ಈ ವರ್ಷಾರ್ಧದಲ್ಲಿ ಟಾಟಾದ ಟ್ರಂಪ್‌ಕಾರ್ಡ್ ಮಾರುಕಟ್ಟೆಗೆ: TATA Curvv ಅಂದ್ರೆ ಸುಮ್ನೇನಾ?
ಟಾಟಾ ಮೋಟಾರ್ಸ್‌ನ ಮುಂಬರಲಿರುವ ಬಹುದೊಡ್ಡ ಲಾಂಚ್ ಆಗಲಿರುವ ಟಾಟಾ ಕರ್ವ್‌ನ ಆಗಮನಕ್ಕೆ ಭಾರತದ ಆಟೋಮೊಬೈಲ್ ಆಸಕ್ತರು ಉತ್ಸುಕತೆಯಿಂದ ಕಾಯುತ್ತಿದ್ದಾರೆ. ಈ ಉತ್ಸಾಹಿ ಯುವಕರಿಗೆ ನಾವಿಂದು ಹೊಸ ಸುದ್ದಿಯೊಂದನ್ನು ತಂದಿದ್ದು, ಇವರ ಮುಖದಲ್ಲಿ ಈ ಸುದ್ದಿ ಮಂದಹಾಸ ಮೂಡಿಸುವುದಂತೂ ಖಂಡಿತ ಎಂಬುದು ನಮ್ಮ ಅನಿಸಿಕೆ.
ಕಾಂಪಕ್ಟ್ ಎಸ್‌ಯುವಿ ಸೆಗ್ಮೆಂಟ್ ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಓವರ್ ಕ್ರೌಡ್ ಅಂದರೆ ವಿಪರೀತವಾಗಿ ಹೆಚ್ಚು ತುಂಬಿಕೊಂಡಿರುವ ಸೆಗ್ಮೆಂಟ್. ಎಲೆಕ್ಟ್ರಿಕ್ ಕಾಂಪಾಕ್ಟ್ ಎಸ್‌ಯುವಿ ಸೆಗ್ಮೆಂಟ್ ಭಾರತದಲ್ಲಿ ಇದಕ್ಕೆ ತದ್ವಿರುದ್ದ. ಇತ್ತೀಚೆಗಷ್ಟೇ ಈ ಸೆಗ್ಮೆಂಟ್ ಭಾರತದಲ್ಲಿ ಮುನ್ನೆಲೆಗೆ ಬರುತ್ತಿದ್ದು, ಭಾರತೀಯರು ಇದರತ್ತ ಮುಖ ಮಾಡಲು ಆರಂಭಿಸಿದ್ದಾರೆ. ಇದನ್ನರಿತ ಟಾಟಾ ಈ ಎಲೆಕ್ಟ್ರಿಕ್ ಕಾಂಪಾಕ್ಟ್ ಎಸ್‌ಯುವಿ ಸೆಗ್ಮೆಂಟ್ ಅನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳುವ ಎಲ್ಲಾ ಯೋಜನೆಗಳನ್ನು ರೂಪಿಸುತ್ತಿದೆ.

ಹೌದು, ಎಲ್ಲರಿಗೂ ತಿಳಿದಿರುವಂತೆ ಟಾಟಾ ಮೋಟಾರ್ಸ್ ಕರ್ವ್ ಎನ್ನುವ ಕಾಂಪಾಕ್ಟ್ ಎಸ್‌ಯುವಿಯನ್ನು ಅಭಿವೃದ್ದಿ ಪಡಿಸುತ್ತಿದೆ. ಈ ಕಾರು ಎಲೆಕ್ಟ್ರಿಕ್, ಪೆಟ್ರೋಲ್ ಮತ್ತು ಡೀಸೆಲ್ ವೇರಿಯಂಟ್‌ನಲ್ಲಿ ಲಭ್ಯವಾಗಲಿದೆ. ಇದೀಗ ಇದು ಬಿಡುಗಡೆಯಾಗುವ ಟೈಮ್‌ಲೈನ್ ಹೊರಬಿದ್ದಿದ್ದು, ಎಲ್ಲರೂ ಈ ಕಾರು ಮಾರುಕಟ್ಟೆಗೆ ಬರುವುದನ್ನು ಕಾಯುತ್ತಾ ಇದ್ದಾರೆ.
ಮಾಹಿತಿಗಳ ಪ್ರಕಾರ, ಮೊದಲಿಗೆ ಟಾಟಾ ಕರ್ವ್ ಎಲೆಕ್ಟ್ರಿಕ್ ಬಿಡುಗಡೆಯಾಗಲಿದ್ದು, ನಂತರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳು ಬಿಡುಗಡೆಯಾಗಲಿದೆ. ಈ ಕಾರುಗಳು 2024ರ ಎರಡನೇ ಆರ್ಥಿಕ ವರ್ಷಾರ್ಧದಲ್ಲಿ ಬಿಡುಗಡೆಯಾಗಲಿದೆ. ಅಂದರೆ ಈ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಇದೇ ವರ್ಷದ ಜುಲೈ ಮತ್ತು ಸಪ್ಟೆಂಬರ್ ತಿಂಗಳ ಕಾಲಾವಧಿಯಲ್ಲಿ ನಿರೀಕ್ಷಿಸಬಹುದಾಗಿದೆ.

