ಬಡವರ 'ರೇಂಜ್‌ರೋವರ್'ಗಳನ್ನು ಕಡಿಮೆ ಬೆಲೆಗೆ ಖರೀದಿಸಬೇಕೆ?: ಇದಕ್ಕಿಂತ ಸೂಕ್ತ ಸಮಯ ನಿಮಗೆ ಸಿಗದು...
ಟಾಟಾ ಮೋಟಾರ್ಸ್ ಭಾರತದ ಪ್ರಮುಖ ಕಾರು ತಯಾರಕರಲ್ಲಿ ಒಂದಾಗಿದೆ, ಕೆಲವು ಗಟ್ಟಿಮುಟ್ಟಾದ ಮತ್ತು ಸುರಕ್ಷಿತ ಕಾರುಗಳನ್ನು ತಯಾರಿಸಲು ಹೆಸರುವಾಸಿಯಾಗಿದೆ. ಟಾಟಾ ಈಗ ಈ ತಿಂಗಳ ಬಹುತೇಕ ಎಲ್ಲಾ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ. ಹೊಸ ಟಾಟಾ ಹ್ಯಾರಿಯರ್ ಮತ್ತ ಸಫಾರಿ ಕಾರುಗಳನ್ನು ಖರೀದಿಸುವವರಿಗೆ ಇದೊಂದು ಸುವರ್ಣಾವಕಾಶ ಎಂದರೆ ಯಾವ ರೀತಿಯಲ್ಲೂ ತಪ್ಪಾಗಲಾರದು. ಯಾವುದೇ ಆಫರ್ ಇಲ್ಲದಿದ್ದರೂ ಭಾರತದಲ್ಲಿ ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಟಾಟಾ ಮೋಟಾರ್ಸ್ ಕಾರುಗಳು ಮಾರಾಟವಾಗುತ್ತಿವೆ. ಆಫರ್‌ನಿಂದ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಮಾಹಿತಿಗಳ ಪ್ರಕಾರ ಟಾಟಾ ಹೊಸ ಟಾಟಾ ಸಫಾರಿ ಮತ್ತು ಹ್ಯಾರಿಯರ್ ಕಾರುಗಳನ್ನು ಖರೀದಿ ಮಾಡುವವರಿಗೆ ಟಾಟಾ ಮೋಟಾರ್ಸ್ ಗರಿಷ್ಟ 1.3 ಲಕ್ಷ ರೂಪಾಯಿಗಳ ಆಫರ್‌ಗಳನ್ನು ನೀಡುತ್ತಿದೆ. ಇದು 2023,2024ರ ಮಾದರಿಯನ್ನು ಖರೀದಿ ಮಾಡುವವರಿಗೆ ಈ ಆಫರ್ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿದೆ. (ಸೂಚನೆ: ರಿಯಾಯಿತಿಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ ಮತ್ತು ಸ್ಟಾಕ್ ಲಭ್ಯತೆಗೆ ಒಳಪಟ್ಟಿರುತ್ತವೆ. ನಿಖರವಾದ ರಿಯಾಯಿತಿ ಅಂಕಿ ಅಂಶಕ್ಕಾಗಿ ದಯವಿಟ್ಟು ನಿಮ್ಮ ಸ್ಥಳೀಯ ವಿತರಕರನ್ನು ಸಂಪರ್ಕಿಸಿ)

ಈ ಎರಡೂ ಮಾದರಿಗಳು ಆಫರ್‌ಗಳನ್ನು ಗಮನಿಸಿದರೆ, ಇದರಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್, ಕಾರ್ಪೋರೇಟ್ ಡಿಸ್ಕೌಂಟ್‌ಗಳು ಒಳಗೊಂಡಿದೆ. ಈ ಎಲ್ಲಾ ಕೊಡುಗೆಗಗಳನ್ನು ಬಾಚಿಕೊಂಡರೆ ನಿಮಗೆ ಈ ಮೇಲೆ ತಿಳಿಸಿದ 1.3 ಲಕ್ಷ ರೂಪಾಯಿಗಳ ಆಫರ್ ಅನ್ನು ನೀವು ಪಡೆಯಬಹುದು ಎಂಬುದನ್ನು ನೀವು ಗಮನಿಸಬೇಕು.
