ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ 600 ಕಿಮೀ ರೇಂಜ್ ಕೊಡುವ ಟಾಟಾ ಕಾರು: ಇಷ್ಟು ದಿನ ಕಾದಿದ್ದು ಸಾರ್ಥಕವಾಯಿತು!
ಭಾರತದ ಹೆಮ್ಮೆಯ ಕಾರು ನಿರ್ಮಾಣ ಕಂಪನಿ ಟಾಟಾ ಮೋಟಾರ್ಸ್ ದೊಡ್ಡ ದೊಡ್ಡ ಯೋಜನೆಗಳನ್ನು ಹಾಕಿಕೊಂಡಿರುವುದು ನಿಮಗೆಲ್ಲಾ ತಿಳಿದೇ ಇದೆ. ಈಗಾಗಲೇ ಟಾಟಾ ತನ್ನ ಕರ್ವ್ ಇವಿಯನ್ನು ಮಾರುಕಟ್ಟೆಗೆ ತರುವ ಯೋಜನೆಯಲ್ಲಿದ್ದು, ಕೆಲವೇ ದಿನಗಳಲ್ಲಿ ಆ ಕಾರು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದಾದ ನಂತರ ಟಾಟಾ ಭಾರತೀಯ ಮಾರುಕಟ್ಟೆಯಲ್ಲಿ ಹಲವು ಎಲೆಕ್ಟ್ರಿಕ್ ಕಾರುಗಳನ್ನು ಸಾಲು ಸಾಲಾಗಿ ಲಾಂಚ್ ಮಾಡಲಿದ್ದು ಅದರಲ್ಲಿ ಟಾಟಾ ಹ್ಯಾರಿಯರ್ ಇವಿಯೂ ಒಂದು. ಈಗಾಗಲೇ ಕಂಪನಿ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಕಾರಿನ ಕುರಿತಾಗಿನ ಮಹತ್ವದ ವಿಷಯವನ್ನು ಮಾಧ್ಯಮಗಳ ಮುಂದಿಟ್ಟಿದೆ.
ಮಾಹಿತಿಗಳ ಪ್ರಕಾರ ಈ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ (TATA Harrier Electric) ಕಾರನ್ನು ಇದೇ ವರ್ಷ ಕಂಪನಿ ಭಾರತೀಯ ಮಾರುಕಟ್ಟೆಗೆ ತರಲಿದೆ ಎಂಬ ಮಾಹಿತಿಗಳು ಹೊರಬಿದ್ದಿದೆ. ಟಾಟಾ ಮೋಟಾರ್ಸ್‌ನ ಯೋಜನೆಯ ಪ್ರಕಾರ ಕಂಪನಿಯು ಈ ವಾಹನವನ್ನು ಮಾರ್ಚ್ 31, 2025 ರ ಒಳಗಾಗಿ ಮಾರುಕಟ್ಟೆಗೆ ತರಲಿದೆ. ಈ ಹಬ್ಬದ ಸೀಸನ್‌ನಲ್ಲಿ ಕರ್ವ್ ಮಾರುಕಟ್ಟೆಗೆ ಬರಲಿದೆ.

ಕರ್ವ್‌ನ ನಂತಹ ಟಾಟಾದ ಮುಂದಿನ ಲಾಂಚ್ ಇದಾಗಬಹುದು ಎಂಬುದು ಎಲ್ಲರ ಅಭಿಪ್ರಾಯ. ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಅನ್ನು ಕಂಪನಿಯು ಕಳೆದ ಬಾರಿಯ ಆಟೋ ಎಕ್ಸ್ಪೋದಲ್ಲಿ ಪ್ರದರ್ಶನಕ್ಕೆ ಇಟ್ಟಿತ್ತು. ಈ ಸಂಧರ್ಭದಲ್ಲಿ ಹಲವಾರು ಸುದ್ದಿಗಳು ಈ ಕಾರಿನ ಕುರಿತಾಗಿ ಓಡಾಡಿದ್ದವು. ಇದೀಗ ಆ ಸುದ್ದಿಗಳು ನಿಜವಾಗಲಿದ್ದು, ಟಾಟಾ ಹ್ಯಾರಿಯರ್ ಇವಿ ಭಾರೀ ಸದ್ದು ಮಾಡುವ ನಿರೀಕ್ಷೆ ಇದೆ.
ಈ ಕಾರು ರೂ.30 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಸಂಪೂರ್ಣ ಚಾರ್ಜ್‌ನಲ್ಲಿ 600 ಕಿ.ಮೀ ರೇಂಜ್ (ಮೈಲೇಜ್) ಕೊಡಬಹುದು. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡುಯಲ್-ಜೋನ್ ಆಟೋಮೆಟಿಕ್ ಎಸಿ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರಬಹುದು ಎಂದು ಹೇಳಲಾಗಿದೆ.

