ರತನ್ ಟಾಟಾ ಹೆಜ್ಜೆಯನ್ನೇ ಹಿಂಬಾಲಿಸಲಿದೆ ಕಂಪನಿ: ಹ್ಯಾರಿಯರ್ ಇವಿಯಲ್ಲಿ ಸಿಗಲಿದೆ ಬಹುದೊಡ್ಡ ಅಪ್‌ಡೇಟ್
ಪ್ರಸಿದ್ದ ಕಾರು ತಯಾರಿಕಾ ಕಂಪನಿಯಾದ ಟಾಟಾ ವಾಹನ ಕ್ಷೇತ್ರದಲ್ಲಿ ಹಲವಾರು ಯಶಸ್ವೀ ಪ್ರಯೋಗಗಳನ್ನು ನಡೆಸಿಕೊಂಡು ಬಂದಿದ್ದು ಇಂದು ಭಾರತೀಯರ ನೆಚ್ಚಿನ ಕಾರ್ ಬ್ರಾಂಡ್ ಆಗಿ ಬದಲಾಗಿದೆ. ಇವಿ ಕ್ಷೇತ್ರದಲ್ಲೂ ಭಾರೀ ಮುನ್ನಡೆ ಸಾಧಿಸುತ್ತಿದ್ದು ಇನ್ನು ಕೆಲವೇ ತಿಂಗಳಲ್ಲಿ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಅನ್ನು ಮಾರುಕಟ್ಟೆಗೆ ತರಲಿದೆ ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ಈ ಕಾರಿನ ಡಿಸೈನ್ ಸೋರಿಕೆಯಾಗಿದ್ದು, ಹಲವು ವಿಶಿಷ್ಟ ಫೀಚರ್‌ಗಳಿದೆ ಎಂದು ಊಹಿಸಲಾಗಿದೆ.
ಸೋರಿಕೆಯಾದ ವಿನ್ಯಾಸದ ಪೇಟೆಂಟ್ ಟಾಟಾ ಮೋಟಾರ್ಸ್ ತನ್ನ ಎಸ್‌ಯುವಿಗಳಿಗೆ ಆಲ್ ವ್ಹೀಲ್ ಡ್ರೈವ್ ಮೋಡ್‌ಗಳನ್ನು ಪರಿಚಯಿಸಲು ಕೆಲಸ ಮಾಡುತ್ತಿದೆ ಎಂದು ಬಹಿರಂಗಪಡಿಸಿದೆ. ಪೇಟೆಂಟ್ ಏಳು ವಿಭಿನ್ನ ವಿಧಾನಗಳೊಂದಿಗೆ ರೋಟರಿ ನಾಬ್ ಅನ್ನು ತೋರಿಸುತ್ತದೆ, ಹಿಮ, ಮರಳು ಮತ್ತು ಕಸ್ಟಮ್ ಮೋಡ್ ಅನ್ನು ಒಳಗೊಂಡಿರುತ್ತದೆ. ಮುಂಬರುವ ಹ್ಯಾರಿಯರ್ ಎಲೆಕ್ಟ್ರಿಕ್ ಯಿಂದ ಪ್ರಾರಂಭವಾಗುವ ಭವಿಷ್ಯದ ಟಾಟಾ ಎಸ್‌ಯುವಿಗಳು ಗಳು ಆಲ್-ವೀಲ್-ಡ್ರೈವ್ (AWD) ಅಥವಾ 4x4 ಕಾನ್ಫಿಗರೇಶನ್ ಅನ್ನು ಪಡೆಯುತ್ತವೆ ಎಂದು ಸೋರಿಕೆ ಸೂಚಿಸುತ್ತದೆ.

ಹೀಗೇನಾದರೂ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಅಥವಾ ಮುಂಬರಲಿರುವ ಎಸ್‌ಯುವಿಗಳಲ್ಲಿ ಆಲ್-ವೀಲ್-ಡ್ರೈವ್ (AWD) ಅಥವಾ 4x4 ಕಾನ್ಫಿಗರೇಶನ್ ಬಂದರೆ ಅದೊಂದು ಭಾರೀ ದೊಡ್ಡ ಪ್ಲಸ್ ಪಾಯಿಂಟ್ ಆಗಿರಲಿದೆ ಎಂದೇ ಹೇಳಬಹುದು. ಅದಕ್ಕಾಗಿಯೇ ಎಂದೆನಿಸುತ್ತದೆ, ಭವಿಷ್ಯದ SUV ಗಳಲ್ಲಿ ಕಾಣಬಹುದಾದ ಭೂಪ್ರದೇಶ ಮೋಡ್ ಲಿವರ್‌ಗಾಗಿ ಟಾಟಾ ವಿನ್ಯಾಸ ಪೇಟೆಂಟ್ ಅನ್ನು ಸಲ್ಲಿಸಿರುವುದು.
