ಡೀಸೆಲ್‌ ಎಂಜಿನ್‌ ಕಾರು ಹುಡುಕಾಟದಲ್ಲಿದ್ದೀರಾ: ಇಲ್ಲಿದೆ ಪ್ರಮುಖ ಟಾಟಾ ಡೀಸೆಲ್‌ ಕಾರುಗಳು!

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್‌ ಕಾರುಗಳ ಸಂಖ್ಯೆ ಜಾಸ್ತಿಯಾಗುತ್ತಿದೆಯಾದರೂ, ಡೀಸೆಲ್‌ ಕಾರುಗಳು ಇನ್ನೂ ಮಾರುಕಟ್ಟೆಯಲ್ಲಿದೆ. ಹಲವರು ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್‌ ಕಾರುಗಳನ್ನೇ ಆಯ್ಕೆ ಮಾಡುತ್ತಾರೆ. ಇದಕ್ಕೆ ಪ್ರಮುಖ ಕಾರಣ ಪೆಟ್ರೋಲ್‌ ಎಂಜಿನ್‌ಗಿಂತಲೂ ಡೀಸೆಲ್ ಎಂಜಿನ್‌ ಹೆಚ್ಚು ಪವರ್‌ ಉತ್ಪಾದಿಸುತ್ತದೆ. ಅದೇ ರೀತಿ ಡೀಸೆಲ್‌ ಎಂಜಿನ್‌ನ ಮೈಲೇಜ್‌ ಸಹ ಹೆಚ್ಚು. ನಾವು ಇಂದಿನ ಈ ಲೇಖನದಲ್ಲಿ ಭಾರತದ ಹೆಮ್ಮೆಯ ಕಾರು ನಿರ್ಮಾಣ ಕಂಪನಿಯಾದ ಟಾಟಾ ಮೋಟಾರ್ಸ್‌ ಮಾರುಕಟ್ಟೆಯಲ್ಲಿ ಬಿಟ್ಟಿರುವ ಪ್ರಮುಖ ಮೂರು ಡೀಸೆಲ್‌ ಎಂಜಿನ್‌ ಕಾರುಗಳ ಕುರಿತಾಗಿ ನೋಡೋಣ ಬನ್ನಿ.

ಟಾಟಾ ಸಫಾರಿ: ಟಾಟಾ ಮೋಟಾರ್ಸ್‌ನ ಪ್ರಸಿದ್ದ ವಾಹನಗಳಲ್ಲಿ ಪ್ರಮುಖವಾದ ಕಾರು ಈ ಟಾಟಾ ಸಫಾರಿ (TATA Safari). ಹೊಸ ಹ್ಯಾರಿಯರ್‌ನಂತೆ, ಟಾಟಾ ಸಫಾರಿ ಕೂಡ ಬಾಹ್ಯ ವಿನ್ಯಾಸಕ್ಕೆ ಬಂದಾಗ ಸಾಕಷ್ಟು ಬದಲಾವಣೆಗೆ ಒಳಗಾಗಿದೆ. ಹಳೆಯ ಮಾದರಿಯಂತಲ್ಲದೇ ಸಫಾರಿಯು ಮೊದಲಿಗಿಂತ ತೀಕ್ಷ್ಣವಾಗಿ ಮತ್ತು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಹೊಸ ಪ್ಯಾರಾಮೆಟ್ರಿಕ್ ಗ್ರಿಲ್ ನವೀಕರಿಸಿದ ಹ್ಯಾರಿಯರ್‌ಗಿಂತ ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತದೆ.

TATA Motors To 3 Diesel Engine Cars In Indian Market TATA Safari Harrier And Nexon

ಟಾಟಾ ಸಫಾರಿ ಅದರ ಹಿಂದಿನ ಮೆಕ್ಯಾನಿಕಲ್ ಬಿಟ್‌ಗಳನ್ನು ಹಾಗೇ ಉಳಿಸಿಕೊಂಡಿದೆ. ಆದ್ದರಿಂದ ಬಾನೆಟ್ ಅಡಿಯಲ್ಲಿ, ನೀವು ಇನ್ನೂ Stellantis-ಮೂಲದ 2.0-ಲೀಟರ್ Kryotec, ಟರ್ಬೋಚಾರ್ಜ್ಡ್ ಇನ್‌ಲೈನ್, ನಾಲ್ಕು-ಪಾಟ್ ಡೀಸೆಲ್ ಎಂಜಿನ್ ಅನ್ನು ಕಾಣಬಹುದು. ಇದು 3,750 rpm ನಲ್ಲಿ 168bhp ಪವರ್ ಮತ್ತು 1,750 ಮತ್ತು 2,500rpm ನಡುವೆ 350Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.

