಲ್ಲಿ 63 ಅಂಕಗಳಿಗೆ 48.40 ಅಂಕಗಳು, ಸುರಕ್ಷತಾ ನೆರವು ಪರೀಕ್ಷೆಯಲ್ಲಿ 18 ಅಂಕಗಳಿಗೆ 9.78 ಅಂಕಗಳನ್ನು ನೀಡಲಾಗಿದೆ. ಈ ಅಂಕಗಳನ್ನು ಕಂಡು ಕಳವಳ ವ್ಯಕ್ತಪಡಿಸಿದ ಆಸ್ಟ್ರೇಲಿಯಾ ಎನ್‌ಸಿಎಪಿ ಸಿಇಒ,
ಸಾಮಾನ್ಯವಾಗಿ ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಗಲಿರುವ ಕಾರುಗಳಿಗೆ ಸುರಕ್ಷತಾ ನಿರ್ದಿಷ್ಟತೆ ಒಂದೇ ಆಗಿದ್ದರೆ ಯುರೋ ಎನ್‌ಸಿಎಪಿ ರೇಟಿಂಗ್‌ಗಳ ಮೇಲೆ ಪ್ರತ್ಯೇಕ ಕ್ರ್ಯಾಶ್ ಟೆಸ್ಟ್ ಅಗತ್ಯವಿಲ್ಲ.
ವಿವಿಧ ದೇಶಗಳಲ್ಲಿ ಮಾರಾಟವಾಗುವ ಸುಜುಕಿ ಕಾರುಗಳು ಒಂದೇ ರೀತಿ ಕಾಣುತ್ತಿದ್ದರೂ, ಯುರೋಪ್‌ನಲ್ಲಿ ಮಾರಾಟವಾಗಿವ ಸುಜುಕಿ ಸ್ವಿಫ್ಟ್ ಮಾದರಿಗಳಂತೆಯೇ ಒಂದೇ ಹೆಸರನ್ನು ಹೊಂದಿದ್ದರೂ ಸಹ ಕಾರುಗಳು ವಿಭಿನ್ನ ಸುರಕ್ಷತಾ ರುಜುವಾತುಗಳನ್ನು ಹೊಂದಿವೆ ಎಂದು ಬಹುತೇಕ ಖರೀದಿದಾರರಿಗೆ ತಿಳಿದಿರುವುದಿಲ್ಲ ಎಂದು ಆಸ್ಟ್ರೇಲಿಯಾ ಎನ್‌ಸಿಎಪಿ ಸಿಇಒ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತದ ವಿಷಯಕ್ಕೆ ಬಂದರೆ 4ನೇ ಜೆನ್ ಸ್ವಿಫ್ಟ್ ಅನ್ನು ಇನ್ನು ಸೇಫ್ಟಿ ಟೆಸ್ಟ್‌ಗೆ ಒಳಪಡಿಸಿಲ್ಲ, ಆದರೆ ಹೊಸ ಡಿಜೈರ್ ಗ್ಲೋಬಲ್ ಎನ್‌ಸಿಎಪಿ ಟೆಸ್ಟ್‌ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ ಅನ್ನು ಗಳಿಸಿದೆ. ಭಾರತದ 4ನೇ ಜೆನ್ ಸ್ವಿಫ್ಟ್ ಕೂಡ ಡಿಜೈರ್‌ನಂತೆಯೇ 5 ಸ್ಟಾರ್ ಸೇಫ್ಟಿ ರೇಟಿಂಗ್ ಗಳಿಸುವ ಸಾಧ್ಯತೆಯಿದೆ. ಭಾರತೀಯ ಸ್ವಿಫ್ಟ್ ಅನ್ನು ಕ್ರ್ಯಾಶ್ ಟೆಸ್ಟ್ ಮಾಡಿದ ಬಳಿಕ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








