ಬೇರೆ ಕಾರುಗಳಿಗೆ ಹೇಳಿ ಟಾ...ಟಾ: ಕಡಿಮೆ ಬೆಲೆಗೆ ವೆಂಟಿಲೇಟೆಡ್ ಸೀಟ್ ಇರುವ ಕಾರನ್ನು ಲಾಂಚ್ ಮಾಡಿದ ಟಾಟಾ
ಕಾರುಗಳಲ್ಲಿ ಗ್ರಾಹಕರ ಅನುಕೂಲತೆಗಳನ್ನು ಹೆಚ್ಚಿಸಲೆಂದು ಕೊಡುವ ಹಲವಾರು ಫೀಚರ್‌ಗಳು ಭಾರತೀಯ ಗ್ರಾಹಕರಿಗೆ ವಿಪರೀತವಾಗಿ ಇಷ್ಟವಾಗಿ ಬಿಡುತ್ತವೆ. ಉದಾಹರಣೆಗೆ ನೋಡುವುದಾದರೆ, ಸನ್‌ರೂಫ್. ಇತ್ತೀಚಿನ ದಿನಗಳಲ್ಲಿ ಸನ್‌ರೂಫ್ ಇಲ್ಲದಿರುವ ಕಾರುಗಳನ್ನು ಭಾರತೀಯರು ಇಷ್ಟಪಡುವುದೇ ಇಲ್ಲ ಎಂದರೆ ತಪ್ಪಾಗಲಾರದು. ಅದೇ ರೀತಿ ಭಾರತೀಯರು ಹೆಚ್ಚಾಗಿ ಇಷ್ಟಪಡುವ ಮತ್ತೊಂದು ಫೀಚರ್ ಎಂದರೆ ಅದು ವೆಂಟಿಲೇಟೆಡ್ ಸೀಟ್‌ಗಳು. ದುಬಾರಿ ಕಾರುಗಳಲ್ಲಿ ಕಂಡು ಬರುತ್ತಿದ್ದ ಈ ಫೀಚರ್ ಇದೀಗ ಮಧ್ಯಮ ವರ್ಗದ ಕಾರುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಅತೀ ಕಡಿಮೆ ಬೆಲೆಯಲ್ಲಿ ವೆಂಟಿಲೇಟೆಡ್ ಸೀಟ್ಸ್ ಸಿಗುವ ಕಾರೊಂದು ಬಿಡುಗಡೆಯಾಗಿದ್ದು ಅದರ ಬಗ್ಗೆ ನೋಡೋಣ.
ಇತ್ತೀಚೆಗಷ್ಟೇ ಟಾಟಾ ಮೋಟಾರ್ಸ್ ಮಾರುಕಟ್ಟೆಗೆ ಟಾಟಾ ಆಲ್ಟ್ರೋಜ್ ಕಾರಿನ ರೇಸರ್ ಆವೃತ್ತಿಯನ್ನು ಲಾಂಚ್ ಮಾಡಿತ್ತು. ಈ ಕಾರು ಸಾಮಾನ್ಯ ಆಲ್ಟ್ರೋಜ್ ಕಾರಿಗಿಂತ ಹೆಚ್ಚಿನ ಪವರ್ ಮತ್ತು ಫೀಚರ್‌ಗಳನ್ನು ಹೊಂದಿದೆ. ಇದರಲ್ಲಿ ಪ್ರಮುಖವಾದುದು ವೆಂಟಿಲೇಟೆಡ್ ಸೀಟ್‌ಗಳು. ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ಈ ಕಾರು ವೆಂಟಿಲೇಟೆಡ್ ಸೀಟ್‌ಗಳನ್ನು ಪಡೆದುಕೊಂಡಿದೆ.

