Tata: ಗುಡ್‌ನ್ಯೂಸ್.. ಟಾಟಾದಿಂದ ಭಾರೀ ರಿಯಾಯಿತಿ ಘೋಷಣೆ.. 4,99 ಲಕ್ಷಕ್ಕೆ ಹೊಸ ಕಾರು!
ಭಾರತದ ಪ್ರಮುಖ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಿಯಾಗೊ, ಟಿಗೂರ್, ಆಲ್ಟ್ರೋಜ್, ಪಂಚ್, ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಕಾರುಗಳಿಗೆ ಈ ನವೆಂಬರ್‌ನಲ್ಲಿ ಭರ್ಜರಿ ಹಣಕಾಸಿನ ಪ್ರಯೋಜನಗಳನ್ನು ಘೋಷಣೆ ಮಾಡಿದೆ. ಆದರೆ, ಕೆಲವೇ ತಿಂಗಳ ಹಿಂದೆ ಬಿಡುಗಡೆಯಾಗಿದ್ದ 'ಕರ್ವ್' ಕಾರಿಗೆ ಯಾವುದೇ ರಿಯಾಯಿತಿ ನೀಡಲಾಗಿಲ್ಲ. ಬನ್ನಿ.. ಯಾವ ಕಾರು ಎಷ್ಟು 'ಡಿಸ್ಕೌಂಟ್ ಆಫರ್' ಹೊಂದಿದೆ ಎಂಬುದನ್ನು ತಿಳಿಯೋಣ.
ಮೊದಲಿಗೆ ಜನಪ್ರಿಯ ಟಾಟಾ ಟಿಯಾಗೊ (Tata Tiago) ಹ್ಯಾಚ್‌ಬ್ಯಾಕ್ ಹೊಂದಿರುವ ಹಣಕಾಸಿನ ಪ್ರಯೋಜನಗಳ ಬಗ್ಗೆ ಮಾತನಾಡೋಣ. ಈ ಕಾರಿನ 2024ರ ರೂಪಾಂತರಗಳು (ವೇರಿಯೆಂಟ್), ರೂ.15,000 ರಿಂದ ರೂ.25,000 ವರೆಗೆ ರಿಯಾಯಿತಿ ಹೊಂದಿವೆ. ಸದ್ಯ, ಹೊಚ್ಚ ಹೊಸ ಟಿಯಾಗೊ ಕಾರು ರೂ.4,99 ರಿಂದ ರೂ.8.75 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.

ಟಾಟಾ ಟಿಗೊರ್ (Tigor) ಪ್ರಖ್ಯಾತ ಸೆಡಾನ್ ಆಗಿ ಹೊರಹೊಮ್ಮಿದೆ. ಈ ಕಾರಿನ 2024ರ ಪೆಟ್ರೋಲ್ ಮತ್ತು ಸಿಎನ್‌ಜಿ ಚಾಲಿತ ರೂಪಾಂತರಗಳು, ರೂ.25,000 ರಿಂದ ರೂ.45,000 ವರೆಗೆ ರಿಯಾಯಿತಿ ಒಳಗೊಂಡಿವೆ. ನೂತನ ಟಿಗೊರ್ ಸೆಡಾನ್ ರೂ.6 ಲಕ್ಷದಿಂದ ರೂ.9.40 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ.
ಹೊಸ ಟಾಟಾ ಆಲ್ಟ್ರೋಜ್ (Tata Altroz) ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದು, ಈ ನವೆಂಬರ್‌ನಲ್ಲಿ ಭರ್ಜರಿ ಹಣಕಾಸಿನ ಪ್ರಯೋಜನಗಳನ್ನು ಒಳಗೊಂಡಿದೆ. ಇದರ ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ರೂಪಾಂತರಗಳು, ರೂ.15,000 ರಿಂದ 65,000 ವರೆಗೆ ರಿಯಾಯಿತಿ ಹೊಂದಿವೆ. ಈ ಕಾರು ರೂ.6.50 ರಿಂದ ರೂ.11.16 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ.