ಕಳೆದ ಬಾರಿ ನಡೆದ ಆಟೋ ಎಕ್ಸ್ಪೋದಲ್ಲಿ ಟಾಟಾ ಈ ಹ್ಯಾರಿಯರ್ ಎಲೆಕ್ಟ್ರಿಕ್‌ನ (Tata Harrier EV) ಕಾನ್ಸೆಪ್ಟ್ ಅನ್ನು ರಿವೀಲ್ ಮಾಡಿತ್ತು. ಆ ಸಂಧರ್ಭದಲ್ಲಿ ಸಾಕಷ್ಟು ಜನರ ಗಮನ ಸೆಳೆದಿದ್ದ ಈ ಕಾರು, ಇದೀಗ ಕೆಲವೇ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ ದಾಪುಗಾಲಿಡಲಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿಗಳು ಹೊರಬರಬೇಕಷ್ಟೇ.

ಇನ್ನು ಮುಂಬರಲಿರುವ ಈ ಟಾಟಾ ಹ್ಯಾರಿಯರ್ ಇವಿ ಫೂಲ್ ಚಾರ್ಜ್‌ನಲ್ಲಿ 500 ಕಿಮೀ ರೇಂಜ್ ನೀಡಲಿದ್ದು, ಇದು 80% ಬ್ಯಾಟರಿ ಸಹಾಯದಿಂದ 400 ಕಿಮೀ ವರೆಗೂ ರೇಜ್ ನೀಡಲಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಟಾಟಾ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ಯಾಸೆಂಜರ್ ವೆಹಿಕಲ್ ಮ್ಯಾನೇಜಿಂಗ್ ಡೈರೆಕ್ಟರ್ ಆದ ಶೈಲೇಶ್ ಚಂದ್ರ ಸಹ ಈ ಸುದ್ದಿಯನ್ನು ಮಾಧ್ಯಮಗಳಿಗೆ ಖಚಿತ ಪಡಿಸಿದ್ದರು.
ಇನ್ನು ಈಗಿರುವ ಟಾಟಾ ಹ್ಯಾರಿಯರ್ ಬಹುತೇಕರ ನೆಚ್ಚಿನ ಎಸ್‌ಯುವಿ ಆಗಿ ಬದಲಾಗಿದೆ. ಹೌದು, ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‌ಯುವಿ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 2.0 -ಲೀಟರ್ ಡೀಸೆಲ್ ಎಂಜಿನ್ ಒಳಗೊಂಡಿದ್ದು, 170 hp ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ರೂಪಾಂತರಗಳ ಅನ್ವಯ 6 ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ.
ಟಾಟಾ (Tata) ಕಂಪನಿ, ಹ್ಯಾರಿಯರ್ ಎಸ್‌ಯುವಿಯನ್ನು 1 ಲಕ್ಷಕ್ಕೂ ಅಧಿಕ ಯುನಿಟ್ ಮಾರಾಟ ಮಾಡಿ, ಮೈಲಿಗಲ್ಲನ್ನು ನಿರ್ಮಾಣ ಮಾಡಿದೆ. 2019ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಈ ಮಿಡ್ ಸೈಜ್ ಎಸ್‌ಯುವಿಯು ನಾಲ್ಕೂವರೆ ವರ್ಷಗಳಲ್ಲಿಯೇ ದೊಡ್ಡಮಟ್ಟದ ಸಾಧನೆ ಮಾಡಿರುವುದು ವಿಶೇಷವಾಗಿದೆ. ಐದು ಆಸನ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಸಫಾರಿ ಎಸ್‌ಯುವಿಯಷ್ಟೇ ಜನಪ್ರಿಯತೆ ಗಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








