TATA: 1,297 ಬಸ್‌ಗಳನ್ನು ಪೂರೈಸಲು ಬೃಹತ್ ಆರ್ಡರ್ ಬಾಚಿಕೊಂಡ ಟಾಟಾ!

ಭಾರತದ ಅತಿದೊಡ್ಡ ವಾಣಿಜ್ಯ ವಾಹನ (Commercial Vehicle) ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಗುರುತಿಸಿಕೊಂಡಿದೆ. ಕಂಪನಿಯು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಯುಪಿಎಸ್‌ಆರ್‌ಟಿಸಿ) 1,297 ಬಸ್‌ಗಳನ್ನು ಪೂರೈಸಲು ಬೃಹತ್ ಆರ್ಡರ್ ಪಡೆದುಕೊಂಡಿದೆ. ಈ ಬಸ್‌ಗಳನ್ನು ಸಾರಿಗೆ ನಿಗಮಕ್ಕೆ ಹಂತ - ಹಂತವಾಗಿ ಹಸ್ತಾಂತರ ಮಾಡಲಿದೆ. ಇದರೊಂದಿಗೆ ಈ ವರ್ಷ ಉ.ಪ್ರದೇಶ ಸಾರಿಗೆ ನಿಗಮ ಟಾಟಾ ಮೋಟಾರ್ಸ್‌ಗೆ ಒಟ್ಟು 3,500 ಬಸ್‌ಗಳನ್ನು ಒದಗಿಸಲು ಆರ್ಡರ್ ನೀಡಿದಂತೆ ಆಗಿದೆ.

ಟಾಟಾ ಮೋಟಾರ್ಸ್, ವಿಶೇಷವಾಗಿ ಎಲ್‌ಪಿಒ 1618 ಡೀಸೆಲ್ (LPO 1618 Diesel) ಬಸ್‌ಗಳ ಚಾಸಿಸ್‌ಗಳನ್ನು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಪೂರೈಕೆ ಮಾಡಲಿದೆ. ಇವು ಹತ್ತಿರದ ನಗರ ಹಾಗೂ ದೂರದ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿದ್ದು, ಉತ್ತಮವಾದ ಕಾರ್ಯಕ್ಷಮತೆಯನ್ನು ಹೊಂದಿವೆ.

Tata Bags Orders Of 1 297 Bus From UPSRTC Details

ಈ ಬಗ್ಗೆ ಟಾಟಾ ಮೋಟಾರ್ಸ್ ಹಿರಿಯ ಅಧಿಕಾರಿ ಆನಂದ್ ಎಸ್ ಪ್ರತಿಕ್ರಿಯೆ ನೀಡಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ. 'ಬಸ್‌ಗಳ ಚಾಸಿಸ್‌ನ್ನು ಪೂರೈಸಲು ಅವಕಾಶ ನೀಡಿದ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಯುಪಿಎಸ್‌ಆರ್‌ಟಿಸಿ) ಧನ್ಯವಾದ ಅರ್ಪಿಸುತ್ತೇವೆ. ಸಾರಿಗೆ ನಿಗಮದ ಮಾರ್ಗದರ್ಶನದಂತೆ ಬಸ್‌ಗಳ ಚಾಸಿಸ್‌ನ್ನು ಒದಗಿಸಲಿದ್ದೇವೆ' ಎಂದು ಹೇಳಿದ್ದಾರೆ.

ಟಾಟಾ ಮೋಟಾರ್ಸ್, ಉ.ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 2023ರ ಡಿಸೆಂಬರ್‌ನಲ್ಲಿ 1,350 ಯುನಿಟ್‌ ಮತ್ತು 2024ರ ಅಕ್ಟೋಬರ್‌ನಲ್ಲಿ 1,000 ಯುನಿಟ್‌ ಬಸ್‌ಗಳನ್ನು ಪೂರೈಸಲು ಆರ್ಡರ್ ಪಡೆದುಕೊಂಡಿತ್ತು. ಈಗ ಮೂರನೇ ಬಾರಿಗೆ ಬೃಹತ್ ಸಂಖ್ಯೆ 1,297 ಯುನಿಟ್‌ ಬಸ್‌ಗಳನ್ನು ಒದಗಿಸಲು ಒಡಂಬಡಿಕೆ ಮಾಡಿಕೊಂಡಿದೆ.

