ಲೀಕ್ ಆಯ್ತು ಹೊಸ ಟಾಟಾ ರೇಸರ್ ಎಡಿಷನ್: ಹ್ಯುಂಡೈ i20ಗೆ ನಡುಕ ಶುರು! ಜೂನ್ 7 ಬಿಡುಗಡೆ
ಗಮನಾರ್ಹ ಪರ್ಫಾಮೆನ್ಸ್, ರೇಸ್ ಪ್ರೇರಿತ ಸ್ಟೈಲಿಂಗ್ ಮತ್ತು ಸೆಗ್ಮೆಂಟ್‌ನಲ್ಲೇ ಮೊದಲ ವಿಶೇಷ ವೈಶಿಷ್ಟ್ಯಗಳೊಂದಿಗೆ ಟಾಟಾ ಆಲ್ಟ್ರೋಜ್ ರೇಸರ್ ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು ಜೂನ್ 7 ರಂದು ಬಿಡುಗಡೆಯಾಗುವ ಮೊದಲೇ, ಆಲ್ಟ್ರೋಜ್ ರೇಸರ್ ಎಡಿಷನ್ ಬ್ರೋಷರ್ ಸೋರಿಕೆಯಾಗಿದೆ. ಇದರಲ್ಲಿ ಫೀಚರ್‌ಗಳು, ವೇರಿಯೆಂಟ್‌ಗಳು ಸೇರಿದಂತೆ ಇಂಟೀರಿಯರ್ ಬಗ್ಗೆ ಬಹುತೇಕ ಮಾಹಿತಿ ಬಹಿರಂಗವಾಗಿದೆ. ಮಾರುತಿ ಸುಜುಕಿ ಬಲೆನೊ, ಟೊಯೊಟಾ ಗ್ಲಾಂಝಾ, ಹ್ಯುಂಡೈ i20 ಎನ್‌ಲೈನ್‌ಗೆ ಪ್ರತಿಸ್ಪರ್ಧಿಯಾದ ಟಾಟಾ ಆಲ್ಟ್ರೋಜ್ ರೇಸರ್, ಯಾವೆಲ್ಲಾ ವಿಶೇಷತೆಗಳೊಂದಿಗೆ ಬರಲಿದೆ ಎಂದಬುನ್ನು ಇಲ್ಲಿ ವಿವರವಾಗಿ ತಿಳಿಯೋಣ.
ಸ್ಪೋರ್ಟಿ ಡಿಸೈನ್: ಟಾಟಾ ಆಲ್ಟ್ರೋಜ್ ರೇಸರ್ ಹೊಸ ರೇಸಿಂಗ್ ಪ್ರೇರಿತ ಬಣ್ಣವನ್ನು ಪಡೆಯಲಿದೆ, ಅತ್ಯಾಕರ್ಷಕ ಡ್ಯುಯಲ್ ಟೋನ್ ಆರೆಂಜ್ ಮತ್ತು ಬ್ಲಾಕ್ ಥೀಮ್ ಅನ್ನು ಒಳಗೊಂಡಿದೆ. ಮತ್ತೊಂದು ಪ್ರಮುಖ ಹೈಲೈಟ್ ಎಂದರೆ ಬಾನೆಟ್ ಮತ್ತು ರೂಫ್ ಮೇಲೆ ವೈಟ್ ರೇಸಿಂಗ್ ಪಟ್ಟಿಗಳು ಕಾರಿಗೆ ಸ್ಪೋರ್ಟಿ ಲುಕ್ ನೀಡಲಿವೆ. ಹೊಸ ಆಲ್ಟ್ರೋಜ್ ರೇಸರ್ ಕಾರು' ಅಟಾಮಿಕ್ ಆರೆಂಜ್, ಅವೆನ್ಯೂ ವೈಟ್ ಮತ್ತು ಪ್ಯೂರ್ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿರಲಿದೆ.

