ರತನ್ ಟಾಟಾ ಕಂಪನಿಯಿಂದ ಸಿಹಿಸುದ್ದಿ: 3 ಲಕ್ಷ ಬೆಲೆ ಇಳಿಕೆ.. ಎಲೆಕ್ಟ್ರಿಕ್ ಕಾರು ಖರೀದಿಸಲು ಸುವರ್ಣಾವಕಾಶ

ಟಾಟಾ ಮೋಟಾರ್ಸ್ ಹಬ್ಬದ ಸೀಸನ್ ನಲ್ಲಿ ಇಂಧನ ಚಾಲಿತ ಕಾರುಗಳ ಮೇಲಿನ ರಿಯಾಯಿತಿಗಳ ಬಳಿಕ ತನ್ನ ಎಲೆಕ್ಟ್ರಿಕ್ ಕಾರುಗಳ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ. 'ಫೆಸ್ಟಿವಲ್ ಆಫ್ ಕಾರ್ಸ್' ಕಾರ್ಯಕ್ರಮದ ಅಂಗವಾಗಿ ಟಾಟಾ ಕಂಪನಿಯು ತನ್ನ ನೆಕ್ಸಾನ್ ಎಲೆಕ್ಟ್ರಿಕ್ ಎಸ್‍ಯುವಿಯ ಬೆಲೆಯನ್ನು ರೂ.3 ಲಕ್ಷ ಮತ್ತು ಪಂಚ್ ಎಲೆಕ್ಟ್ರಿಕ್ ಎಸ್‍ಯುವಿಯ ಬೆಲೆಯನ್ನ್ನು ರೂ.1.20 ಲಕ್ಷದವರೆಗೆ ಕಡಿಮೆ ಮಾಡಿದೆ. ಬೆಲೆ ಇಳಿಕೆಯ ಬಳಿಕ ಟಾಟಾ ನೆಕ್ಸಾನ್ ಇವಿ (Tata Nexon EV) ಬೆಲೆಯು ರೂ.12.49 ಲಕ್ಷದಿಂದ ಆರಂಭವಾದರೆ, ಟಾಟಾ ಪಂಚ್ ಇವಿ (Tata Punch EV) ಆರಂಭಿಕ ಬೆಲೆಯು ರೂ.9.99 ಲಕ್ಷವಾಗಿದೆ.

ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಅವರು ಮಾತನಾಡಿ, TATA.ev ನಲ್ಲಿನ ನಮ್ಮ ಏಕೈಕ ಉದ್ದೇಶವೆಂದರೆ ಮುಖ್ಯವಾಹಿನಿಯ ಅಡೆತಡೆಗಳನ್ನು ಮೀರಿ ಸಾಮಾನ್ಯ ಕಾರು ಖರೀದಿದಾರರಿಗೆ ಹೆಚ್ಚು ಕೈಗೆಟುವಂತೆ ಮಾಡುವುದು. ಈ ವಿಶೇಷ, ಸೀಮಿತ ಅವಧಿಯ ಬೆಲೆಗಳೊಂದಿಗೆ, ನಾವು ಎಲೆಕ್ಟ್ರಿಕ್ ಕಾರುಗಳ ಹೆಚ್ಚಿನ ವೆಚ್ಚದ ತಡೆಗೋಡೆಯನ್ನು ಮುರಿಯುತ್ತಿದ್ದೇವೆ ಎಂದು ಹೇಳಿದರು.

Tata ev

ಟಾಟಾ ನೆಕ್ಸಾನ್ ಇವಿಯು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. 30 ಕೆಡಬ್ಲ್ಯೂಹೆಚ್ ಬ್ಯಾಟರಿ ಹೊಂದಿರುವ ಕಾರಿನಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 129 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 215 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಸಂಪೂರ್ಣ ಚಾರ್ಜ್ ನಲ್ಲಿ 325 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಮತ್ತೊಂದು 40.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಪಡೆದಿರುವ ಕಾರಿನಲ್ಲಿ ಉಪಯೋಗಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್, 144 ಪಿಎಸ್ ಪವರ್ ಮತ್ತು 215 ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ಭರ್ತಿ ಚಾರ್ಜ್ ನಲ್ಲಿ 465 ಕಿಲೋಮೀಟರ್ ಓಡುತ್ತದೆ. ನೆಕ್ಸಾನ್ ಇವಿ ಬ್ಯಾಟರಿಯು ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಕೇವಲ 56 ನಿಮಿಷದಲ್ಲಿ 10 ರಿಂದ 80% ಚಾರ್ಜ್ ಆಗುತ್ತದೆ.

