Tata: ಆಕಾಶದೆತ್ತರಕ್ಕೆ ಟಾಟಾ... ನೆಕ್ಸಾನ್, ಟಿಯಾಗೊ ಇವಿಗಳಿಗೆ ಶೋರೂಂ ಎದುರು ಕ್ಯೂ ನಿಂತ ಗ್ರಾಹಕರು!

ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ಶುಕ್ರವಾರ ಫೆಬ್ರವರಿ ತಿಂಗಳ ಮಾರಾಟ ವರದಿಯನ್ನು ಪ್ರಕಟಿಸಿದೆ. ಒಟ್ಟು 86,406 ಯುನಿಟ್ ವಾಹನಗಳನ್ನು ಮಾರಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (79,705 ಯುನಿಟ್) ಶೇಕಡ 8.4% ಪ್ರಗತಿಯನ್ನು ಕಂಡಿದೆ.

ಪ್ರಯಾಣಿಕ ವಾಹನ ಮಾರಾಟ ವಿಚಾರಕ್ಕೆ ಬರುವುದಾದರೆ ಟಾಟಾ ಮೋಟಾರ್ಸ್, ದೊಡ್ಡಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ತಿಂಗಳು 51,321 ಯುನಿಟ್ ಕಾರುಗಳನ್ನು ಮಾರಾಟಗೊಳಿಸಿ, ವರ್ಷದಿಂದ ವರ್ಷಕ್ಕೆ 19% ಮುನ್ನಡೆ ಸಾಧಿಸಿದೆ. ಅದೇ 2023ರ ಫೆಬ್ರವರಿಯಲ್ಲಿ 43,140 ಯುನಿಟ್ ಸೇಲ್ ಮಾಡಿತ್ತು. ಎಲೆಕ್ಟ್ರಿಕ್ ವಾಹನ (ಇವಿ) ಮಾರಾಟದಲ್ಲಿಯೂ ಟಾಟಾ ಒಳ್ಳೆಯ ಫಸಲನ್ನೇ ತೆಗೆದಿದೆ. ಹೋದ ತಿಂಗಳು 6,923 ಯುನಿಟ್ ಇವಿಗಳನ್ನು ಮಾರಿದೆ.

Tata Motors february sales Report 8 4 percent growth Nexon EV Tiago EV get huge demand

ಟಾಟಾ ಕಂಪನಿಯು ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಉತ್ತಮವಾದ ಪ್ರಗತಿ ಕಾಣಲು ನೆಕ್ಸಾನ್ ಹಾಗೂ ಟಿಯಾಗೊ ಇವಿಗಳ ಕೊಡುಗೆ ಸಹ ಮುಖ್ಯವಾಗಿದೆ. ಈ ಕಾರುಗಳನ್ನು ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಇವಿ (Tata Nexon EV) ರೂ.14.74 ಲಕ್ಷದಿಂದ ರೂ.19.99 ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ.

ಟಾಟಾ ನೆಕ್ಸಾನ್ ಇವಿ 30 ಕೆಡಬ್ಲ್ಯೂಹೆಚ್ ಹಾಗೂ 40.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ ಆಯ್ಕೆಯಲ್ಲಿ ದೊರೆಯುತ್ತದೆ. ಪೂರ್ತಿ ಚಾರ್ಜ್ ಮಾಡಿದರೆ, 325 ಕಿಲೋಮೀಟರ್ ರಿಂದ 465 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌, ಆಲ್-ವೀಲ್ ಡಿಸ್ಕ್ ಬ್ರೇಕ್ಸ್ ಅನ್ನು ಒಳಗೊಂಡಿದೆ.

Tata Motors february sales Report 8 4 percent growth Nexon EV Tiago EV get huge demand

ಕಳೆದ ಜನವರಿ ತಿಂಗಳು ಬಿಡುಗಡೆಯಾದ ಟಾಟಾ ಪಂಚ್ ಇವಿ (Tata Punch EV), ರೂ.10.99 ಲಕ್ಷದಿಂದ ರೂ.15.49 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ. 25 ಕೆಡಬ್ಲ್ಯೂಹೆಚ್ (kWh) ಮತ್ತು 35 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್ ನಲ್ಲಿ 315 ರಿಂದ 421 ಕಿಲೋಮೀಟರ್ ಕ್ರಮಿಸುತ್ತದೆ.

ಪಂಚ್ ಇವಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌, 360-ಡಿಗ್ರಿ ಕ್ಯಾಮೆರಾ, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಒಳಗೊಂಡಿದೆ.

ಟಾಟಾ ಟಿಯಾಗೊ ಇವಿ (Tata Tiago EV), ರೂ.8.69 ಲಕ್ಷದಿಂದ ರೂ.12.09 ಲಕ್ಷ ಎಕ್ಸ್ ಶೋರೂಂ ದರದಲ್ಲಿ ದೊರೆಯುತ್ತದೆ. 19.2 ಕೆಡಬ್ಲ್ಯೂಹೆಚ್ (kWh) ಮತ್ತು 24 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಭರ್ತಿ ಚಾರ್ಜ್ ನಲ್ಲಿ 250 ಕಿಲೋಮೀಟರ್ ರಿಂದ 315 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ.

ಟಿಯಾಗೊ ಇವಿ ಬ್ಯಾಟರಿ ಪ್ಯಾಕ್ ಶೇಕಡ 10-80% ಚಾರ್ಜ್ ಆಗಲು ಕೇವಲ 57 ನಿಮಿಷ ಸಾಕು. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 4-ಸ್ಪೀಕರ್ ಹರ್ಮನ್ ಸೌಂಡ್ ಸಿಸ್ಟಮ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ಸಲುವಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, March 3, 2024, 11:00 [IST]
English summary
Tata motors february sales report 8 percent growth nexon ev tiago ev get huge demand
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+