ವಿನ್ಯಾಸ: ಮೊದಲಿಗೆ ಟಾಟಾ ಸಫಾರಿಯ ಕುರಿತಾಗಿ ನೋಡೋಣ. ಹಳೆಯ ಮಾದರಿಯಂತಲ್ಲದೇ ಸಫಾರಿಯು ಮೊದಲಿಗಿಂತ ತೀಕ್ಷ್ಣವಾಗಿ ಮತ್ತು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಹೊಸ ಪ್ಯಾರಾಮೆಟ್ರಿಕ್ ಗ್ರಿಲ್ ನವೀಕರಿಸಿದ ಹ್ಯಾರಿಯರ್‌ಗಿಂತ ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತದೆ. ಗ್ರಿಲ್ ಮೇಲಿನ ಭಾಗವು ಬೋಡ್-ಬಣ್ಣದ ಇಂಟೇಕ್‌ಗಳು ಮತ್ತು ಟಾಟಾ ಬ್ಯಾಡ್ಜ್ ಅನ್ನು ಹೊಂದಿದೆ. ಪೂರ್ಣ-ಅಗಲದ ಎಲ್ಇಡಿ ಡಿಆರ್ಎಲ್ ಸೆಟಪ್ ಗ್ರಿಲ್‌ನ ಮೇಲೆ ಚಲಿಸುತ್ತದೆ. ಎರಡೂ ಬದಿಯಲ್ಲಿರುವ ವಿಭಾಗಗಳು ಇಂಡಿಕೇಟರ್ ಸಂಕೇತಗಳಾಗಿ ಕಾರ್ಯನಿರ್ವಹಿಸುತ್ತವೆ.
ಟಾಟಾ ಹ್ಯಾರಿಯರ್‌ನ (TATA Harrier) ವಿನ್ಯಾಸದ ಕುರಿತಾಗಿ ನೋಡುವುದಾದರೆ ಪ್ರತಿಯೊಬ್ಬರನ್ನು ಆಕರ್ಷಿಸುವ ಡಿಸೈನ್ ಹೊಂದಿದೆ. ಮುಂಭಾಗದಲ್ಲಿ ಹಲವು ನವೀಕರಣಗಳನ್ನು ಒಳಗೊಂಡಿದ್ದು, ಹೊಸದಾದ ಗ್ರಿಲ್, ಸ್ಪ್ಲಿಟ್ ಹೆಡ್‌ಲೈಟ್ ಪಡೆದಿದೆ. ಜೊತೆಗೆ ಗ್ರಿಲ್ ಮೇಲ್ಭಾಗ ಫುಲ್-ವಿಡ್ತ್ (ಅಗಲ) ಎಲ್ಇಡಿ ಲೈಟ್ ಬಾರ್ ಹೊಂದಿದೆ. ಇದರೊಂದಿಗೆ ಬಂಪರ್ ಕೂಡ ಹೊಸದಾಗಿದ್ದು, ಸೈಡ್ ಪ್ರೊಫೈಲ್‌ನಲ್ಲಿ ಹ್ಯಾರಿಯರ್ ಫೇಸ್‌ಲಿಫ್ಟ್ ಅಷ್ಟಾಗಿ ಬದಲಾವಣೆ ಪಡೆದಿಲ್ಲ. 18 ಹಾಗೂ 19 ಇಂಚಿನ ಅಲಾಯ್ ವೀಲ್ಸ್ ಅನ್ನು ಹೊಂದಿದೆ.
