Tata: ಮುಂಬರುವ ಕೆಲವೇ ವಾರಗಳಲ್ಲಿ ಟಾಟಾದ ನೂತನ ಕಾರು ಬಿಡುಗಡೆ.. ಪ್ರತಿಸ್ಪರ್ಧಿಗಳಿಗೆ ನಡುಕ ಶುರು!

ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಸಂಸ್ಥೆಯಾಗಿ ಟಾಟಾ ಮೋಟಾರ್ಸ್ (Tata Motors) ಗುರುತಿಸಿಕೊಂಡಿದೆ. ಕಂಪನಿಯು ಮುಂಬರುವ ಕೆಲವೇ ವಾರಗಳಲ್ಲಿ ಹೊಚ್ಚ ಹೊಸ 'ಆಲ್ಟ್ರೋಜ್ ರೇಸರ್' ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ್ನು ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ. ಅದಕ್ಕಾಗಿ ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ನೂತನ ಆಲ್ಟ್ರೋಜ್ ರೇಸರ್ (Tata Altroz Racer) ಕಾರನ್ನು 2023ರ ಆಟೋ ಎಕ್ಸ್‌ಪೋ ಮತ್ತು ಈ ವರ್ಷ ಅದ್ದೂರಿಯಾಗಿ ನಡೆದ ಭಾರತ್ ಮೊಬಿಲಿಟಿ ಶೋನಲ್ಲಿಯೂ ಪ್ರದರ್ಶನಕ್ಕೆ ಇಡಲಾಗಿತ್ತು. ಎದುರಾಳಿಗಳಿಗೆ ಪ್ರಬಲವಾದ ಸ್ಪರ್ಧೆಯೊಡ್ಡಲು ಹೊಸ ಆಲ್ಟ್ರೋಜ್ ರೇಸರ್ ಹ್ಯಾಚ್‌ಬ್ಯಾಕ್‌ನ್ನು ಸಹ ಆಲ್ಫಾ (ಆಗೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್ - ALFA) ಪ್ಲಾಟ್‌ಫಾರ್ಮ್‌ನಡಿ ಕಂಪನಿಯು ಅಭಿವೃದ್ದಿಪಡಿಸಿದೆ ಎಂದು ತಿಳಿದುಬಂದಿದೆ.

Tata Altroz Racer Car Launch Coming Weeks Expected Design And Features Details

ಹೊಸ ಆಲ್ಟ್ರೋಜ್ ರೇಸರ್ 1.2-ಲೀಟರ್ ಟರ್ಬೋಚಾರ್ಜ್ಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 120 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 170 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಖರೀದಿಗೆ ಲಭ್ಯವಾಗಬಹುದು ಎನ್ನಲಾಗಿದೆ.

ಈ ಕಾರಿನ ಸುತ್ತಳತೆಯ ಬಗ್ಗೆ ಮಾತನಾಡುವುದಾದರೆ, 3,990 ಎಂಎಂ ಉದ್ದ (Length), 1,755 ಎಂಎಂ ಅಗಲ (Width), 1,523 ಎಂಎಂ ಎತ್ತರ (Height) ಹಾಗೂ 2,501 ಎಂಎಂ ವೀಲ್ ಬೇಸ್‌ನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ವಿನ್ಯಾಸ (ಡಿಸೈನ್)ದ ದೃಷ್ಟಿಯಿಂದಲೂ ಆಲ್ಟ್ರೋಜ್ ರೇಸರ್ ಅತ್ಯಾಧುನಿಕವಾಗಿದ್ದು, ವಿವಿಧ ಆಟೋಶೋನಲ್ಲಿ ಅನಾವರಣಗೊಳಿಸಲಾಗಿದ್ದ ಮಾದರಿಯು ಡುಯಲ್ ಟೋನ್ ಪೇಂಟ್ ಸ್ಕೀಮ್, ಎಲ್ಇಡಿ ಹೈಡ್‌ಲೈಟ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಹೊಂದಿರುವುದನ್ನು ನೋಡಬಹುದು.

Tata Altroz Racer Car Launch Coming Weeks Expected Design And Features Details

ನೂತನ ಟಾಟಾ ಆಲ್ಟ್ರೋಜ್ ರೇಸರ್ ಹ್ಯಾಚ್‌ಬ್ಯಾಕ್‌ ಹತ್ತಾರು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಬಹುದು. ಪ್ರಮುಖವಾಗಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, 7-ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 360 - ಡಿಗ್ರಿ ಕ್ಯಾಮೆರಾ ಸಿಸ್ಟಮ್, ಎಲೆಕ್ಟ್ರಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿರುವ ಸಾಧ್ಯತೆಯಿದೆ.

ಸದ್ಯ ದೇಶೀಯವಾಗಿ ಖರೀದಿಗೆ ಲಭ್ಯವಿರುವ ಸಾಮಾನ್ಯ ಟಾಟಾ ಆಲ್ಟ್ರೋಜ್ ಹ್ಯಾಚ್‌ಬ್ಯಾಕ್‌, ರೂ.6.65 ಲಕ್ಷದಿಂದ ರೂ.10.80 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಕಾರು 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 1.2-ಲೀಟರ್ ಟರ್ಬೊ ಪೆಟ್ರೋಲ್, 1.5-ಲೀಟರ್ ಡೀಸೆಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 18.50 ರಿಂದ 26.20 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

Tata Altroz Racer Car Launch Coming Weeks Expected Design And Features Details

ಆಲ್ಟ್ರೋಜ್ ಹ್ಯಾಚ್‌ಬ್ಯಾಕ್‌ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟಿಂಗ್, ಕ್ರೂಸ್ ಕಂಟ್ರೋಲ್, ಸನ್‌ರೂಫ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಕೂಡ ಹೊಂದಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌, ಆಟೋ ಪಾರ್ಕ್ ಲಾಕ್ ಮತ್ತು ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಪಡೆದಿದೆ. ಈ ಕಾರಿಗೆ ಹ್ಯುಂಡೈ ಐ20, ಮಾರುತಿ ಸುಜುಕಿ ಬಲೆನೊ ಹಾಗೂ ಟೊಯೊಟಾ ಗ್ಲಾನ್ಜಾ ಆವೃತ್ತಿಗಳು ಪ್ರಬಲ ಪ್ರತಿಸ್ಫರ್ಧಿಗಳಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, May 27, 2024, 14:21 [IST]
English summary
Tata altroz racer car launch coming weeks expected design and features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+