ಟಾಟಾದಿಂದ ಹೊಸ ರೇಸರ್ ಎಡಿಷನ್... ಟೀಸರ್ ಚಿತ್ರ ಬಿಡುಗಡೆ... ಹ್ಯುಂಡೈ i20ಗೆ ನಡುಕ ಶುರು!

ಟಾಟಾ ಮೋಟಾರ್ಸ್ (Tata Motors) ತನ್ನ ಆಲ್ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು ಹೆಚ್ಚಿನ ಪರ್ಫಾಮೆನ್ಸ್‌ನೊಂದಿಗೆ ಆಲ್ಟ್ರೊಜ್ ರೇಸರ್ ಆಗಿ ಬಿಡುಗಡೆ ಮಾಡಲು ನೋಡುತ್ತಿದೆ. ಈ ಪರ್ಫಾಮೆನ್ಸ್ ಆಧಾರಿತ ರೇಸರ್ ಕಾರು, ಜೂನ್ ತಿಂಗಳ ಮಧ್ಯದಲ್ಲಿ ಪಾದಾರ್ಪಣೆ ಮಾಡಲಿದ್ದು, ಇದೀಗ ಮೊದಲ ಟೀಸರ್ ಚಿತ್ರವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಈಗ ಮಾರಾಟದಲ್ಲಿರುವ ಸ್ಟ್ಯಾಂಡರ್ಡ್ ಆಲ್ಟ್ರೊಜ್‌ಗಿಂತ ರೇಸರ್ ಆವೃತ್ತಿ ಭಿನ್ನವಾಗಿ ಕಾಣಲು, ಹುಡ್ ಸೇರಿದಂತೆ ರೂಫ್, ORVM, ಪಿಲ್ಲರ್‌ಗಳು ಮತ್ತು ಅಲಾಯ್ ವೀಲ್‌ಗಳೆಲ್ಲವನ್ನು ಬ್ಲಾಕ್ ಔಟ್‌ನೊಂದಿಗೆ ಡಿಸೈನ್ ಮಾಡಲಾಗಿದೆ. ಇದಲ್ಲದೆ, ರೂಫ್ ಮತ್ತು ಹುಡ್ ಮೇಲೆ ಅವಳಿ ಬಿಳಿ ಪಟ್ಟಿಗಳನ್ನು ಹೊಂದಿದ್ದು, ಸ್ಪೋರ್ಟಿ ನೋಟವನ್ನು ಹೆಚ್ಚಿಸುತ್ತವೆ. ಕ್ಯಾಬಿನ್ ಬಿಳಿ ಅಕ್ಸೆಂಟ್‌ಗಳೊಂದಿಗೆ ಬ್ಲಾಕ್ ಮತ್ತು ರೆಡ್ ಥೀಮ್ ಅನ್ನು ಸಹ ಹೊಂದಿದೆ.

tata-motors-teased-new-altroz-racer-launch-details

ಇದು ಪಕ್ಕಾ ಹ್ಯುಂಡೈ ಐ20 ಎನ್‌ಲೈನ್, ಮಾರುತಿ ಸುಜುಕಿ ಬಲೆನೊ ಮತ್ತು ಟೊಯೊಟಾ ಗ್ಲಾಂಝಾಗೆ ಪ್ರತಿಸ್ಪರ್ಧಿಯಾಗಿದ್ದು, 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ ಅನ್ನು ಹೊಂದಿದೆ. ಈ ಎಂಜಿನ್ 118 ಬಿಹೆಚ್‌ಪಿ ಪವರ್ ಮತ್ತು 170 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಪವರ್ ಹ್ಯುಂಡೈ ಐ20 ಎನ್‌ಲೈನ್‌ನ 1.0-ಲೀಟರ್ ಟರ್ಬೊ ಎಂಜಿನ್‌ಗೆ ಸಮನಾಗಿದೆ.

ಈ ಟಾಟಾ ಆಲ್ಟ್ರೊಜ್ ರೇಸರ್ ಅನ್ನು 2023 ಆಟೋ ಎಕ್ಸ್‌ಪೋದಲ್ಲಿ ಮತ್ತು ಭಾರತ್ ಮೊಬಿಲಿಟಿ ಶೋ 2024 ರಲ್ಲಿ ಮೊದಲ ಬಾರಿ ಪ್ರದರ್ಶಿಸಲಾಗಿತ್ತು. ಆಗ ನಾವು ಕಂಡಂತೆ 10.25 ಇಂಚಿನ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ವೈರ್‌ಲೆಸ್ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ, ಮಲ್ಟಿಪಲ್ ಡ್ರೈವ್ ಮೋಡ್‌ಗಳು, ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಹೊಂದಿತ್ತು.

tata-motors-teased-new-altroz-racer-launch-details

ಜೊತೆಗೆ ಆರು ಏರ್ ಬ್ಯಾಗ್‌ಗಳು, ಎಚ್‌ಯುಡಿ, 360-ಡಿಗ್ರಿ ಕ್ಯಾಮೆರಾ ಸಿಸ್ಟಮ್, ಶಾರ್ಕ್ ಫಿನ್ ಆಂಟೆನಾ, ವೈರ್ ಲೆಸ್ ಚಾರ್ಜರ್, ಕೆಂಪು ಮತ್ತು ಬಿಳಿ ರೇಸಿಂಗ್ ಪಟ್ಟೆಗಳನ್ನು ಹೊಂದಿರುವ ಲೆದರ್ ಸೀಟ್‌ಗಳು, ಹೊಸದಾಗಿ ವಿನ್ಯಾಸಗೊಳಿಸಲಾದ 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳು, ಪ್ರೊಜೆಕ್ಟರ್ ಎಲ್ಇಡಿ ಹೆಡ್ ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳು, ಹಿಂಭಾಗದ ಎಸಿ ವೆಂಟ್‌ಗಳು ಮತ್ತು ರೇಸರ್ ಬ್ಯಾಡ್ಜಿಂಗ್ ಅನ್ನು ಹೊಂದಿದೆ.

ಇದು ಆಲ್ಫಾ (ಅಗೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್) ಪ್ಲಾಟ್ಫಾರ್ಮ್‌ನಲ್ಲಿ ನಿರ್ಮಿಸಲಾದ ಮೊದಲ ಮಾದರಿಯಾಗಿದ್ದು, ಗ್ಲೋಬಲ್ ಎನ್‌ಸಿಎಪಿಯಿಂದ ಪ್ರಭಾವಶಾಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದು 3,990 ಎಂಎಂ ಉದ್ದ, 1,755 ಎಂಎಂ ಅಗಲ ಮತ್ತು 1,523 ಎಂಎಂ ಎತ್ತರ ಮತ್ತು 2,501 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.

tata-motors-teased-new-altroz-racer-launch-details

ಟಾಟಾ ಮೋಟಾರ್ಸ್, ಈ ಆಲ್ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಶ್ರೇಣಿಯನ್ನು ಪರ್ಫಾಮೆನ್ಸ್ ಕೇಂದ್ರಿತ ಆಲ್ಟ್ರೊಜ್ ರೇಸರ್ ಆಗಿ ತಂದರೆ, ಸದ್ಯದ ಹ್ಯುಂಡೈ ಐ20 ಎನ್‌ಲೈನ್, ಮಾರುತಿ ಸುಜುಕಿ ಬಲೆನೊ ಮತ್ತು ಟೊಯೊಟಾ ಗ್ಲಾಂಝಾ ತೀವ್ರ ಪೈಪೋಟಿ ಎದುರಿಸಲಿವೆ. ಇನ್ನು ಕೆಲವೇ ದಿನಗಳಲ್ಲಿ ಟಾಟಾ ಮೋಟಾರ್ಸ್ ಈ ಕಾರಿಗಾಗಿ ಬುಕಿಂಗ್ ಕೂಡ ಆರಂಭಿಸಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, May 27, 2024, 18:18 [IST]
English summary
Tata motors teased new altroz racer launch details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+