Tata: ಭಾರತದಲ್ಲಿ ಟಾಟಾದಿಂದ ಎಲೆಕ್ಟ್ರಿಕ್ ಕ್ರಾಂತಿ.. 2025ರ ವೇಳೆಗೆ ನಂಬರ್ 1 ಪಕ್ಕಾ!

ಭಾರತದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿ ಟಾಟಾ ಮೋಟಾರ್ಸ್ (Tata Motors) ಗುರುತಿಸಿಕೊಂಡಿದೆ. ಕಂಪನಿಯು ಮಾರಾಟಗೊಳಿಸುವ ಕಾರುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಪಡೆದಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿ ದೊರೆಯುವುದರೊಂದಿಗೆ ಸುರಕ್ಷತೆಗೂ ಹೆಸರುವಾಸಿಯಾಗಿರುವುದರಿಂದ ಬಹುತೇಕರ ಆಯ್ಕೆಯ ವಾಹನಗಳಾಗಿವೆ. ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನ (Electric vehicle - EV) ತಯಾರಿಕೆಯಲ್ಲಿಯೂ ಟಾಟಾ ಮೋಟಾರ್ಸ್ ಮುಂದಿದೆ. ದೇಶೀಯ ಮಾರುಕಟ್ಟೆಯ ಈ ವಿಭಾಗದಲ್ಲಿ ಕೂಡ ದೊಡ್ಡಮಟ್ಟದ ಪಾಲನ್ನು ಹೊಂದಿದ್ದು, ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ನೀಡಲು 2025ರೊಳಗೆ ಸುಮಾರು 10 ಎಲೆಕ್ಟ್ರಿಕ್ ಕಾರುಗಳನ್ನು ಹೊಂದುವ ನಿರೀಕ್ಷೆಯಿದೆ.

ಸದ್ಯ ಟಾಟಾದ ಎಲೆಕ್ಟ್ರಿಕ್ ವಾಹನಗಳ ಲೈನ್ಅಪ್ ಬಲವಾಗಿದ್ದು, ಟಿಯಾಗೊ ಇವಿ, ಟಿಗೂರ್, ಪಂಚ್ ಇವಿ, ನೆಕ್ಸಾನ್ ಇವಿ ಹಾಗೂ ಎಕ್ಸ್-ಪ್ರೆಸ್ ಟಿ ಮಾದರಿಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಎಲೆಕ್ಟ್ರಿಕ್ ಚಾಲಿತ ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿರುವ ಟಾಟಾ ಮೋಟಾರ್ಸ್ ಆಡಳಿತವು, ಮುಂದಿನ ವರ್ಷದ (2025) ಅಂತ್ಯದೊಳಗೆ 10 ಬಗೆಬಗೆಯ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟಗೊಳಿಸಲು ಯೋಜಿಸಿದೆ ಎಂದು ವರದಿಯಾಗಿದೆ.

Tata Have 10 Electric Cars It portfolio By 2025 Revolution In Ev Market

ಮುಂಬರಲಿರುವ ಮಾರುತಿ ಸುಜುಕಿ ಇವಿಎಕ್ಸ್ ಮತ್ತು ಹ್ಯುಂಡೈ ಕ್ರೆಟಾ ಇವಿಗಳಿಗೆ ಭಾರೀ ಸ್ಪರ್ಧೆಯೊಡ್ಡಲು ಬಹುಶಃ ಇದೇ ವರ್ಷ ಟಾಟಾದ ಕರ್ವ್ ಇವಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಆ ಬಳಿಕ ಹ್ಯಾರಿಯರ್ ಇವಿ ಹಾಗೂ ಸಫಾರಿ ಇವಿಗಳು ಬರಲಿದ್ದು, 2025ರಲ್ಲಿ ಸಿಯೆರಾ ಇವಿ ಮತ್ತು ಅವಿನ್ಯಾ ಇವಿಯನ್ನು ಪರಿಚಯಿಸಬಹುದು ಎಂದು ನುರಿತ ಆಟೋಮೊಬೈಲ್ ಮಾರುಕಟ್ಟೆಯ ತಜ್ಞರು ಹೇಳುತ್ತಿದ್ದಾರೆ.

ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಟಾಟಾ ಕರ್ವ್ (Tata Curvv) ಇವಿ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದೊಂದು ಕೂಪ್ ಎಸ್‌ಯುವಿಯಾಗಿದೆ. ಎಲೆಕ್ಟ್ರಿಕ್ ಹಾಗೂ ಇಂಧನ ಚಾಲಿತ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದ್ದು, ಈಗಾಗಲೇ ಹಲವು ಬಾರಿ ಪ್ರಾಯೋಗಿಕ ಸಂಚಾರವನ್ನು ನಡೆಸುವಾಗ ಕಂಡುಬಂದಿದೆ. ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿರುವ 'ಕರ್ವ್' ಕಾರು ಶಕ್ತಿಯುತ ಬ್ಯಾಟರಿ ಪ್ಯಾಕ್ ಪಡೆದಿರಲಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 500 ಕಿ.ಮೀ ಕ್ರಮಿಸಬಹುದು ಎಂದು ಅಂದಾಜಿಸಲಾಗಿದೆ.

Tata Have 10 Electric Cars It portfolio By 2025 Revolution In Ev Market

ಪ್ರಸ್ತುತ ಗ್ರಾಹಕರಿಗೆ ಖರೀದಿಗೆ ಲಭ್ಯವಿರುವ ಟಾಟಾ ನೆಕ್ಸಾನ್ ಇವಿ (Tata Nexon EV) ಕುರಿತು ಮಾತನಾಡೋಣ. ಈ ಕಾರು, ರೂ.14.49 ಲಕ್ಷದಿಂದ ರೂ.19.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 30 ಕೆಡಬ್ಲ್ಯೂಹೆಚ್ ಮತ್ತು 40.5 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಪೂರ್ತಿ ಚಾರ್ಜ್ ನಲ್ಲಿ 325 ರಿಂದ 465 ಕಿಲೋಮೀಟರ್ ರೇಂಜ್ ನೀಡುತ್ತದೆ.

ಟಾಟಾ ಪಂಚ್ ಇವಿ (Tata Punch EV) ಕೂಡ ಕೈಗೆಟುಕುವ ಬೆಲೆಯಲ್ಲಿ ಸಿಗಲಿದ್ದು, ರೂ.10.99 ಲಕ್ಷದಿಂದ ರೂ.15.49 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. 25 ಕೆಡಬ್ಲ್ಯೂಹೆಚ್ ಹಾಗೂ 35 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಭರ್ತಿ ಚಾರ್ಜ್ ನಲ್ಲಿ 315 ರಿಂದ 421 ಕಿ.ಮೀ ರೇಂಜ್(ಮೈಲೇಜ್) ಕೊಡುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಟಿಯಾಗೊ ಇವಿ (Tata Tiago EV) ಕುರಿತು ಹೇಳುವುದಾದರೆ, ಈ ಕಾರು ರೂ.7.99 ಲಕ್ಷದಿಂದ ರೂ.11.89 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಸಂಪೂರ್ಣ ಚಾರ್ಜ್ ನಲ್ಲಿ 250 ರಿಂದ 315 ಕಿ.ಮೀ ಓಡುತ್ತದೆ. ಟಿಗೂರ್ ಇವಿ (Tigor EV), ರೂ.12.49 ಲಕ್ಷದಿಂದ ರೂ.13.75 ಲಕ್ಷ ದರದಲ್ಲಿ ಸಿಗುತ್ತದೆ. ಪೂರ್ತಿ ಚಾರ್ಜ್ ನಲ್ಲಿ 315 ಕಿಲೋಮೀಟರ್ ಓಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, June 1, 2024, 11:15 [IST]
English summary
Tata have 10 electric cars it portfolio by 2025 revolution in ev market
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+