ಟಾಟಾ ಗ್ರಾಹಕರಿಗೆ ನಿರಾಸೆ: ಎಲೆಕ್ಟ್ರಿಕ್‌ ಕಾರುಗಳ ವೇಟಿಂಗ್‌ ಪಿರಿಯಡ್‌ ನೋಡಿ ಜನ ಶಾಕ್... ಹೀಗಾದ್ರೆ ಹೇಗೆ?

ಭಾರತದಲ್ಲಿ ಸದ್ಯಕ್ಕೆ ಸದಾ ಸುದ್ದಿಯಾಗುತ್ತಿರುವ ಕಾರು ನಿರ್ಮಾಣ ಕಂಪನಿ ಎಂದರೆ ಅದು ಟಾಟಾ. ಹೌದು, ಸದಾ ಒಂದಿಲ್ಲೊಂದು ಸುದ್ದಿಯಾಗುವ ಟಾಟಾ ಕಾರುಗಳು ಭಾರತೀಯ ನೆಚ್ಚಿನ ಕಾರಾಗಿ ಬದಲಾಗಿ ಹಲವಾರು ವರ್ಷಗಳೇ ಕಳೆದಿವೆ. ಇದೇ ಕಾರಣದಿಂದಾಗಿ ಟಾಟಾ ಕಾರುಗಳ ಬೇಡಿಕೆಯ ಜೊತೆಗೆ ಇದರ ವೇಟಿಂಗ್‌ ಕಾಲಾವಧಿ ಸಹ ಹೆಚ್ಚಾಗಿದೆ.

ಇತ್ತೀಚಿನ ದಿನಗಳಲ್ಲಿ ಟಾಟಾ ಬಹುತೇಕ ಎಲ್ಲಾ ಸೆಗ್ಮೆಂಟ್‌ಗಳಲ್ಲೂ ಎಲೆಕ್ಟ್ರಿಕ್‌ ಕಾರುಗಳನ್ನು (TATA Electric Cars) ಮಾರುಕಟ್ಟೆಗೆ ತಂದಿದ್ದು, ನೀವೇನಾದರೂ ಸದ್ಯಕ್ಕೆ ಟಾಟಾ ಎಲೆಕ್ಟ್ರಿಕ್‌ ಕಾರುಗಳನ್ನು ಕೊಳ್ಳುವ ಯೋಜನೆಯಲ್ಲಿದ್ದರೆ ನಿಮಗಿದು ನಿರಾಸೆ ತರಿಸುವ ಸುದ್ದಿ. ಮಾರ್ಚ್‌ ತಿಂಗಳಲ್ಲಿ ಟಾಟಾ ಎಲೆಕ್ಟ್ರಿಕ್‌ ಕಾರುಗಳಾದ ಟಾಟಾ ಟಿಗೋರ್‌ ಇವಿ, ಟಿಯಾಗೋ ಇವಿ, ಪಂಚ್ ಇವಿ ಮತ್ತು ನೆಕ್ಸಾನ್‌ ಇವಿಗಳ ಕಾಯುವಿಕೆಯ ಅವಧಿ ಹೆಚ್ಚಾಗಿದೆ.

TATA Electric Cars Waiting Period In March Nexon EV Tiago EV Punch EV

ಬೆಂಗಳೂರಿನಲ್ಲಿ ಟಾಟಾ ಟಿಯಾಗೋ ಇವಿಯ ಕಾಯುವಿಕೆಯ ಅವಧಿ 2.5 ತಿಂಗಳಿದ್ದರೆ, ಟಿಗೋರ್‌ ಇವಿಯ ಅವಧಿಯೂ 2.5 ತಿಂಗಳಿದೆ. ಇನ್ನು ಇತ್ತೀಚೆಗೆ ಮಾರುಕಟ್ಟೆಗೆ ಬಂದ ಟಾಟಾ ಪಂಚ್‌ ಇವಿಯ ಕಾಯುವಿಕೆಯ ಅವಧಿ ಸುಮಾರು ಒಂದೂವರೆ ತಿಂಗಳಿಂದ ಎರಡು ತಿಂಗಳಿಂದ ಎರಡೂವರೆ ತಿಂಗಳುಗಳು. ಇನ್ನು ಟಾಟಾದ ಮತ್ತೊಂದು ಹೆಸರುವಾಸಿಯಾದ ಟಾಟಾ ನೆಕ್ಸಾನ್‌ ಎಲೆಕ್ಟ್ರಿಕ್‌ನ ಕಾಲಾವಧಿ ಸುಮಾರು 2 ತಿಂಗಳುಗಳು.

ಹೊಸ ನೆಕ್ಸಾನ್ ಇವಿ ಬ್ಯಾಟರಿ ಪ್ಯಾಕ್ ಅನುಗುಣವಾಗಿ, ಮೀಡಿಯಂ ರೇಂಜ್ (ಎಂಆರ್) ಹಾಗೂ ಲಾಂಗ್ ರೇಂಜ್ (ಎಲ್ಆರ್) ರೂಪಾಂತರ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಎಂಆರ್ ರೂಪಾಂತರ 30kWh ಹಾಗೂ ಎಲ್ಆರ್ ರೂಪಾಂತರ 40.5kWh ಬ್ಯಾಟರಿ ಪ್ಯಾಕ್ ಹೊಂದಿದೆ. ಜನರೇಷನ್ 2 ಮೋಟಾರ್ ಸಹಾಯದಿಂದ ಕಾರ್ಯನಿರ್ವಹಿಸಲಿದ್ದು, ಕ್ರಮವಾಗಿ, 127 bhp, 143 bhp ಪವರ್, 215 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

TATA Electric Cars Waiting Period In March Nexon EV Tiago EV Punch EV

ಟಾಟಾ ಪಂಚ್‌ ಎಲೆಕ್ಟ್ರಿಕ್‌ ಬಗ್ಗೆ ನೋಡುವುದಾದರೆ, ಈ ಎಲೆಕ್ಟ್ರಿಕ್ ಕಾರಿನಲ್ಲಿ 25 kWh ಮತ್ತು 35 kWh ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ. ಇದರಲ್ಲಿ 25 kWh ಬ್ಯಾಟರಿ ಪ್ಯಾಕ್ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 315 ಕಿ.ಮೀ ರೇಂಜ್ ಅನ್ನು ನೀಡಿದರೆ, 35 kWh ಬ್ಯಾಟರಿ ಪ್ಯಾಕ್‌ 421 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಮಿಡ್ ರೇಂಜ್ ಮಾದರಿಯು 80bhp ಮತ್ತು 114Nm ಟಾರ್ಕ್ ಅನ್ನು ಉತ್ಪಾದಿಸಿದರೆ, ಲಾಂಗ್ ರೇಂಜ್ ಮಾದರಿಯು 120bhp ಮತ್ತು 190Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುವರಿಯಾಗಿ, ಬ್ರ್ಯಾಂಡ್ ಎರಡು ಚಾರ್ಜರ್ ಆಯ್ಕೆಗಳನ್ನು ನೀಡುತ್ತದೆ. ಇದು 7.2 kW ಫಾಸ್ಟ್ಚಾರ್ಜರ್ (LR ರೂಪಾಂತರಕ್ಕೆ ಪ್ರತ್ಯೇಕವಾಗಿ ಲಭ್ಯವಿದೆ) ಮತ್ತು 3.3 kW ವಾಲ್‌ಬಾಕ್ಸ್ ಚಾರ್ಜರ್ ಅನ್ನು ಹೊಂದಿದೆ.

TATA Electric Cars Waiting Period In March Nexon EV Tiago EV Punch EV

ಟಾಟಾ ಟಿಗೂರ್ ಇವಿ ವಾಣಿಜ್ಯ ಬಳಕೆಗೆ ಮಾತ್ರ ಖರೀದಿಗೆ ಲಭ್ಯವಿದ್ದು, ರೂ.12.49 ಲಕ್ಷದಿಂದ ರೂ.13.75 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ಸಿಗುವ ಈ ಕಾರು, 26 kWh ಬ್ಯಾಟರಿ ಪ್ಯಾಕ್ ಪಡೆದಿದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 75 PS ಗರಿಷ್ಠ ಪವರ್ ಹಾಗೂ 170 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಟಾಟಾ ಟಿಯಾಗೋ ಎಲೆಕ್ಟ್ರಿಕ್ (Tata Tiago EV) ಕಾರಿನ ಬೆಲೆಯು ರೂ.7.99 ಲಕ್ಷದಿಂದ ರೂ.11.89 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಟಾಟಾ ಮೋಟಾರ್ಸ್ ಕಂಪನಿಯು 2026ರ ವೇಳೆಗೆ ಹತ್ತು ಎಲೆಕ್ಟ್ರಿಕ್ ವಾಹನಗಳ ಪೋರ್ಟ್‌ಫೋಲಿಯೊವನ್ನು ಹೊಂದಲು ಟಾಟಾದ ಯೋಜನೆಗಳ ಭಾಗವಾಗಿದೆ. ಇದರ ನೆಟ್‌ವರ್ಕ್ ಆಗಿ 80 ಹೊಸ ನಗರಗಳನ್ನು ಪ್ರವೇಶಿಸಿದೆ. 165ಕ್ಕೂ ಹೆಚ್ಚು ನಗರಗಳಿಗೆ ಕೂಡ ವಿಸ್ತರಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, March 21, 2024, 14:03 [IST]
English summary
Tata electric cars waiting period in march nexon ev tiago ev punch ev
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+