ಮೊದಲ ನೋಟದಲ್ಲಿಯೇ ಜನರನ್ನು ಆಕರ್ಷಿಸುವ ಡಿಸೈನ್ ಹೊಂದಿರುವ ಈ ಕಾರು ಉತ್ತಮ ಪೀಚರ್‌ಗಳನ್ನು ಸಹ ಹೊಂದಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರಿನ ಸಾಕಷ್ಟುಫೋಟೋಗಳು ವೈರಲ್ ಆಗಿದ್ದು ಜನರಿಂದ ಈ ಕಾರಿಗೆ ಭಾರೀ ಪ್ರತಿಕ್ರಿಯೆಗಳು ದೊರಕ್ಕುತ್ತಿದ್ದು, ಇದು ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂದು ಕಾಯುತ್ತಿದ್ದವರು ತಕ್ಕ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ಮಾಹಿತಿಗಳ ಪ್ರಕಾರ ಈಗಿರುವ ಟಾಟಾ ನೆಕ್ಸಾನ್‌ನ ಡೀಸೆಲ್ ಎಂಜಿನ್ ಅನ್ನೇ ಈ ಕಾರಿಗು ಅಳವಡಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಹೌದು ನೆಕ್ಸಾನ್‌ನಲ್ಲಿರುವ, 1,.5 ಲೀಟರ್‌ನ ಡೀಸೆಲ್ ಎಂಜಿನ್ ಸಹಾಯದಿಂದ ಈಗ ನೆಕ್ಸಾನ್ ಕಾರ್‌ನಲ್ಲಿ ಉತ್ಪತ್ತಿಯಾಗುವ ಅದೇ ಪವರ್ ಮತ್ತು ಪರ್ಫಾಮೆನ್ಸ್ ಅನ್ನು ನಾವು ಮುಂಬರಲಿರುವ ಈ ಹೊಸ ಟಾಟಾ ಕರ್ವ್ ಡೀಸೆಲ್ ಆವೃತ್ತಿಯಲ್ಲಿ ಎದುರು ನೊಡಬಹುದಾಗಿದೆ.

ಈ ಹೊಸ ಟಾಟಾ Curvv ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ ಎಸ್‍ಯುವಿಗೆ ನೇರವಾಗಿ ಪೈಪೋಟಿ ನೀಡುತ್ತದೆ. 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಟಾಟಾ Curvv ಕಳೆದ ವರ್ಷ ಎಲೆಕ್ಟ್ರಿಕ್ ವಾಹನ ಕಾನ್ಸೆಪ್ಟ್ ರೂಪದಲ್ಲಿ ತೋರಿಸಿದ್ದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಈ ಬಾರೀ ಅನಾವರಣಗೊಳಿಸಿದ ಟಾಟಾ Curvv ಕಾನ್ಸೆಪ್ಟ್ ಸ್ಪ್ಲಿಟ್ ಹೆಡ್‌ಲೈಟ್ ವಿನ್ಯಾಸದ ನವೀಕರಿಸಿದ ಆವೃತ್ತಿಯನ್ನು ಹೊಂದಿದೆ.
ಇದರ ಡಿಸೈನ್ ಮತ್ತು ಇತರ ವಿಷಯಗಳನ್ನು ನೋಡುವುದಾದರೆ, ಈ ಕಾರಿನ ಹೆಡ್‌ಲ್ಯಾಂಪ್‌ಗಳೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಉತ್ಪಾದನೆಗೆ ಸಿದ್ಧವಾಗಿದೆ. ಟಾಟಾ ಮೋಟಾರ್ಸ್‌ನ Curvv ಕಾನ್ಸೆಪ್ಟ್ ಪೂರ್ಣ-ಅಗಲ LED DRL ಗಳನ್ನು ಉಳಿಸಿಕೊಂಡಿದೆ. ಈ ಟಾಟಾ Curvv ಕಾನ್ಸೆಪ್ಟ್ ವಿಶಿಷ್ಟ ಲುಕ್ ಅನ್ನು ಹೊಂದಿದೆ. ಈ ಕಾರು ವಿನ್ಯಾಸದ ಹೈಲೈಟ್ ಅದನ್ನು ಉತ್ಪಾದನೆಗೆ ಮಾಡಿದರೆ, ಎಸ್‍ಯುವಿಗಳು ಬಿ-ವಿಭಾಗದಲ್ಲಿ Curvv ಒಂದು ವಿಶಿಷ್ಟ ಕೊಡುಗೆಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications