Tata: ನಾಳೆ ಟಾಟಾದ ಹೊಚ್ಚ ಹೊಸ ಕಾರು ಮಾರುಕಟ್ಟೆಗೆ.. ಬೆಲೆ ಎಷ್ಟು, ವಿಶೇಷತೆಗಳೇನು?
ದೇಶದಲ್ಲಿ ಸುರಕ್ಷತಾ ವಾಹನಗಳ ತಯಾರಿಕೆಗೆ ಟಾಟಾ ಮೋಟಾರ್ಸ್ (Tata Motors) ಹೆಸರುವಾಗಿದೆ. ಕಂಪನಿಯು ಮಾರಾಟಗೊಳಿಸುವ ಕಾರುಗಳು ಗರಿಷ್ಠ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಗ್ರಾಹಕರು ಸಹ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, ಮಧ್ಯಮ ವರ್ಗದ ಜನರಿಗಾಗಿ ವಿನೂತನ ವಿನ್ಯಾಸ ಹಾಗೂ ಶಕ್ತಿಯುತ ಎಂಜಿನ್ ಒಳಗೊಂಡಿರುವ ಹೊಚ್ಚ ಹೊಸ ಆಲ್ಟ್ರೋಜ್ ರೇಸರ್ (Altroz Racer) ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ್ನು ನಾಳೆ (ಜೂನ್.7) ಅದ್ದೂರಿಯಾಗಿ ಪರಿಚಯಿಸಲಿದೆ. ಇಲ್ಲಿ ಈ ಕಾರಿನ ನಿರೀಕ್ಷಿತ ಬೆಲೆ, ವೈಶಿಷ್ಟ್ಯ (ಫೀಚರ್ಸ್) ಹಾಗೂ ವಿನ್ಯಾಸ (ಡಿಸೈನ್)ದ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.
ಟಾಟಾ ಮೋಟಾರ್ಸ್ ಕಳೆದ ಬುಧವಾರ (ಮೇ.30) ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ನೂತನ 'ಆಲ್ಟ್ರೋಜ್ ರೇಸರ್' ಕಾರಿನ ಟೀಸರ್ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಇದು ಹ್ಯಾಚ್‌ಬ್ಯಾಕ್‌ನ ಹೊರಭಾಗದ ವಿನ್ಯಾಸದ ಬಗ್ಗೆ ಒಂದಷ್ಟು ಬೆಳಕನ್ನು ಚೆಲ್ಲುತ್ತಿತ್ತು. ಈ ವಿಡಿಯೋದಲ್ಲಿ ತೋರಿಸಲಾದ ಮಾದರಿಯು ಡುಯಲ್-ಟೋನ್ ಪೇಂಟ್ ಸ್ಕೀಮ್ (ಬಣ್ಣದ ಆಯ್ಕೆ) ಹೊಂದಿತ್ತು. ಜೊತೆಗೆ ಶಾರ್ಕ್-ಫಿನ್ ಆಂಟೆನಾ ಮತ್ತು ಫ್ರಂಟ್ (ಮುಂಭಾಗ) ಫೆಂಡರ್‌ನಲ್ಲಿ 'ರೇಸರ್' ಬ್ಯಾಡ್ಜಿಂಗ್ ಪಡೆದಿರುವುದನ್ನು ನೋಡಬಹುದಾಗಿತ್ತು.

ಹೊಸ ಟಾಟಾ ಆಲ್ಟ್ರೋಜ್ ರೇಸರ್ (Tata Altroz Racer) ಕಾರು ಅವೆನ್ಯೂ ವೈಟ್, ಅಟಾಮಿಕ್ ಆರೆಂಜ್ ಹಾಗೂ ಪ್ಯೂರ್ ಗ್ರೇ ಎಂಬ ಡುಯಲ್-ಟೋನ್ ಬಣ್ಣಗಳನ್ನು ಕೂಡ ಪಡೆದಿರಲಿದೆ ಎಂದು ತಿಳಿದುಬಂದಿದೆ. ಹಾಗೆಯೇ ಆರ್1, ಆರ್2 ಮತ್ತು ಆರ್3 ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿಯೂ ಖರೀದಿಗೆ ದೊರೆಯುವ ಸಾಧ್ಯತೆಯಿದೆ. ಈ ಹ್ಯಾಚ್‌ಬ್ಯಾಕ್‌ನ್ನು ಕಂಪನಿಯು ಆಲ್ಫಾ (ಆಗೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್ - ALFA) ಪ್ಲಾಟ್‌ಫಾರ್ಮ್‌ನಡಿ ತಯಾರಿಸಿದೆ ಎಂದು ವರದಿಯಾಗಿದೆ.
ಈ ಕಾರು ಶಕ್ತಿಯುತ ಪವರ್‌ಟ್ರೇನ್‌ನೊಂದಿಗೆ ಖರೀದಿದಾರರಿಗೆ ಲಭ್ಯವಾಗಲಿದೆ. ಇದು 1.2-ಲೀಟರ್ 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆದಿರಲಿದ್ದು, 120 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 170 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. 5-ಸ್ಪೀಡ್ ಮ್ಯಾನುವಲ್ ಹಾಗೂ ಡಿಸಿಎ (ಡುಯಲ್ ಕ್ಲಚ್ ಆಟೋಮೇಟಿಕ್) ಗೇರ್‌ಬಾಕ್ಸ್‌ನೊಂದಿಗೂ ಸಿಗಬಹುದು ಎಂದು ಹೇಳಲಾಗಿದೆ.

ನೂತನ ಟಾಟಾ ಆಲ್ಟ್ರೋಜ್ ರೇಸರ್ ಮಾದರಿಯು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ವೈರ್‌ಲೆಸ್ ಚಾರ್ಜರ್, ಏರ್ ಪ್ಯೂರಿಫೈಯರ್, ಸನ್‌ರೂಫ್, 360 - ಡಿಗ್ರಿ ಸರೌಂಡ್ ಕ್ಯಾಮೆರಾ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿರಬಹುದು ಎನ್ನಲಾಗಿದೆ.
ಹ್ಯುಂಡೈ ಐ20 ಎನ್-ಲೈನ್ ಹ್ಯಾಚ್‌ಬ್ಯಾಕ್‌ಗೆ ನೇರ ಪ್ರತಿಸ್ಪರ್ಧಿಯಾಗಿರುವ ಈ ಟಾಟಾ ಆಲ್ಟ್ರೋಜ್ ರೇಸರ್, ರೂ.9.8 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ದೇಶೀಯವಾಗಿ ಲಭ್ಯವಿರುವ ಸಾಮಾನ್ಯ ಆಲ್ಟ್ರೋಜ್ ಆವೃತ್ತಿಯು ರೂ.6.65 ಲಕ್ಷದಿಂದ ರೂ.10.80 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ.
ಈ ಟಾಟಾ ಆಲ್ಟ್ರೋಜ್ ರೂಪಾಂತರಗಳು 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 1.2-ಲೀಟರ್ ಟರ್ಬೊ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿವೆ. 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ಒಳಗೊಂಡಿದ್ದು, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