ಜನಪ್ರಿಯ ಮೆಕ್ರೋ ಎಸ್‌ಯುವಿ ಟಾಟಾ ಪಂಚ್ (Punch) ಕೂಡ ಉತ್ತಮ ರಿಯಾಯಿತಿ ಹೊಂದಿದೆ. ಈ ಕಾರಿನ ಪೆಟ್ರೋಲ್ ಮತ್ತು ಸಿಎನ್‌ಜಿ ರೂಪಾಂತರಗಳು, ರೂ.15,000 ವರೆಗೆ ಹಣಕಾಸಿನ ಪ್ರಯೋಜನಗಳನ್ನು ಪಡೆದಿವೆ. ನೂತನ ಪಂಚ್ ಎಸ್‌ಯುವಿ ರೂ.6.13 ರಿಂದ ರೂ.10.15 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ.
ಟಾಟಾ ನೆಕ್ಸಾನ್ (Tata Nexon) ವಿಶ್ವಾಸಾರ್ಹ ಎಸ್‌ಯುವಿ ಎಂದೇ ಹೆಸರುವಾಗಿದೆ. ಈ ಕಾರಿನ ವಿವಿಧ ರೂಪಾಂತರಗಳು ಸರಿ ಸುಮಾರು ರೂ.10,000 ರಿಂದ ರೂ.30,000 ವರೆಗೆ ರಿಯಾಯಿತಿ ಒಳಗೊಂಡಿವೆ. ಹೊಸ ನೆಕ್ಸಾನ್ ಎಸ್‌ಯುವಿ ರೂ.8 ರಿಂದ ರೂ.15.50 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ.

ಟಾಟಾ ಹ್ಯಾರಿಯರ್ (Harrier) ಎಸ್‌ಯುವಿಯು ಕೂಡ ಉತ್ತಮವಾದ ಹಣಕಾಸಿನ ಪ್ರಯೋಜನಗಳನ್ನು ಹೊಂದಿದೆ. ಈ ಕಾರಿನ ಎಲ್ಲ ರೂಪಾಂತರಗಳು ರೂ.25,000 ವರೆಗೆ ರಿಯಾಯಿತಿ ಪಡೆದಿವೆ. ನೂತನ ಹ್ಯಾರಿಯರ್ ಕಾರು ರೂ.14.99 ರಿಂದ ರೂ.25.89 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.
ಕಡೆಯದಾಗಿ ಟಾಟಾ ಸಫಾರಿ (Tata Safari) ಎಸ್‌ಯುವಿ ಹೊಂದಿರುವ ರಿಯಾಯಿತಿ ಬಗ್ಗೆ ಹೇಳುವುದಾದರೆ, ಈ ಕಾರಿನ ಎಲ್ಲ ರೂಪಾಂತರಗಳು ಸಹ ರೂ.25,000 ಹಣಕಾಸಿನ ಪ್ರಯೋಜನವನ್ನು ಹೊಂದಿವೆ. ಹೊಸ ಸಫಾರಿ ಎಸ್‌ಯುವಿ ರೂ.15.49 ರಿಂದ ರೂ.26.79 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ.
ಒಟ್ಟಾರೆಯಾಗಿ, ಟಾಟಾ ಕಂಪನಿ ಘೋಷಣೆ ಮಾಡಿರುವ ಈ ರಿಯಾಯಿತಿಯಿಂದ ಹೊಸ ಕಾರು ಖರೀದಿ ಮಾಡಬೇಕು ಅಂದುಕೊಳ್ಳುವ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅದರಲ್ಲೂ ಕೆಲವು ಕಾರುಗಳು ಉತ್ತಮ ಹಣಕಾಸಿನ ಪ್ರಯೋಜನಗಳನ್ನು ಹೊಂದಿದ್ದು, ಕಾರು ತೆಗೆದುಕೊಳ್ಳಬೇಕೆಂಬ ನಿಮ್ಮ ಕನಸು ಸುಲಭವಾಗಿ ನನಸಾಗಲಿದೆ ಎಂದು ಹೇಳಿದರೆ ತಪ್ಪಾಗವುದಿಲ್ಲ.
ನಿಮ್ಮ ಗಮನಕ್ಕೆ.. ಈ ರಿಯಾಯಿತಿ ಪ್ರಯೋನಗಳು ನವೆಂಬರ್ 30 ವರೆಗೆ ಕರ್ನಾಟಕದ ಬಹುತೇಕ ಎಲ್ಲ ಡೀಲರ್‌ಶಿಪ್‌ಗಳಿಗೂ ಅನ್ವಯವಾಗಲಿವೆ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications