Tata Curvv vs Citroen Basalt: ಜಬರ್ದಸ್ತ್ ಕೂಪೆ ಎಸ್‌ಯುವಿಗಳು.. ಯಾವುದು ಬೆಸ್ಟ್, ಈ ವಿವರಗಳು ಖಂಡಿತ ತಿಳಿದಿರಲಿ!
ಟಾಟಾ ಮೋಟಾರ್ಸ್ (Tata Motors), ಇಂದು ಹೊಚ್ಚ ಹೊಸ ಇಂಧನ ಚಾಲಿತ (ಪೆಟ್ರೋಲ್/ಡೀಸೆಲ್) ನೂತನ ಕರ್ವ್ (Curvv) ಕಾರನ್ನು ಬಿಡುಗಡೆ ಮಾಡಿದೆ. ಈ ಕಾರಿಗೆ ಫ್ರೆಂಚ್ ಮೂಲದ ಸಿಟ್ರನ್ (Citroen) ಆಗಸ್ಟ್‌ನಲ್ಲಿ ಮಾರಾಟಕ್ಕೆ ತಂದಿರುವ ಬಸಾಲ್ಟ್ (Basalt) ನೇರ ಪ್ರತಿಸ್ಪರ್ಧಿಯಾಗಿದೆ. ಟಾಟಾ ಕರ್ವ್ ಹಾಗೂ ಸಿಟ್ರನ್ ಬಸಾಲ್ಟ್‌ಗಳೆರಡು ಕೂಪೆ ಎಸ್‌ಯುವಿಗಳಾಗಿದ್ದು, ನವೀನ ಶೈಲಿಯ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಇಲ್ಲಿ ನೂತನ ಕಾರುಗಳ ನಡುವಿನ ವ್ಯತ್ಯಾಸವನ್ನು ಹೋಲಿಕೆ ಮಾಡಿದ್ದೇವೆ. ಹೆಚ್ಚಿನ ಮಾಹಿತಿ ಇಲ್ಲಿದೆ.
ಬೆಲೆ (Price): ಟಾಟಾ ಕರ್ವ್ ಕೂಪೆ ಎಸ್‌ಯುವಿ (Tata Curvv Coupe Suv) ರೂ.9.99 ರಿಂದ 17.69 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಖರೀದಿಗೆ ದೊರೆಯುತ್ತದೆ. ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿ (Citroen Basalt Coupe Suv) ರೂ.7.99 ಲಕ್ಷದಿಂದ ರೂ.13.62 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ದರದ ವಿಚಾರದಲ್ಲಿ ಟಾಟಾ ಕರ್ವ್ ಸ್ವಲ್ಪ ದುಬಾರಿಯಾಗಿದೆ.

ಸುತ್ತಳತೆ (Dimension): ಇವೆರೆಡು ಕಾರುಗಳು ಕೂಪೆ ಎಸ್‌ಯುವಿಗಳಾಗಿದ್ದು, 5 ಆಸನ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿವೆ. ಟಾಟಾ ಕರ್ವ್ 4,310 ಎಂಎಂ ಉದ್ದ, 1,810 ಎಂಎಂ ಅಗಲ ಹಾಗೂ 1,637 ಎಂಎಂ ಎತ್ತರವನ್ನು ಹೊಂದಿದೆ. ವೀಲ್‌ಬೇಸ್ 2,560 ಎಂಎಂ ಇದ್ದು, ಹೆಚ್ಚಿನ ಲಗೇಜ್ ಸಾಗಿಸಲು 500 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಮತ್ತು ಪೆಟ್ರೋಲ್/ಡೀಸೆಲ್ ತುಂಬಿಸಲು 44 ಲೀಟರ್‌ನ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಪಡೆದಿದೆ. 18-ಇಂಚಿನ ವೀಲ್‌ಗಳನ್ನು ಒಳಗೊಂಡಿದೆ.