ಫೀಚರ್ಸ್: ಸಫಾರಿಯ ಒಳಗೆ ಹೆಜ್ಜೆ ಇಡುತ್ತಿದ್ದಂತೆ ನೀವು ಹೆಚ್ಚು ನವೀಕರಿಸಿದ ಕ್ಯಾಬಿನ್ ನೋಡಬಹುದು. ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಮೇಲೆ ಸುತ್ತುವರಿದ ಬೆಳಕನ್ನು ನೋಡಬಹುದು, ಇದನ್ನು ಬೃಹತ್ ಪನಾರಮಿಕ್ ಸನ್‌ರೂಫ್‌ನ ಬಾಗಿಲುಗಳು ಮತ್ತು ಅಂಚುಗಳಲ್ಲಿಯೂ ಕಾಣಬಹುದು. ಹೊಸ ಡ್ಯಾಶ್‌ಬೋರ್ಡ್ ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ 12.3-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಸಹ ಹೊಂದಿದೆ. ಹಾಗೆಯೇ ಇದು 360-ಡಿಗ್ರಿ ಕ್ಯಾಮೆರಾಗೆ ಡಿಸ್ಪ್ಲೇಯಾಗಿ ಕಾರ್ಯನಿರ್ವಹಿಸುತ್ತದೆ.
ಟಾಟಾ ಹ್ಯಾರಿಯರ್ 10.25 - ಇಂಚು ಅಥವಾ 12.3 - ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಹೊಂದಿದೆ. ಈ ಎಸ್‍ಯುವಿಯ ಎಲ್ಇಡಿ ಅಂಬಿಯೇಟ್ ಲೈಟಿಂಗ್, 10.25 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಾಟಾ ಲೋಗೋದೊಂದಿಗೆ ಹೊಸದಾದ 4- ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ - ಝೋನ್ ಕ್ಲೈಮೇಟ್ ಕಂಟ್ರೋಲ್, 10 - ಸ್ಪೀಕರ್ ಜೆಬಿಎಲ್ - ಟ್ಯೂನ್ಡ್ ಸೌಂಡ್ ಸಿಸ್ಟಮ್, 360 - ಡಿಗ್ರಿ ಕ್ಯಾಮೆರಾ, ಸನ್‌ರೂಫ್ ಸೇರಿದಂತೆ ಹತ್ತಾರು ಫೀಚರ್ಸ್ ಗಳನ್ನು ಹೊಂದಿವೆ.
ಎಂಜಿನ್: ಸಫಾರಿಯ ಬಾನೆಟ್ ಅಡಿಯಲ್ಲಿ, ನೀವು ಇನ್ನೂ Stellantis-ಮೂಲದ 2.0-ಲೀಟರ್ Kryotec, ಟರ್ಬೋಚಾರ್ಜ್ಡ್ ಇನ್‌ಲೈನ್, ನಾಲ್ಕು-ಪಾಟ್ ಡೀಸೆಲ್ ಎಂಜಿನ್ ಅನ್ನು ಕಾಣಬಹುದು. ಇದು 3,750 rpm ನಲ್ಲಿ 168bhp ಪವರ್ ಮತ್ತು 1,750 ಮತ್ತು 2,500rpm ನಡುವೆ 350Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ (TATA Safari VS TATA Harrier:).
ಟಾಟಾ ಹ್ಯಾರಿಯರ್ ಎಸ್‌ಯುವಿ ಎಂಜಿನ್ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 2.0 - ಲೀಟರ್ ಡೀಸೆಲ್ ಎಂಜಿನ್ ಒಳಗೊಂಡಿದ್ದು, 170 hp ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ 6 - ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಈ ಎಸ್‍ಯುವಿ ಇಕೋ, ಸಿಟಿ ಮತ್ತು ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್ ಆಯ್ಕೆಯನ್ನು ಹೊಂದಿದೆ.


Click it and Unblock the Notifications