ಸ್ಪೋರ್ಟಿ ಇಂಟೀರಿಯರ್: ಇಂಟೀರಿಯರ್‌ನಲ್ಲೂ ಅದೇ ಆರೆಂಜ್ ಬ್ಲಾಕ್ ಥೀಮ್ ಬಳಸಲಾಗಿದೆ. ಎಸಿ ವೆಂಟ್‌ಗಳು ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಆರೆಂಜ್ ಹೈಲೈಟ್‌ಗಳನ್ನು ಕಾಣಬಹುದು. ಸೀಟ್‌ಗಳು ಕೂಡ ಆರೆಂಜ್ ಮತ್ತು ವೈಟ್ ಬಣ್ಣದಲ್ಲಿ ರೇಸಿಂಗ್ ಪಟ್ಟಿಗಳನ್ನು ಹೊಂದಿವೆ. ಸೀಟ್‌ಗಳು, ಮುಂಭಾಗದ ಆರ್ಮ್‌ರೆಸ್ಟ್ ಮತ್ತು ಲೆದರ್ ಸ್ಟೀರಿಂಗ್ ವ್ಹೀಲ್ ಮೇಲೆ ಕಾಂಟ್ರಾಸ್ಟ್ ಕಲರ್ ಹೊಲಿಗೆಯು ಸ್ಪೋರ್ಟಿಯಾಗಿ ಕಾಣುತ್ತದೆ.
ಆಕರ್ಷಕ ಪೀಚರ್ಸ್: ಹೊಸ ಟಾಟಾ ಆಲ್ಟ್ರೋಜ್ ರೇಸರ್‌ನಲ್ಲಿ 10.25 ಇಂಚಿನ ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಅನ್ನು ನೆಕ್ಸಾನ್‌ನಿಂದ ಎರವಲು ಪಡೆಯಲಾಗಿದೆ. ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ವಾಯಿಸ್ ಕಮಾಂಡ್‌ನೊಂದಿಗೆ ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಇತರ ಪ್ರಮುಖ ಹೈಲೈಟ್‌ಗಳಾಗಿವೆ.

ಎಂಜಿನ್: ಆಲ್ಟ್ರೊಜ್‌ನ ಸ್ಟ್ಯಾಂಡರ್ಡ್ ವೇರಿಯೆಂಟ್‌ಗಳಲ್ಲಿ, ಆಲ್ಟ್ರೋಜ್ ಐ-ಟರ್ಬೊ ಅತ್ಯಂತ ಶಕ್ತಿಯುತ ಪೆಟ್ರೋಲ್ ಆಯ್ಕೆಯಾಗಿದೆ. ಇದರ 1.2 ಲೀಟರಿನ ಐ-ಟರ್ಬೊ 3 ಸಿಲಿಂಡರ್ ಪೆಟ್ರೋಲ್ ಎಂಜಿನ್, 110 ಬಿಹೆಚ್‌ಪಿ ಪವರ್ ಹಾಗೂ 140 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಆದರೆ ರೇಸರ್ ಆವೃತ್ತಿಯು ನೆಕ್ಸಾನ್‌ನ 1.2-ಲೀಟರ್ ಟರ್ಬೊ ಪೆಟ್ರೋಲ್ ಘಟಕವನ್ನು ಹೊಂದಿದ್ದು, ಇದು 120 ಪಿಎಸ್ ಪವರ್ ಮತ್ತು 170 ಎನ್ಎಂ ಟಾರ್ಕ್ ಹೊರಹಾಕುತ್ತದೆ.
ಪ್ರತಿಸ್ಪರ್ಧಿ ಹ್ಯುಂಡೈ i20 ಎನ್‌ಲೈನ್ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 120 ಪಿಎಸ್ ಪವರ್ ಮತ್ತು 172 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6-ಸ್ಪೀಡ್ ಎಂಟಿ ಅಥವಾ 7-ಸ್ಪೀಡ್ ಡಿಸಿಟಿಯೊಂದಿಗೆ ಬರುತ್ತದೆ. ಆಲ್ಟ್ರೋಜ್ ರೇಸರ್ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಪಡೆಯಲಿದೆ. ಆಟೋಮ್ಯಾಟಿಕ್ ಆಯ್ಕೆಯನ್ನು ನೀಡಲಾಗಿಲ್ಲ.

5-ಸ್ಟಾರ್ ರೇಟಿಂಗ್: ಸುರಕ್ಷತೆಯ ವಿಚಾರಕ್ಕೆ ಬಂದರೆ ಸ್ಟ್ಯಾಂಡರ್ಡ್ ಆಲ್ಟ್ರೊಜ್ ನಂತೆಯೇ ರೇಸರ್ ಎಡಿಷನ್ ಕೂಡ ಗ್ಲೋಬಲ್ ಎನ್‌ಸಿಎಪಿನಿಂದ 5-ಸ್ಟಾರ್ ರೇಟಿಂಗ್ ಪಡೆದಿರುತ್ತದೆ. ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಪಾರ್ಕಿಂಗ್ ಸೆನ್ಸಾರ್‌ಗಳು, 360° ಸರೌಂಡ್ ವ್ಯೂ ಕ್ಯಾಮೆರಾ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಒಳಗೊಂಡಿರುತ್ತದೆ. ಬೆಲೆಗಳನ್ನು ಜೂನ್ 7 ರಂದು ಬಿಡುಗಡೆ ಸಮಾರಂಭದಲ್ಲಿ ಘೋಷಿಸಲಾಗುವುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