Tata Bags Orders Of 1 297 Bus From UPSRTC Details

ಟಾಟಾದಂತೆ ವಾಣಿಜ್ಯ ವಾಹನ ಮಾರಾಟದಲ್ಲಿ ಅಶೋಕ್ ಲೇಲ್ಯಾಂಡ್ (Ashok Leyland) ಕೂಡ ಮುಂಚೂಣಿಯಲ್ಲಿದೆ. ಹಲವು ಸಾರಿಗೆ ನಿಗಮಗಳಿಗೆ ಬಸ್‌ಗಳನ್ನು ಒದಗಿಸುತ್ತಿದೆ. ಈ ಹಿಂದೆ, ಜನವರಿಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಗಳಿಂದ 1,225 ಬಸ್‌ಗಳನ್ನು ಪೂರೈಸಲು ಆರ್ಡರ್ ಪಡೆದುಕೊಂಡಿತ್ತು. ರಾಜ್ಯದ ವಿವಿಧ ನಿಗಮಗಳಲ್ಲಿ ಕಂಪನಿಯ 11,680 ಬಸ್‌ಗಳು ಓಡಾಟ ನಡೆಸುತ್ತಿವೆ.

ಅದಕ್ಕೂ ಮೊದಲು ಅಶೋಕ್ ಲೇಲ್ಯಾಂಡ್, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೊಂದಿಗೆ (ಎಂಎಸ್‌ಆರ್‌ಟಿಸಿ) ಭಾರೀ ಸಂಖ್ಯೆಯಲ್ಲಿ ಬಸ್‌ಗಳನ್ನು ಒದಗಿಸಲು ಒಪ್ಪಂದ ಮಾಡಿಕೊಂಡಿತ್ತು. ಇದರ ಭಾಗವಾಗಿ 2,104 ಬಸ್‌ಗಳನ್ನು ಕಂಪನಿಯು ಹಂತ - ಹಂತವಾಗಿ ವಿತರಣೆ ಮಾಡಲಿದೆ. ಪ್ರಸ್ತುತ ಮಹಾರಾಷ್ಟ್ರ ಸಾರಿಗೆ ಸಂಸ್ಥೆ ದೇಶದಲ್ಲಿಯೇ ಅತಿ ಹೆಚ್ಚು 15,000 ಬಸ್‌ಗಳನ್ನು ಹೊಂದಿದೆ.

ಕಳೆದ ಅಕ್ಟೋಬರ್‌ನಲ್ಲಿ ಚೆನ್ನೈ ಮಹಾನಗರ ಸಾರಿಗೆ ಸಂಸ್ಥೆಗೆ 500 ಇ-ಬಸ್‌ಗಳನ್ನು ಪೂರೈಕೆ ಮಾಡಲು ಅಶೋಕ್ ಲೇಲ್ಯಾಂಡ್ ಅಂಗಸಂಸ್ಥೆ 'ಒಹೆಚ್ಎಂ ಗ್ಲೋಬಲ್ ಮೊಬಿಲಿಟಿ' ಒಡಂಬಡಿಕೆ ಮಾಡಿಕೊಂಡಿತ್ತು. ಕಂಪನಿ ಒದಗಿಸಲಿರುವ ಹೊಸ 'ಇಐವಿ12' ಹೆಸರಿನ ಎಲೆಕ್ಟ್ರಿಕ್ ಬಸ್‌ಗಳು, ಸಾಕಷ್ಟು ಅತ್ಯಾಧುನಿಕವಾಗಿವೆ. ಭರ್ತಿ ಚಾರ್ಜ್‌ನಲ್ಲಿ 200 ಕಿ.ಮೀ ವರೆಗೂ ರೇಂಜ್ (ಮೈಲೇಜ್) ನೀಡಲಿದ್ದು, ಬರೋಬ್ಬರಿ 37 ಆಸನಗಳನ್ನು ಹೊಂದಿವೆ. ಜೊತೆಗೆ ಈ ಬಸ್‌ಗಳಲ್ಲಿ 24 ಜನರು ನಿಂತುಕೊಂಡು ಪ್ರಯಾಣಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, December 19, 2024, 12:33 [IST]
English summary
Tata bags orders of 1297 bus from upsrtc details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+