ಟಾಟಾ ಹ್ಯಾರಿಯರ್‌: ಈ ಟಾಟಾ ಹ್ಯಾರಿಯರ್ (Tata Harrier) ಫೇಸ್‌ಲಿಫ್ಟ್ ಮಾದರಿಯು ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಪ್ರಬಲ ಪ್ರತಿಸ್ಪರ್ಧಿಯಾಗಿದ್ದು, ಈಗಾಗಲೇ ಬುಕ್ಕಿಂಗ್ ಶುರುವಾಗಿದೆ. ಈ ಎಸ್‍ಯುವಿಯು ಲೂನಾರ್ ವೈಟ್, ಪೆಬಲ್ ಗ್ರೇ, ಸನ್ಲೈಟ್ ಯೆಲ್ಲೋ ಮತ್ತು ಕೊರಲ್ ರೆಡ್ ಸೇರಿದಂತೆ 6 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿರುತ್ತದೆ.

TATA Motors To 3 Diesel Engine Cars In Indian Market TATA Safari Harrier And Nexon

ಇದರಲ್ಲಿ 2.0 - ಲೀಟರ್ ಡೀಸೆಲ್ ಎಂಜಿನ್ ಒಳಗೊಂಡಿದ್ದು, 170 hp ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ 6 - ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಈ ಎಸ್‍ಯುವಿ ಇಕೋ, ಸಿಟಿ ಮತ್ತು ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್ ಆಯ್ಕೆಯನ್ನು ಹೊಂದಿದೆ.

ನೆಕ್ಸಾನ್ ಕಾರು, 6 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಫಿಯರ್‌ಲೆಸ್ ಪರ್ಪಲ್, ಕ್ರಿಯೇಟಿವ್ ಓಷನ್, ಪ್ರಿಸ್ಟಿನ್ ವೈಟ್, ಪ್ಯೂರ್ ಗ್ರೇ, ಡೇಟೋನಾ ಗ್ರೇ ಮತ್ತು ಫ್ಲೇಮ್ ರೆಡ್. ಮುಖ್ಯವಾಗಿ, ಫ್ಲೇಮ್ ರೆಡ್ ಮತ್ತು ಡೇಟೋನಾ ಗ್ರೇ ಬಣ್ಣಗಳನ್ನು ಹೊಂದಿರುವ ಕಾರು, ವೈಟ್ ಅಥವಾ ಬ್ಲ್ಯಾಕ್ ಬಣ್ಣದ ರೂಫ್ ಆಯ್ಕೆಯಲ್ಲಿ ಸಿಗುತ್ತದೆ.

ನೆಕ್ಸಾನ್ ಎರಡು ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. 1.2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 118.2 bhp ಗರಿಷ್ಠ ಪವರ್ ಹಾಗೂ 170 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಅಥವಾ 6 ಸ್ವೀಡ್ ಮ್ಯಾನುವಲ್, 6 ಸ್ವೀಡ್ ಅಥವಾ 7 ಸ್ವೀಡ್ ಡುಯಲ್ ಕ್ಲಚ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿರುವ ಕಾರು, 113.3 bhp ಪವರ್ ಮತ್ತು 260 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಒಳಗೊಂಡಿದೆ. 6 ಸ್ವೀಡ್ ಮ್ಯಾನುವಲ್ ಅಥವಾ 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ. ಈ ಮೂಲಕ ಅತ್ಯಂತ ಪವರ್ ಫುಲ್ ಆಗಿದೆ.

Article Published On: Saturday, June 1, 2024, 11:57 [IST]
English summary
Tata motors to 3 diesel engine cars in indian market tata safari harrier and nexon
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+