ಹೊಸ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿ ಮಾದರಿಯು ಹೊಸ ಬ್ಲಾಂಕ್ಡ್-ಆಫ್ ಗ್ರಿಲ್, ಕೋನೀಯ ಕ್ರೀಸ್‌ಗಳೊಂದಿಗೆ ಪರಿಷ್ಕೃತ ಮುಂಭಾಗದ ಬಂಪರ್, ಸ್ಪ್ಲಿಟ್ ಸೆಟಪ್ ಮತ್ತು ಬ್ಲ್ಯಾಕ್ ಹೌಸಿಂಗ್‌ನೊಂದಿಗೆ ಹೆಡ್‌ಲ್ಯಾಂಪ್‌ಗಳು ಮತ್ತು ಅದರ ಅಗಲವಾಗಿರುವ ಹೊಸ LED ಲೈಟ್ ಬಾರ್ ಅನ್ನು ಒಳಗೊಂಡಿದೆ. ಈ ಎಸ್‍ಯುವಿ ಸೆಂಟ್ರಲ್ ಏರ್ ಇನ್‌ಟೇಕ್ ಅನ್ನು ಬ್ಲಾಂಕ್ಡ್-ಆಫ್ ಪ್ಯಾನೆಲ್‌ನೊಂದಿಗೆ ಮರುವಿನ್ಯಾಸಗೊಳಸಿದೆ.
ಈ ಹೊಸ ಟಾಟಾ ಎಲೆಕ್ಟ್ರಿಕ್ ಎಸ್‍ಯುವಿಯು ಇಂಡೆಂಟ್‌ಗಳೊಂದಿಗೆ ಟ್ವೀಕ್ ಮಾಡಿದ ಬಂಪರ್ ಮತ್ತು ಹೆಚ್ಚುವರಿ ಬಾಡಿ ಕ್ಲಾಡಿಂಗ್ ಅನ್ನು ಹೊಂದಿದೆ. ಹೊಸ ಪಂಚ್ ಎಲೆಕ್ಟಿಕ್ ಮಾದರಿಯಂತೆಯೇ ಹ್ಯಾರಿಯರ್ ಎಲೆಕ್ಟಿಕ್ ಎಸ್‍ಯುವಿಯನ್ನು Acti.ev ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ , ಫ್ರಂಟ್-ವೀಲ್ ಡ್ರೈವ್ (FWD), ರಿಯರ್-ವೀಲ್ ಡ್ರೈವ್ (RWD), ಮತ್ತು ಆಲ್-ವೀಲ್ ಡ್ರೈವ್ (AWD) ಸಿಸ್ಟಮ್‌ಗಳನ್ನು ಸಂಪೂರ್ಟ್ ಮಾಡುತ್ತದೆ.

ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿ ಜೊತೆಗೆ ಟಾಟಾ ಇತರ ಮಾದರಿಗಳನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಪ್ರದರ್ಶಿಸಿತು, ಅದರ ಉತ್ಪಾದನೆ-ಸಿದ್ಧ ರೂಪದಲ್ಲಿ Curvv ಕೂಪ್, Altroz Racer, ನೆಕ್ಸಾನ್ iCNG ಮತ್ತು ಸಫಾರಿ Dark Edition ಅನ್ನು ಪ್ರದರ್ಶಿಸಿತು. ಇನ್ನು ಈ ಬಹುನಿರೀಕ್ಷಿತ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications