ವಿಶ್ವದೇಶಗಳಿಗೆ ಭಾರತದ ತಾಕತ್ತು ತೋರಿಸಿದ ಸ್ವಿಚ್ ಮೊಬಿಲಿಟಿ: ಯೂರೋಪ್‌ಗೆ ಭಾರತ ನಿರ್ಮಿತ ಬಸ್!
ಅಶೋಕ್ ಲೇಲ್ಯಾಂಡ್‌ನ ಅಂಗಸಂಸ್ಥೆ ಮತ್ತು ಹಿಂದೂಜಾ ಗ್ರೂಪ್‌ನ ಭಾಗವಾಗಿರುವ ಸ್ವಿಚ್ ಮೊಬಿಲಿಟಿ ಲಿಮಿಟೆಡ್, ತನ್ನ ಎಲೆಕ್ಟ್ರಿಕ್ ಬಸ್ ಪ್ಲಾಟ್‌ಫಾರ್ಮ್ ಸ್ವಿಚ್ ಇಐವಿ 12 (SWITCH EiV12) ಅನ್ನು ಬಿಡುಗಡೆಗೊಳಿಸಿದೆ. ಇದು ಚಾಸಿಸ್-ಮೌಂಟೆಡ್ ಬ್ಯಾಟರಿಗಳೊಂದಿಗೆ ಬರುವ ಭಾರತದ ಮೊದಲ ಲೋ-ಫ್ಲೋರ್ ಸಿಟಿ ಬಸ್ ಆಗಿದ್ದು, 400+ kWh ಗಿಂತಲೂ ಹೆಚ್ಚು ಸ್ಕೇಲೆಬಲ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. 39 ಪ್ರಯಾಣಿಕ ಆಸನಗಳೊಂದಿಗೆ ಬರುವ ಈ ಎಲೆಕ್ಟ್ರಿಕ್ ಬಸ್, ನಿರ್ವಾಹಕರಿಗೆ ಗರಿಷ್ಠ ಆದಾಯವನ್ನು ತಂದುಕೊಡಲಿದೆ ಎಂದು ಸ್ವಿಚ್ ಮೊಬಿಲಿಟಿ ಭರವಸೆ ನೀಡಿದೆ.
ಈ ಹೊಸ ಸ್ವಿಚ್ ಇಐವಿ 12 ಬಸ್ ಅನ್ನು ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ, ಹಿಂದೂಜಾ ಗ್ರೂಪ್ ಕಂಪನಿಗಳ ಅಧ್ಯಕ್ಷ ಅಶೋಕ್ ಪಿ.ಹಿಂದುಜಾ ಮತ್ತು ಉದ್ಯಮದ ಪ್ರಮುಖರ ಉಪಸ್ಥಿತಿಯಲ್ಲಿ ವಾಹನವನ್ನು ಬಿಡುಗಡೆ ಮಾಡಲಾಯಿತು. ಹೊಸ ಬಸ್ ಪ್ಲಾಟ್‌ಫಾರ್ಮ್ ಅನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ. ಪರ್ಫಾಮೆನ್ಸ್, ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಸೌಕರ್ಯಗಳಲ್ಲಿ ಅಂತರಾಷ್ಟ್ರೀಯ ಮಟ್ಟವನ್ನು ಹೋಲುತ್ತದೆ.

ವಿಕಲಚೇತನ ಪ್ರಯಾಣಿಕರು ಪ್ರವೇಶಿಸಲು ಆಟೋಮ್ಯಾಟಿಕ್ ವೀಲ್‌ಚೇರ್ ರಾಂಪ್ ಮತ್ತು ಮೀಸಲಾದ ಸ್ಥಳಗಳನ್ನು ಕೂಡ ನೀಡಲಾಗಿದೆ. ಯಾವುದೇ ಬ್ಲೈಂಡ್ ಸ್ಪಾಟ್‌ಗಳಿಲ್ಲದ 5 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮಹಿಳೆಯರಿಗಾಗಿ 5 ಮೀಸಲಾದ ಆಸನಗಳನ್ನು ಒಳಗೊಂಡಿದೆ. ವಿಸ್ತಾರವಾದ ಪನಾರಮಿಕ್ ಗಾಜಿನ ಪ್ರದೇಶವು ಅದರ ವಿಭಾಗದಲ್ಲಿ ದೊಡ್ಡದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಉತ್ತಮ ಗೋಚರತೆ, ನೈಸರ್ಗಿಕವಾಗಿ ನಿರ್ಮಿಸಲಾದ ಒಳಾಂಗಣಗಳು ಮತ್ತು ವರ್ಧಿತ ಸುರಕ್ಷತೆಯನ್ನು ನೀಡುತ್ತವೆ. SWITCH iON ನಿಂದ ನಡೆಸಲ್ಪಡುವ ಟೆಲಿಮ್ಯಾಟಿಕ್ಸ್ ಸಿಸ್ಟಮ್, ರಿಯಲ್ ಟೈಮ್ ವೆಹಿಕಲ್ ಹೆಲ್ತ್ ಸೂಪರ್‌ವಿಷನ್, ITMS ಮತ್ತು ಸಮರ್ಥ ಫ್ಲೀಟ್ ನಿರ್ವಹಣೆಯನ್ನು ನೀಡುತ್ತದೆ. ಹಿಂಬದಿಯ ಡ್ಯುಯಲ್ - ಗನ್ ಚಾರ್ಜಿಂಗ್ ಇಂಟರ್ಫೇಸ್ ತ್ವರಿತ ರೀಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.