ಈ ಕಾರಿನ (TATA Altroz Racer) ಇತರ ಫೀಚರ್‌ಗಳನ್ನು ನೋಡುವುದಾದರೆ, ಇದು ರೇಸ್ ಪ್ರೇರಿತ ಸ್ಟೈಲಿಂಗ್, ಪವರ್‌ಫುಲ್ ಪರ್ಫಾಮೆನ್ಸ್ ಜೊತೆಗೆ ವಿಶೇಷ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಹೊಸ ಟಾಟಾ ಆಲ್ಟ್ರೋಜ್ ರೇಸರ್ 9,49,000 ರೂ.ಗೆ (ಎಕ್ಸ್ ಶೋರೂಂ) ಖರೀದಿಗೆ ಲಭ್ಯವಿದೆ. ಇದರ ಟಾಪ್ ಎಂಡ್ ಮಾಡಲ್ 9,98,900 ರೂ. ಬೆಲೆಯಿದೆ.
ಈ ಕಾರಿನ ಇತರ ಫೀಚರ್‌ಗಳನ್ನು ನೋಡುವುದಾದರೆ ಇದರಲ್ಲಿ ನಮಗೆ 360 ಡಿಗ್ರಿ ಕ್ಯಾಮೆರಾ, 10.25 ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ವೆಂಟಿಲೇಟೆಡ್ ಸೀಟ್‌ಗಳು ಮತ್ತು 6 ಏರ್‌ಬ್ಯಾಗ್‌ಗಳೊಂದಿಗೆ (ರೇಸರ್‌ನಲ್ಲಿ ಸ್ಟ್ಯಾಂಡರ್ಡ್) ಆಲ್ಟ್ರೊಜ್‌ನ ಲೈನ್ ಆವೃತ್ತಿಯ ಅಗ್ರಸ್ಥಾನದಲ್ಲಿದೆ. ಇದು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಒದಗಿಸುವ ಏಕೈಕ ಹ್ಯಾಚ್‌ಬ್ಯಾಕ್ ಆಗಿದ್ದು, ಹೆದ್ದಾರಿಗಳಲ್ಲಿ ಉತ್ಸಾಹಭರಿತ ಚಾಲನಾ ಅನುಭವ ನೀಡಲಿದೆ ಎಂದು ಟಾಟಾ ಹೇಳಿದೆ.

ಟಾಟಾ ಆಲ್ಟ್ರೋಜ್ ರೇಸರ್ ಹೊಸ ರೇಸಿಂಗ್ ಪ್ರೇರಿತ ಬಣ್ಣವನ್ನು ಪಡೆದಿದೆ, ಅತ್ಯಾಕರ್ಷಕ ಡ್ಯುಯಲ್ ಟೋನ್ ಆರೆಂಜ್ ಮತ್ತು ಬ್ಲಾಕ್ ಥೀಮ್ ಅನ್ನು ಒಳಗೊಂಡಿದೆ. ಮತ್ತೊಂದು ಪ್ರಮುಖ ಹೈಲೈಟ್ ಎಂದರೆ ಬಾನೆಟ್ ಮತ್ತು ರೂಫ್ ಮೇಲೆ ವೈಟ್ ರೇಸಿಂಗ್ ಪಟ್ಟಿಗಳು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ. ಹೊಸ ಆಲ್ಟ್ರೋಜ್ ರೇಸರ್ ಕಾರು' ಅಟಾಮಿಕ್ ಆರೆಂಜ್, ಅವೆನ್ಯೂ ವೈಟ್ ಮತ್ತು ಪ್ಯೂರ್ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.
ಆಲ್ಟ್ರೊಜ್ ರೇಸರ್ 3 ರೂಪಾಂತರಗಳು (R1, R2 ಮತ್ತು R3) ಮೂರು ಬಣ್ಣಗಳ ಆಯ್ಕೆಯೊಂದಿಗೆ (ಪ್ಯೂರ್ ಗ್ರೇ, ಅಟಾಮಿಕ್ ಆರೆಂಜ್ ಮತ್ತು ಅವೆನ್ಯೂ ವೈಟ್) ಲಭ್ಯವಿದೆ. ಇದಲ್ಲದೆ, Altroz ಲೈನ್ ಅಪ್ ಅನ್ನು ಹೆಚ್ಚಿಸಿ, ಟಾಟಾ ಮೋಟಾರ್ಸ್ ಎರಡು ಹೊಸ ರೂಪಾಂತರಗಳನ್ನು (XZ LUX ಮತ್ತು XZ+S LUX) ಪರಿಚಯಿಸಿದೆ. ಹಾಗೆಯೇ ಅದರ Altroz ಶ್ರೇಣಿಯಲ್ಲಿ ಒಂದು ರೂಪಾಂತರವನ್ನು (XZ+OS) ನವೀಕರಿಸಿದೆ.

ಈ ಎರಡು ಹೊಸ ಹೆಚ್ಚುವರಿ ರೂಪಾಂತರಗಳು ಪೆಟ್ರೋಲ್ ಮ್ಯಾನುಯಲ್, ಪೆಟ್ರೋಲ್ DCA, ಡೀಸೆಲ್ ಮತ್ತು CNG ಪವರ್‌ಟ್ರೇನ್‌ಗಳ ಆಯ್ಕೆಯಲ್ಲಿ ಲಭ್ಯವಿರುತ್ತವೆ. ಮಾರುತಿ ಸುಜುಕಿ ಬಲೆನೊ, ಟೊಯೊಟಾ ಗ್ಲಾಂಝಾ, ಹ್ಯುಂಡೈ i20 ಎನ್‌ಲೈನ್‌ಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಟಾಟಾ ಆಲ್ಟ್ರೋಜ್ ರೇಸರ್ ಬಿಡುಗಡೆಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








