ಹೊಸ ಟಾಟಾ ಕರ್ವ್ ಇಂಟೀರಿಯರ್‌ಗೆ ಫಿದಾ ಆಗ್ತೀರ: ಸನ್‌ರೂಫ್ ಜೊತೆಗೆ ಹೇಗಿದೆ ನೋಡಿ...

ಟಾಟಾ ಮೋಟಾರ್ಸ್ ಭಾರತದಲ್ಲಿ ಕೊನೆಗೂ ತನ್ನ ಹೊಸ ಕರ್ವ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದ್ದು, ಕರ್ವ್ ಕಾರು ಭಾರತದಲ್ಲಿ ಟಾಟಾದ ಐದನೇ ಇವಿ ಕೊಡುಗೆಯಾಗಿದೆ. ಇದರ ಬೆಲೆಗಳು 17.49 ಲಕ್ಷ (ಎಕ್ಸ್‌ ಶೋರಂ)ರೂ.ಗಳಿಂದ ಆರಂಭವಾಗಿ ವೇರಿಯೆಂಟ್ ಆಧರಿಸಿ 21.99 ಲಕ್ಷ (ಎಕ್ಸ್‌ ಶೋರಂ)ರೂ.ಗಳವರೆಗೆ ಇದೆ. ಕ್ರಿಯೇಟಿವ್, ಅಕಂಪ್ಲಿಷ್ಡ್, ಅಕಂಪ್ಲಿಷ್ಡ್ + ಎಸ್, ಎಂಪವರ್ಡ್ + ಮತ್ತು ಎಂಪವರ್ಡ್ + ಎ ಎಂಬ ಐದು ಟ್ರಿಮ್ ಹಂತಗಳಲ್ಲಿ ಲಭ್ಯವಿದೆ. ಈ ಹೊಸ ಕರ್ವ್ ಎಸ್‌ಯುವಿ ಕೂಪೆ ಯಾವೆಲ್ಲಾ ವೈಶಿಷ್ಟ್ಯಗಳು ಮತ್ತು ಪವರ್ ಟ್ರೇನ್ ಆಯ್ಕೆಗಳನ್ನು ಪಡೆದಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಕರ್ವ್ ಇವಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ. ಕ್ರಿಯೇಟಿವ್, ಅಕಂಪ್ಲಿಷ್ಡ್ ಮತ್ತು ಅಕಂಪ್ಲಿಷ್ಡ್ + ಎಸ್ ವೇರಿಯೆಂಟ್‌ಗಳಿಗೆ 45 ಕಿಲೋವ್ಯಾಟ್ ಬ್ಯಾಟರಿ ನೀಡಲಾಗಿದೆ. ಉಳಿದಂತೆ ಎಂಪವರ್ಡ್ + ಮತ್ತು ಎಂಪವರ್ಡ್ + ಎ ರೂಪಾಂತರಗಳಿಗೆ ದೊಡ್ಡ 55 ಕಿಲೋವ್ಯಾಟ್ ಬ್ಯಾಟರಿಯನ್ನು ಒದಗಿಸಲಾಗಿದೆ.

tata-curvv-ev-price-features-range-specifications

ಬ್ಯಾಟರಿ ಪ್ಯಾಕ್: 45 ಕಿಲೋವ್ಯಾಟ್ ಪ್ಯಾಕ್ 502 ಕಿ.ಮೀ ರೇಂಜ್ ನೀಡಿದ್ರೆ, ದೊಡ್ಡ ಬ್ಯಾಟರಿ ಪ್ಯಾಕ್ ಒಂದು ಬಾರಿ ಚಾರ್ಜ್ ಮಾಡಿದರೆ 585 ಕಿ.ಮೀ ರೇಂಜ್ ನೀಡುತ್ತದೆ. ಇದಲ್ಲದೆ, 55 ಕಿಲೋವ್ಯಾಟ್ ವೇರಿಯೆಂಟ್‌ಗಳು 167 ಬಿಹೆಚ್‌ಪಿ ಎಲೆಕ್ಟ್ರಿಕ್ ಮೋಟರ್ ಅನ್ನು ಪಡೆಯುತ್ತವೆ. ಹಾಗೆಯೇ 45 ಕಿಲೋವ್ಯಾಟ್ ವೇರಿಯೆಂಟ್‌ಗಳು 150 ಬಿಹೆಚ್‌ಪಿ ಮೋಟರ್ ಪಡೆದಿವೆ.

