ಟಾಟಾ ತಾಕತ್ತು: 20 ಲಕ್ಷ ಎಸ್‍ಯುವಿಗಳ ಮಾರಾಟ... ಭರ್ಜರಿ ಡಿಸ್ಕೌಂಟ್
ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಖ್ಯಾತಿಗಳಿಸಿದ್ದು, ದೇಶದಲ್ಲಿ 20 ಲಕ್ಷಕ್ಕೂ ಹೆಚ್ಚು ಎಸ್‌ಯುವಿಗಳನ್ನು ಮಾರಾಟ ಮಾಡುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಈ ಮೈಲಿಗಲ್ಲು ಸ್ಮರಣಾರ್ಥವಾಗಿ, ಟಾಟಾ ಮೋಟಾರ್ಸ್ ತಮ್ಮ ಎಸ್‍ಯುವಿ ಸರಣಿಗೆ ಅತ್ಯಾಕರ್ಷಕ ರಿಯಾಯಿತಿಯನ್ನು ಘೋಷಿಸಿದೆ. ಟಾಟಾ ಕಂಪನಿಯು ತನ್ನ ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಿಗೆ ಕಡಿಮೆ ಆರಂಭಿಕ ಬೆಲೆಗಳನ್ನು ಒಳಗೊಂಡಿದೆ. ಟಾಟಾ ಸಫಾರಿ ಎಸ್‍ಯುವಿಗೆ ಈಗ ರೂ.15.49 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ಟಾಟಾ ಹ್ಯಾರಿಯರ್ ರೂ.14.99 ಲಕ್ಷದ ಆರಂಭಿಕ ಬೆಲೆಯನ್ನು ಹೊಂದಿದೆ.
ಈ ಜನಪ್ರಿಯ ಟಾಟಾ ಎಸ್‍ಯುವಿಗಳಿಗೆ ರೂ.1.4 ಲಕ್ಷದವರೆಗೆ ರಿಯಾಯಿತಿಗಳನ್ನು ಘೋಷಿಸಿದೆ. ಈ ರಿಯಾಯಿತಿಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಹತ್ತಿರದ ಟಾಟಾ ಮೋಟಾರ್ಸ್ ಶೋರೂಮ್‌ಗೆ ಭೇಟಿ ನೀಡಿ. ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‍ಯುವಿಗಳು ಜನಪ್ರಿಯ ಮಾದರಿಗಳಾವೆ. ಟಾಟಾ ಹ್ಯಾರಿಯರ್ 5-ಸೀಟರ್ ಎಸ್‍ಯುವಿಯಾದರೆ, ಸಫಾರಿ 7-ಸೀಟರ್ ಎಸ್‍ಯುವಿಯಾಗಿದೆ. ಎರಡೂ ಎಸ್‍ಯುವಿಗಳ ನಡುವೆ ದೊಡ್ಡ ವ್ಯತ್ಯಾಸಗಳಿಲ್ಲ.

ಮೊದಲಿಗೆ ಈ ಟಾಟಾ ಹ್ಯಾರಿಯರ್ (Tata Harrier) ಫೇಸ್‌ಲಿಫ್ಟ್ ಮಾದರಿಯು ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಪ್ರಬಲ ಪ್ರತಿಸ್ಪರ್ಧಿಯಾಗಿದ್ದು, ಈಗಾಗಲೇ ಬುಕ್ಕಿಂಗ್ ಶುರುವಾಗಿದೆ. ಈ ಎಸ್‍ಯುವಿಯು ಲೂನಾರ್ ವೈಟ್, ಪೆಬಲ್ ಗ್ರೇ, ಸನ್ಲೈಟ್ ಯೆಲ್ಲೋ ಮತ್ತು ಕೊರಲ್ ರೆಡ್ ಸೇರಿದಂತೆ 6 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿರುತ್ತದೆ.
ಈ ಟಾಟಾ ಹ್ಯಾರಿಯರ್ ಎಸ್‍ಯುವಿ ಪ್ರತಿಯೊಬ್ಬರನ್ನು ಆಕರ್ಷಿಸುವ ಡಿಸೈನ್ ಹೊಂದಿದೆ. ಮುಂಭಾಗದಲ್ಲಿ ಹಲವು ನವೀಕರಣಗಳನ್ನು ಒಳಗೊಂಡಿದ್ದು, ಹೊಸದಾದ ಗ್ರಿಲ್, ಸ್ಪ್ಲಿಟ್ ಹೆಡ್‌ಲೈಟ್ ಪಡೆದಿದೆ. ಜೊತೆಗೆ ಗ್ರಿಲ್ ಮೇಲ್ಭಾಗ ಫುಲ್-ವಿಡ್ತ್ (ಅಗಲ) ಎಲ್ಇಡಿ ಲೈಟ್ ಬಾರ್ ಹೊಂದಿದೆ. ಇದರೊಂದಿಗೆ ಬಂಪರ್ ಕೂಡ ಹೊಸದಾಗಿದ್ದು, ಸೈಡ್ ಪ್ರೊಫೈಲ್‌ನಲ್ಲಿ ಹ್ಯಾರಿಯರ್ ಫೇಸ್‌ಲಿಫ್ಟ್ ಅಷ್ಟಾಗಿ ಬದಲಾವಣೆ ಪಡೆದಿಲ್ಲ. 18 ಹಾಗೂ 19 ಇಂಚಿನ ಅಲಾಯ್ ವೀಲ್ಸ್ ಅನ್ನು ಹೊಂದಿದೆ.

ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‍ಯುವಿ ಹಿಂಭಾಗ ಹಲವು ಹೊಸತನವನ್ನು ಹೊಂದಿದೆ. ನವೀಕರಿಸಿದ ಬಂಪರ್ ಹಾಗೂ ಎಲ್ಇಡಿ ಲೈಟಿಂಗ್ ಅನ್ನು ಒಳಗೊಂಡಿದೆ. ಇದರ ಒಟ್ಟಾರೆ ವಿನ್ಯಾಸ ಕಳೆದ ಜನವರಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಹ್ಯಾರಿಯರ್ ಇವಿ ಮಾದರಿಗೆ ಹೋಲಿಕೆಯಾಗುತ್ತದೆ. ಇದರ ಒಳಭಾಗ ಮತ್ತು ಫೀಚಸ್: ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಒಳಭಾಗವು ಹಲವು ಬದಲಾವಣೆಗಳಾಗಿವೆ. ರೂಪಾಂತರಗಳಿಗೆ ಅನುಗುಣವಾಗಿ 10.25 - ಇಂಚು ಅಥವಾ 12.3 - ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಹೊಂದಿದೆ.
ಈ ಎಸ್‍ಯುವಿಯ ಎಲ್ಇಡಿ ಅಂಬಿಯೇಟ್ ಲೈಟಿಂಗ್, 10.25 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಾಟಾ ಲೋಗೋದೊಂದಿಗೆ ಹೊಸದಾದ 4- ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ - ಝೋನ್ ಕ್ಲೈಮೇಟ್ ಕಂಟ್ರೋಲ್, 10 - ಸ್ಪೀಕರ್ ಜೆಬಿಎಲ್ - ಟ್ಯೂನ್ಡ್ ಸೌಂಡ್ ಸಿಸ್ಟಮ್, 360 - ಡಿಗ್ರಿ ಕ್ಯಾಮೆರಾ, ಸನ್‌ರೂಫ್ ಸೇರಿದಂತೆ ಹತ್ತಾರು ಫೀಚರ್ಸ್ ಗಳನ್ನು ಹೊಂದಿವೆ.

ಟಾಟಾ ಸಫಾರಿ ಎಸ್‍ಯುವಿ ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಅಕಾಂಪ್ಲಿಶ್ಡ್ ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಮಾರಾಟವಾಗುತ್ತಿದೆ. ಈ ಟಾಟಾ ಸಫಾರಿ ಎಸ್‍ಯುವಿಯ ವಿನ್ಯಾಸ ಬಹುತೇಕ ಹ್ಯಾರಿಯರ್ ಮಾದರಿಯನ್ನು ಹೋಲುತ್ತದೆ. ಆದರೆ ಸಫಾರಿಯು 7-ಸೀಟರ್ ಆಗಿದೆ. ಈ ಟಾಟಾ ಸಫಾರಿ ಎಸ್‌ಯುವಿಗೆ ಎಂಜಿ ಹೆಕ್ಟರ್ ಪ್ಲಸ್, ಹ್ಯುಂಡೈ ಅಲ್ಕಾಜರ್ ಹಾಗೂ ಮಹೀಂದ್ರಾ ಎಕ್ಸ್‌ಯುವಿ700 ಪ್ರಬಲ ಎದುರಾಳಿಯಾಗಿವೆ.
ಟಾಟಾ ಹ್ಯಾರಿಯರ್ ಎಸ್‌ಯುವಿ ಎಂಜಿನ್ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 2.0 - ಲೀಟರ್ ಡೀಸೆಲ್ ಎಂಜಿನ್ ಒಳಗೊಂಡಿದ್ದು, 170 hp ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ 6 - ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಈ ಎಸ್‍ಯುವಿ ಇಕೋ, ಸಿಟಿ ಮತ್ತು ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್ ಆಯ್ಕೆಯನ್ನು ಹೊಂದಿದೆ.


Click it and Unblock the Notifications