ಡೀಸೆಲ್‌ ಎಂಜಿನ್‌ನೊಂದಿಗೆ ಜೂಜಾಟವಾಡುತ್ತಿದೆ ಟಾಟಾ: ಡೀಸೆಲ್‌ ಎಂಜಿನ್‌ ಬೇಡಿಕೆ ಸದ್ಯಕ್ಕೆ ಕಡಿಮೆಯಾಗಲ್ಲವಂತೆ!

ಭಾರತದಲ್ಲಿ ವಾಯು ಮಾಲಿನ್ಯದ ಕುರಿತಾಗಿನ ಸರ್ಕಾರಿ ನಿಯಮಗಳು ಹೆಚ್ಚು ಕಟ್ಟುನಿಟ್ಟಾಗುತ್ತಾ ಹೋಗುತ್ತಿದ್ದು, ಡೀಸೆಲ್‌ ಎಂಜಿನ್‌ ಕಾರುಗಳು ಸಾಕಷ್ಟು ಸಂಖ್ಯೆಯಲ್ಲಿ ಕಡಿಮೆ ಆಗುತ್ತಿದೆ ಎಂದೇ ಹೇಳಬಹುದು. ಇದಕ್ಕೆ ಪ್ರಮುಖ ಕಾರಣ ಏನೆಂದರೆ, ಪೆಟ್ರೋಲ್‌ ಎಂಜಿನ್‌ ಹೊರ ಹಾಕುವ ಮಾಲಿನ್ಯಕ್ಕಿಂತಲೂ ಹೆಚ್ಚು ಡೀಸೆಲ್‌ ಎಂಜಿನ್‌ ಹೊರ ಸೂಸುತ್ತವೆ. ಆದುದರಿಂದ ಬಹುತೇಕ ಈ ಕಾರು ನಿರ್ಮಾಣ ಕಂಪನಿಗಳು ಡೀಸೆಲ್‌ ಎಂಜಿನ್‌ ಉತ್ಪಾದನೆಯನ್ನು ನಿಲ್ಲಿಸಿದ್ದು ಬೆರಳೆಣಿಯಷ್ಟು ಕಂಪನಿಗಳು ಮಾತ್ರ ಇತ್ತ ಗಮನ ಹರಿಸುತ್ತಿದೆ. ಅದರಲ್ಲಿ ಪ್ರಸಿದ್ದ ಕಾರು ನಿರ್ಮಾಣ ಕಂಪನಿಯಾದ ಟಾಟಾ ಸಹ ಒಂದು.

ನಿಮಗೆಲ್ಲಾ ತಿಳಿದಿರುವಂತೆ ಇತರ ಕಂಪನಿಗಳಿಗೆ ಹೋಲಿಸಿದರೆ ಟಾಟಾ, ಹೆಚ್ಚು ಡೀಸೆಲ್‌ ಎಂಜಿನ್ ಕಾರುಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಟಾಟಾದ ಫ್ಲಾಗ್‌ಶಿಪ್‌ ಕಾರುಗಳಾದ ಟಾಟಾ ಸಫಾರಿ ಮತ್ತು ಟಾಟಾ ಹ್ಯಾರಿಯರ್‌ ಕೇವಲ ಡೀಸೆಲ್‌ ಎಂಜಿನ್‌ನಲ್ಲಿ ಮಾತ್ರ ಲಭ್ಯವಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಟಾಟಾ ಕಂಪನಿಯು ಡೀಸೆಲ್‌ ಎಂಜಿನ್‌ ಬಳಸಿಕೊಂಡು ಜೂಜಾಡುತ್ತಿದೆ ಎಂದೇ ಹೇಳಬಹುದು.

Tata Motors is confident that diesel demand will continue to be robust moving forward

ಹೀಗನ್ನಲು ಪ್ರಮುಖ ಕಾರಣವೆಂದರೆ ಸರ್ಕಾರ ಯಾವಾಗ ಬೇಕಾದರೂ ಡೀಸೆಲ್ ಎಂಜಿನ್‌ ಮೇಲಿನ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಬಹುದು. ಟಾಟಾ, ಟಿಯಾಗೋ ಮತ್ತು ಟಿಗೋರ್‌ನಲ್ಲಿ 1.1 ಲೀಟರ್‌ನ ಡೀಸೆಲ್‌ ಎಂಜಿನ್ ಅನ್ನು ಬಳಸಿ ಆನಂತರದಲ್ಲಿ ಅದರ ಉತ್ಪಾದನೆಯನ್ನು ನಿಲ್ಲಿಸಿತ್ತು. ಆದರೆ ಕೆಲ ಸಮಯದ ನಂತರ ನೆಕ್ಸಾನ್ ಮತ್ತು ಆಲ್ಟ್ರೋಜ್‌ನಲ್ಲಿ ಮತ್ತೆ 1.5 ಲೀಟರ್‌ ಡೀಸೆಲ್‌ ಎಂಜಿನ್‌ ಅನ್ನು ಅಳವಡಿಸಿತ್ತು.

ಭಾರತದ ಹ್ಯಾಚ್‌ಬ್ಯಾಕ್‌ ಸೆಗ್ಮೆಂಟ್‌ನಲ್ಲಿ ಸದ್ಯಕ್ಕೆ ಆಲ್ಟ್ರೋಜ್‌ ಮಾತ್ರವೇ ಡೀಸೆಲ್‌ ಎಂಜಿನ್ ಆಯ್ಕೆಯಲ್ಲಿ ಬರುತ್ತಿರುವುದು. ಈ ಕಾರಿನ ಒಟ್ಟು ಮಾರಾಟದಲ್ಲಿ ಡೀಸೆಲ್‌ ಎಂಜಿನ್‌ ಕೇವಲ 8% ಅಷ್ಟೇ ಮಾರಾಟವಾಗುತ್ತಿದೆ. ಉಳಿದ ಮಾರಾಟದಲ್ಲಿ ಸಿಂಹ ಪಾಳು ಸಿಎನ್‌ಜಿ ಮತ್ತು ಆನಂತರದ್ದು ಪೆಟ್ರೋಲ್‌ ಎಂಜಿನ್‌ದು. ಆದರೆ ನೆಕ್ಸಾನ್‌ ವಿಷಯಕ್ಕೆ ಬಂದರೆ 2023 ರ ಮಾರಾಟವನ್ನು ಗಮನಿಸಿದರೆ ಸುಮಾರು 16% ನಷ್ಟು ಡೀಸೆಲ್‌ ಎಂಜಿನ್ ಮಾರಾಟವಾಗುತ್ತದೆ.

Tata Motors is confident that diesel demand will continue to be robust moving forward

ಟಾಟಾ ಪ್ಯಾಸೆಂಜರ್‌ ಎಲೆಕ್ಟ್ರಿಕ್‌ ಮೊಬಿಲಿಟಿಯ ಚೀಫ್‌ ಕಮರ್ಷಿಯಲ್ ಆಫೀಸರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀವಾತ್ಸವ ಅವರು ಈ ಮೇಲಿನ ಮಾಹಿತಿಯನ್ನು ಹಂಚಿಕೊಂಡಿದ್ದು, ಅವರ ಪ್ರಕಾರ ಡೀಸೆಲ್‌ ಎಂಜಿನ್‌ ಬೇಡಿಕೆ ಅಷ್ಟು ಬೇಗ ಕಡಿಮೆ ಆಗುವುದಿಲ್ಲ. ಇನ್ನೂ ಹಲವಾರು ವರ್ಷಗಳ ವರೆಗೆ ಟಾಟಾ ಡೀಸೆಲ್‌ ಎಂಜಿನ್‌ ಅನ್ನು ಉತ್ಪಾದನೆ ಮಾಡಲಿದೆ ಎಂದು ಹೇಳಿದ್ದಾರೆ.

ಹ್ಯಾರಿಯರ್‌ನಲ್ಲಿ ನೋಡುವುದಾದರೆ, 2.0 - ಲೀಟರ್ ಡೀಸೆಲ್ ಎಂಜಿನ್ ಒಳಗೊಂಡಿದ್ದು, 170 hp ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ 6 - ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಈ ಎಸ್‍ಯುವಿ ಇಕೋ, ಸಿಟಿ ಮತ್ತು ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್ ಆಯ್ಕೆಯನ್ನು ಹೊಂದಿದೆ.

ಹಾಗೆಯೇ ಸಫಾರಿ ಕಾರಿನಲ್ಲೂ 2.0-ಲೀಟರ್ Kryotec, ಟರ್ಬೋಚಾರ್ಜ್ಡ್ ಇನ್‌ಲೈನ್, ನಾಲ್ಕು-ಪಾಟ್ ಡೀಸೆಲ್ ಎಂಜಿನ್ ಅನ್ನು ಕಾಣಬಹುದು. ಇದು 3,750 rpm ನಲ್ಲಿ 168bhp ಪವರ್ ಮತ್ತು 1,750 ಮತ್ತು 2,500rpm ನಡುವೆ 350Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ಇವೆರಡೂ ಟಾಟಾದ ಪ್ರಮುಖ ಕಾರುಗಳಾಗಿದ್ದು ಭಾರೀ ಬೇಡಿಕೆಯಿದೆ ಈ ಕಾರುಗಳಿಗೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, June 22, 2024, 12:46 [IST]
English summary
Tata motors is confident that diesel demand will continue to be robust moving forward
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+