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಹೊಸ ಟಾಟಾ ಕರ್ವ್ ಇವಿಯ 167 ಬಿಹೆಚ್‌ಪಿ ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್, ಕೇವಲ 8.6 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಈ ಹೊಸ ಎಲೆಕ್ಟ್ರಿಕ್ ಕಾರಿನ ಟಾಪ್ ಸ್ಪೀಡ್ ಗಂಟೆಗೆ 160 ಕಿ.ಮೀ ಇದೆ.

tata-curvv-ev-price-features-range-specifications

ಚಾರ್ಜಿಂಗ್ ವಿಶೇಷತೆಗಳು: 70kW ಚಾರ್ಜರ್ ಬಳಸಿ ಕೇವಲ 40 ನಿಮಿಷಗಳಲ್ಲಿ ಶೇ10 ರಿಂದ ಶೇ80 ರವರೆಗೆ ಚಾರ್ಜ್ ಮಾಡಬಹುದು. ಇದು V2V ಮತ್ತು V2L ಕಾರ್ಯಗಳನ್ನು ಸಹ ಹೊಂದಿದೆ. ಕರ್ವ್ ಇವಿಯ ಡೈನಾಮಿಕ್ಸ್ ಅನ್ನು ಸುಧಾರಿಸಲು CG ಅನ್ನು 60mm ಕಡಿಮೆ ಮಾಡಲಾಗಿದೆ. ಕರ್ವ್ ಎಲೆಕ್ಟ್ರಿಕ್ ಕಾರು 190 mm ನ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಬರುತ್ತದೆ.

ವೈಶಿಷ್ಟ್ಯಗಳು: ಹೊಸ ಹೊಸ ಟಾಟಾ ಕರ್ವ್ ಇವಿ ಲೆವೆಲ್ 2 ADAS ಟೆಕ್, ಪನರೊಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ಡಿಜಿಟಲ್ ಡ್ರೈವರ್‌ ಡಿಸ್ಪ್ಲೇ, ದೊಡ್ಡ ಇನ್ಫೋಟೈನ್‌ಮೆಂಟ್ ಯೂನಿಟ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ರಿಕ್ಲೈನಿಂಗ್ ಹಿಂಬದಿ ಸೀಟುಗಳು, 6-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್ ಸೇರಿದಂತೆ ಆಧುನಿಕ ತಂತ್ರಜ್ಞಾನದೊಂದಿಗೆ ಟಾಟಾ ಕರ್ವ್ ಬಿಡುಗಡೆಯಾಗಿದೆ.

tata-curvv-ev-price-features-range-specifications

ಬಣ್ಣಗಳು: ಹೊಸ ಟಾಟಾ ಕರ್ವ್ ಎಲೆಕ್ಟ್ರಿಕ್ ಕೂಪೆ ಎಸ್‍ಯುವಿ ಮಾದರಿಯ ಬಣ್ಣಗಳ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಇದು ಫ್ಲೇಮ್ ರೆಡ್, ವರ್ಚುವಲ್ ಸನ್‌ರೈಸ್, ಪ್ರಿಸ್ಟಿನ್ ವೈಟ್, ಪ್ಯೂರ್ ಗ್ರೇ ಮತ್ತು ಎಂಪವರ್ಡ್ ಆಕ್ಸೈಡ್ ಎಂಬ 5 ಬಣ್ಣಗಳಲ್ಲಿ ಲಭ್ಯವಿದೆ. ಇದರಲ್ಲಿ ಟಾಪ್-ಸ್ಪೆಕ್ ರೂಪಾಂತರವು ಎಂಪವರ್ಡ್ ಆಕ್ಸೈಡ್ ಬಣ್ಣವನ್ನು ವಿಶೇಷವಾಗಿ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, August 8, 2024, 13:07 [IST]
English summary
Tata curvv ev price features range specifications
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+