SWITCH E1 ಅನಾವರಣ: ಈ ವಿಶೇಷ ಬಸ್ ಅನ್ನು ಯುರೋಪಿಯನ್ ಮಾರುಕಟ್ಟೆಗಾಗಿ ವಿನ್ಯಾಸಗೊಳಿಸಲಾದ ಇತ್ತೀಚಿನ ಹಗುರವಾದ ಮೊನೊಕಾಕ್ ನಿರ್ಮಾಣದ ಅತ್ಯಾಧುನಿಕ ಎಂಜಿನಿಯರಿಂಗ್ ಉತ್ಪನ್ನವಾಗಿದೆ. SWITCH E1 ಇನ್-ವೀಲ್ ಮೋಟಾರ್‌ಗಳು ಮತ್ತು ಬಸ್‌ನ ಉದ್ದಕ್ಕೂ ಫ್ಲಾಟ್ ಗ್ಯಾಂಗ್‌ವೇ ವಿನ್ಯಾಸವನ್ನು ಹೊಂದಿದೆ. ಇದರ ಟ್ರಿಪಲ್-ಡೋರ್ ಕಾನ್ಫಿಗರೇಶನ್‌ನೊಂದಿಗೆ (ಮುಂಭಾಗ, ಮಧ್ಯ ಮತ್ತು ಹಿಂಭಾಗ), ತ್ವರಿತವಾಗಿ ಹತ್ತಲು ಮತ್ತು ಇಳಿಯಲು ಅನುಕೂಲವಾಗಿದೆ.
ಹಿಂದೂಜಾ ಗ್ರೂಪ್ ಆಫ್ ಕಂಪನೀಸ್ (ಭಾರತ) ಅಧ್ಯಕ್ಷ ಅಶೋಕ್ ಪಿ. ಹಿಂದುಜಾ ಮಾತನಾಡಿ, "ಈ ಬಸ್‌ಗಳು ಪ್ರಧಾನ ಮಂತ್ರಿಯವರ ಮೇಕ್ ಇನ್ ಇಂಡಿಯಾ ದೃಷ್ಟಿಗೆ ಗೌರವವಾಗಿದೆ. ಭಾರತದಲ್ಲಿ ಮತ್ತು ಭಾರತದಿಂದ ಪ್ರಪಂಚಕ್ಕಾಗಿ ತಯಾರಿಸಲ್ಪಟ್ಟಿದೆ. ಸ್ವಿಚ್ ಮೊಬಿಲಿಟಿಯು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಶೂನ್ಯ ಇಂಗಾಲದ ಹೊರಸೂಸುವಿಕೆಯೊಂದಿಗೆ ಹೊಸ ವಾಹನಗಳನ್ನು ಪ್ರಾರಂಭಿಸಲು ಪ್ರೇರೇಪಿಸಲ್ಪಟ್ಟಿದೆ ಎಂದರು.

ಸ್ವಿಚ್ ಮೊಬಿಲಿಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಬಾಬು ಮಾತನಾಡಿ, "ಸ್ವಿಚ್ ಮೊಬಿಲಿಟಿಯಲ್ಲಿ, ಭಾರತ ಮತ್ತು ಯುರೋಪ್‌ಗೆ ಎರಡು ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸಲು ನಾವು ಉತ್ಸುಕರಾಗಿದ್ದೇವೆ. ಇವೆರಡೂ ನಮ್ಮ ಜಾಗತಿಕ ಇವಿ ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾಗಿದೆ. ಈ ನಾವೀನ್ಯತೆಗಳು ಅತ್ಯಾಧುನಿಕ ಇವಿ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತವೆ.
ಅತ್ಯುತ್ತಮ ದಕ್ಷತೆ, ಸುರಕ್ಷತೆ ಮತ್ತು ಪ್ರಯಾಣಿಕರ ಸೌಕರ್ಯವನ್ನು ಒದಗಿಸುವುದು ನಮ್ಮ ಕಡಿಮೆ ಮಹಡಿಯ (ಲೋ ಫ್ಲೋರ್) ಎಲೆಕ್ಟ್ರಿಕ್ ಸಿಟಿ ಬಸ್, ಅತ್ಯುತ್ತಮ ಪವರ್‌ಫುಲ್ ಪರ್ಫಾಮೆನ್ಸ್ ಮತ್ತು ಪ್ರವೇಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇಗಾಗಲೇ 1,800 ಆರ್ಡರ್‌ಗಳನ್ನು ಗಳಿಸಿದೆ. ಇದು ಸುಸ್ಥಿರ ನಗರ ಸಾರಿಗೆ ಭವಿಷ್ಯಕ್ಕಾಗಿ ಸ್ವಿಚ್ ಮೊಬಿಲಿಟಿಯ ದೃಷ್ಟಿಯಲ್ಲಿ ಮಾರುಕಟ್ಟೆಯ ವಿಶ್ವಾಸದ ಪುರಾವೆಯಾಗಿದೆ ಎಂದರು."


Click it and Unblock the Notifications