ಈ ಕಾರು, 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಆಟೋ ಎಸಿ, ಕ್ರೂಸ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಸನ್‌ರೂಫ್ ಸೇರಿದಂತೆ ಹತ್ತಾರು ಅತ್ಯಾಧುನಿಕ ಫೀಚಸ್ ಗಳನ್ನು ಹೊಂದಿವೆ.

ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ. ಮುಂಭಾಗದಲ್ಲಿರುವ ಟಾಟಾ ಲೋಗೋದ ಕೆಳಗೆ ಮಧ್ಯದಲ್ಲಿ ಇರಿಸಲಾದ ಚಾರ್ಜಿಂಗ್ ಫ್ಲಾಪ್ ಮತ್ತು ಮುಂಭಾಗದ ಬಂಪರ್‌ನಲ್ಲಿ ಇರಿಸಲಾಗಿರುವ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳನ್ನು ಹೊಂದಿದೆ. ಈ ಟಾಟಾ ಪಂಚ್ ಇವಿಯಲ್ಲಿ 16-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಇನ್ನು ಇದರಲ್ಲಿ ನಾಲ್ಕು ಡಿಸ್ಕ್ ಬ್ರೇಕ್‌ಗಳನ್ನು ಪಡೆಯುತ್ತದೆ.

ಟಾಟಾ ಪಂಚ್ ಇವಿ ಟಾಟಾದ ಹೊಸ Acti.EV (ಅಡ್ವಾನ್ಸ್ಡ್ ಕನೆಕ್ಟೆಡ್ ಟೆಕ್ ಇಂಟೆಲಿಜೆಂಟ್ ಎಲೆಕ್ಟ್ರಿಕ್ ವೆಹಿಕಲ್) ಪ್ಲಾಟ್‌ಫಾರ್ಮ್‌ನ ಆಧಾರವಾಗಿದೆ. ಈ ಪ್ಲಾಟ್‌ಫಾರ್ಮ್‌ ಅನ್ನು ಮುಂಬರುವ ಎಲೆಕ್ಟ್ರಿಕ್ ಮಾದರಿಗಳಾದ ಹ್ಯಾರಿಯರ್ ಇವಿ ಮತ್ತು ಕರ್ವ್ ಇವಿ ಆಧರಿಸಿರುತ್ತದೆ. ಈ Acti.EV ಆರ್ಕಿಟೆಕ್ಚರ್ ಬಹುಮುಖವಾಗಿದೆ, ವಿವಿಧ ಬಾಡಿ ಗಾತ್ರಗಳು, ಪವರ್‌ಟ್ರೇನ್‌ಗಳು ಮತ್ತು ಡ್ರೈವ್‌ಟ್ರೇನ್ ಸಿಸ್ಟಂಗಳಿಗೆ ಸ್ಥಳಾವಕಾಶ ನೀಡುತ್ತದೆ. ಪಂಚ್ ಎಲೆಕ್ಟ್ರಿಕ್ ಕಾರಿನಲ್ಲಿ ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಕಾರಿನಲ್ಲಿ 25 kWh ಮತ್ತು 35 kWh ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ. ಇದರಲ್ಲಿ 25 kWh ಬ್ಯಾಟರಿ ಪ್ಯಾಕ್ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 315 ಕಿ.ಮೀ ರೇಂಜ್ ನೀಡುತ್ತದೆ. ಇನ್ನು 35 kWh ಬ್ಯಾಟರಿ ಪ್ಯಾಕ್‌ 421 ಕಿ.ಮೀ ರೇಂಜ್ ನೀಡುತ್ತದೆ. ಮಿಡ್ ರೇಂಜ್ ಮಾದರಿಯು 80bhp ಮತ್ತು 114Nm ಟಾರ್ಕ್ ಅನ್ನು ಉತ್ಪಾದಿಸಿದರೆ, ಲಾಂಗ್ ರೇಂಜ್ ಮಾದರಿಯು 120bhp ಮತ್ತು 190Nm ಟಾರ್ಕ್ ಉತ್ಪಾದಿಸುತ್ತದೆ.

Article Published On: Tuesday, September 10, 2024, 16:54 [IST]
English summary
Tata ev price cut up to rs 3 lakh punch ev nexon ev details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+