ಸಿಟ್ರನ್ ಬಸಾಲ್ಟ್ 4,352 ಎಂಎಂ ಉದ್ದ, 1,765 ಎಂಎಂ ಅಗಲ 1,593 ಎಂಎಂ ಎತ್ತರವಿದೆ. ವೀಲ್‌ಬೇಸ್ 2,651 ಎಂಎಂ ಇದ್ದು, 45-ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್ ಮತ್ತು 470-ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. 16-ಇಂಚಿನ ವೀಲ್‌ಗಳನ್ನು ಹೊಂದಿದೆ. ಟಾಟಾ ಕರ್ವ್ ಎಸ್‌ಯುವಿ ಸಿಟ್ರನ್ ಬಸಾಲ್ಟ್‌ಗಿಂತ 45 ಎಂಎಂ ಅಗಲ ಹಾಗೂ 37 ಎಂಎಂ ಎತ್ತರವಿದೆ.

ಟಾಟಾ ಕರ್ವ್ ಕಾರಿಗಿಂತ ಸಿಟ್ರನ್ ಬಸಾಲ್ಟ್ 44 ಎಂಎಂ ಉದ್ದವಿದ್ದು, 91 ಎಂಎಂ ವಿಶಾಲವಾದ ವೀಲ್‌ಬೇಸ್‌ನ್ನು ಒಳಗೊಂಡಿದೆ. ಆದರೂ ಬಸಾಲ್ಟ್‌ಗಿಂತ ಕರ್ವ್ ಬೂಟ್ ಸ್ಪೇಸ್ ಹಾಗೂ ವೀಲ್‌ಗಳು ದೊಡ್ಡದಾಗಿವೆ. ಎರಡು ಕಾರುಗಳ ಫ್ಯುಯೆಲ್ (ಇಂಧನ) ಟ್ಯಾಂಕ್ ಹೆಚ್ಚು - ಕಮ್ಮಿಯಾಗಿ ಒಂದೇ ರೀತಿಯಲ್ಲಿವೆ.
ಕಾರ್ಯಕ್ಷಮತೆ (Performance): ಟಾಟಾ ಕರ್ವ್ ಕೂಪೆ ಎಸ್‌ಯುವಿ (Tata Curvv Coupe Suv) 1.2 ಲೀಟರ್ ಟರ್ಬೊ ಪೆಟ್ರೋಲ್, 1.2 ಲೀಟರ್ ಜಿಡಿಐ ಟರ್ಬೊ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್/ 7-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ಪಡೆದಿದೆ.
ಸಿಟ್ರನ್ ಬಸಾಲ್ಟ್ ಕೂಪೆ ಎಸ್‌ಯುವಿ (Citroen Basalt Coupe Suv) 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. ಜೊತೆಗೆ 5-ಸ್ಪೀಡ್/ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಂಟಿ) ಹಾಗೂ 6-ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್‌ಮಿಷನ್ (ಎಟಿ) ಆಯ್ಕೆಯಲ್ಲಿಯೂ ಲಭ್ಯವಿದೆ. ಬಸಾಲ್ಟ್‌ಗಿಂತ ಹೋಲಿಸಿದರೆ, ಕರ್ವ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಪವರ್ (ಶಕ್ತಿ) ಹಾಗೂ ಪೀಕ್ ಟಾರ್ಕ್ ಉತ್ಪಾದನೆಯಲ್ಲಿ ವ್ಯತ್ಯಯವಿದೆ.
ವೈಶಿಷ್ಟ್ಯಗಳು (Features): ಟಾಟಾ ಕರ್ವ್ ಕಾರು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 4-ಸ್ಪೋಕ್ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ಫುಲ್-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಪನೊರೊಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಹೊಂದಿದೆ.
ಸಿಟ್ರನ್ ಬಸಾಲ್ಟ್ ಎಸ್‌ಯುವಿ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಪುಶ್ ಬಟನ್ ಸ್ಟಾರ್ಟ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು 6 ಏರ್‌ಬ್ಯಾಗ್ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇವೆರೆಡು ಕಾರುಗಳ ವೈಶಿಷ್ಟ್ಯದಲ್ಲಿಯೂ ಅಷ್ಟಾಗಿ ಭಿನ್ನತೆ ಇಲ್ಲದಿರುವುದನ್ನು ಗುರುತಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications