10 ಲಕ್ಷಕ್ಕೆ ಹೊಸ ಟಾಟಾ ಕಾರು ಬಿಡುಗಡೆ: ಸ್ಫೊರ್ಟಿ ಡಿಸೈನ್, ಸನ್‌ರೂಫ್, 6 ಏರ್‌ಬ್ಯಾಗ್
ರೇಸ್ ಪ್ರೇರಿತ ಸ್ಟೈಲಿಂಗ್, ಪವರ್‌ಫುಲ್ ಪರ್ಫಾಮೆನ್ಸ್ ಸೇರಿದಂತೆ ಸೆಗ್ಮೆಂಟ್‌ನಲ್ಲೇ ಮೊದಲ ವಿಶೇಷ ವೈಶಿಷ್ಟ್ಯಗಳೊಂದಿಗೆ ಟಾಟಾ ಆಲ್ಟ್ರೋಜ್ ರೇಸರ್ 9,49,000 ರೂ.ಗೆ (ಎಕ್ಸ್ ಶೋರೂಂ) ಬಿಡುಗಡೆಯಾಗಿದೆ. ಇದರ ಟಾಪ್ ಎಂಡ್ ಮಾಡಲ್ 9,98,900 ರೂ. ಬೆಲೆಯಿದೆ. ಆಕರ್ಷಕ ಫೀಚರ್‌ಗಳು, ವೇರಿಯೆಂಟ್‌ಗಳು ಸೇರಿದಂತೆ ಇಂಟೀರಿಯರ್ ಅನ್ನು ತುಂಬಾ ಸ್ಪೋರ್ಟಿಯಾಗಿ ಡಿಸೈನ್ ಮಾಡಲಾಗಿದೆ. ಈಗಾಗಲೇ ಮಾರಾಟದಲ್ಲಿರುವ ಆಲ್ಟ್ರೋಜ್ ಐ-ಟರ್ಬೊ ಅತ್ಯಂತ ಪವರ್‌ಫುಲ್ ಪೆಟ್ರೋಲ್ ಆಯ್ಕೆಯಾಗಿದ್ದರೂ ಹೊಸ ರೇಸರ್ ಎಡಿಷನ್ ಇನ್ನೂ ಪವರ್‌ಫುಲ್ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ.
ಸ್ಪೋರ್ಟಿ ಡಿಸೈನ್: ಟಾಟಾ ಆಲ್ಟ್ರೋಜ್ ರೇಸರ್ ಹೊಸ ರೇಸಿಂಗ್ ಪ್ರೇರಿತ ಬಣ್ಣವನ್ನು ಪಡೆದಿದೆ, ಅತ್ಯಾಕರ್ಷಕ ಡ್ಯುಯಲ್ ಟೋನ್ ಆರೆಂಜ್ ಮತ್ತು ಬ್ಲಾಕ್ ಥೀಮ್ ಅನ್ನು ಒಳಗೊಂಡಿದೆ. ಮತ್ತೊಂದು ಪ್ರಮುಖ ಹೈಲೈಟ್ ಎಂದರೆ ಬಾನೆಟ್ ಮತ್ತು ರೂಫ್ ಮೇಲೆ ವೈಟ್ ರೇಸಿಂಗ್ ಪಟ್ಟಿಗಳು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ. ಹೊಸ ಆಲ್ಟ್ರೋಜ್ ರೇಸರ್ ಕಾರು' ಅಟಾಮಿಕ್ ಆರೆಂಜ್, ಅವೆನ್ಯೂ ವೈಟ್ ಮತ್ತು ಪ್ಯೂರ್ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

ಸ್ಪೋರ್ಟಿ ಇಂಟೀರಿಯರ್: ಇಂಟೀರಿಯರ್‌ನಲ್ಲೂ ಅದೇ ಆರೆಂಜ್ ಬ್ಲಾಕ್ ಥೀಮ್ ಬಳಸಲಾಗಿದೆ. ಎಸಿ ವೆಂಟ್‌ಗಳು ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಆರೆಂಜ್ ಹೈಲೈಟ್‌ಗಳನ್ನು ಕಾಣಬಹುದು. ಸೀಟ್‌ಗಳು ಕೂಡ ಆರೆಂಜ್ ಮತ್ತು ವೈಟ್ ಬಣ್ಣದಲ್ಲಿ ರೇಸಿಂಗ್ ಪಟ್ಟಿಗಳನ್ನು ಹೊಂದಿವೆ. ಸೀಟ್‌ಗಳು, ಮುಂಭಾಗದ ಆರ್ಮ್‌ರೆಸ್ಟ್ ಮತ್ತು ಲೆದರ್ ಸ್ಟೀರಿಂಗ್ ವ್ಹೀಲ್ ಮೇಲೆ ಕಾಂಟ್ರಾಸ್ಟ್ ಕಲರ್ ಹೊಲಿಗೆಯು ಸ್ಪೋರ್ಟಿಯಾಗಿ ಕಾಣುತ್ತದೆ.
ಆಕರ್ಷಕ ಪೀಚರ್ಸ್: 360 ಡಿಗ್ರಿ ಕ್ಯಾಮೆರಾ, 10.25 ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ವೆಂಟಿಲೇಟೆಡ್ ಸೀಟ್‌ಗಳು ಮತ್ತು 6 ಏರ್‌ಬ್ಯಾಗ್‌ಗಳೊಂದಿಗೆ (ರೇಸರ್‌ನಲ್ಲಿ ಸ್ಟ್ಯಾಂಡರ್ಡ್) ಆಲ್ಟ್ರೊಜ್‌ನ ಲೈನ್ ಆವೃತ್ತಿಯ ಅಗ್ರಸ್ಥಾನದಲ್ಲಿದೆ. ಇದು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಒದಗಿಸುವ ಏಕೈಕ ಹ್ಯಾಚ್‌ಬ್ಯಾಕ್ ಆಗಿದ್ದು, ಹೆದ್ದಾರಿಗಳಲ್ಲಿ ಉತ್ಸಾಹಭರಿತ ಚಾಲನಾ ಅನುಭವ ನೀಡಲಿದೆ ಎಂದು ಟಾಟಾ ಹೇಳಿದೆ.

ವೇರಿಯೆಂಟ್: ಆಲ್ಟ್ರೊಜ್ ರೇಸರ್ 3 ರೂಪಾಂತರಗಳು (R1, R2 ಮತ್ತು R3) ಮೂರು ಬಣ್ಣಗಳ ಆಯ್ಕೆಯೊಂದಿಗೆ (ಪ್ಯೂರ್ ಗ್ರೇ, ಅಟಾಮಿಕ್ ಆರೆಂಜ್ ಮತ್ತು ಅವೆನ್ಯೂ ವೈಟ್) ಲಭ್ಯವಿದೆ. ಇದಲ್ಲದೆ, Altroz ಲೈನ್ ಅಪ್ ಅನ್ನು ಹೆಚ್ಚಿಸಿ, ಟಾಟಾ ಮೋಟಾರ್ಸ್ ಎರಡು ಹೊಸ ರೂಪಾಂತರಗಳನ್ನು (XZ LUX ಮತ್ತು XZ+S LUX) ಪರಿಚಯಿಸಿದೆ.
ಹಾಗೆಯೇ ಅದರ Altroz ಶ್ರೇಣಿಯಲ್ಲಿ ಒಂದು ರೂಪಾಂತರವನ್ನು (XZ+OS) ನವೀಕರಿಸಿದೆ. ಈ ಎರಡು ಹೊಸ ಹೆಚ್ಚುವರಿ ರೂಪಾಂತರಗಳು ಪೆಟ್ರೋಲ್ ಮ್ಯಾನುಯಲ್, ಪೆಟ್ರೋಲ್ DCA, ಡೀಸೆಲ್ ಮತ್ತು CNG ಪವರ್‌ಟ್ರೇನ್‌ಗಳ ಆಯ್ಕೆಯಲ್ಲಿ ಲಭ್ಯವಿರುತ್ತವೆ. ಮಾರುತಿ ಸುಜುಕಿ ಬಲೆನೊ, ಟೊಯೊಟಾ ಗ್ಲಾಂಝಾ, ಹ್ಯುಂಡೈ i20 ಎನ್‌ಲೈನ್‌ಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಟಾಟಾ ಆಲ್ಟ್ರೋಜ್ ರೇಸರ್ ಬಿಡುಗಡೆಯಾಗಿದೆ.

ಎಂಜಿನ್: ಆಲ್ಟ್ರೊಜ್‌ನ ಹಳೆಯ ಸಾಮಾನ್ಯ ವೇರಿಯೆಂಟ್‌ಗಳಲ್ಲಿ 1.2 ಲೀಟರಿನ ಐ-ಟರ್ಬೊ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಇದು 110 ಬಿಹೆಚ್‌ಪಿ ಪವರ್ ಹಾಗೂ 140 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಆದರೆ ರೇಸರ್ ಆವೃತ್ತಿಯು ನೆಕ್ಸಾನ್‌ನ 1.2-ಲೀಟರ್ ಟರ್ಬೊ ಪೆಟ್ರೋಲ್ ಘಟಕವನ್ನು ಹೊಂದಿದ್ದು, ಇದು 120 ಪಿಎಸ್ ಪವರ್ ಮತ್ತು 170 ಎನ್ಎಂ ಟಾರ್ಕ್ ಹೊರಹಾಕುತ್ತದೆ.
5-ಸ್ಟಾರ್ ರೇಟಿಂಗ್: ಸುರಕ್ಷತೆಯ ವಿಚಾರಕ್ಕೆ ಬಂದರೆ ಸ್ಟ್ಯಾಂಡರ್ಡ್ ಆಲ್ಟ್ರೊಜ್ ನಂತೆಯೇ ರೇಸರ್ ಎಡಿಷನ್ ಕೂಡ ಗ್ಲೋಬಲ್ ಎನ್‌ಸಿಎಪಿನಿಂದ 5-ಸ್ಟಾರ್ ರೇಟಿಂಗ್ ಪಡೆದಿರುತ್ತದೆ. ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಪಾರ್ಕಿಂಗ್ ಸೆನ್ಸಾರ್‌ಗಳು, 360° ಸರೌಂಡ್ ವ್ಯೂ ಕ್ಯಾಮೆರಾವನ್ನು ಆಲ್ಟ್ರೋಜ್ ರೇಸರ್ ಒಳಗೊಂಡಿದೆ.


Click it and Unblock the Notifications








