Tata Nexon CNG: ನಾಳೆ ಟಾಟಾ ನೆಕ್ಸಾನ್ ಸಿಎನ್‌ಜಿ ಕಾರು ಅನಾವರಣ.. ಕಡಿಮೆ ಬೆಲೆ, ಬೈಕ್‌ನಂತೆ ಮೈಲೇಜ್?

ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿದೆ. ನಾಳೆಯಿಂದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ (Bharat Mobility Global Expo 2024) ಆರಂಭವಾಗಿದ್ದು, ಅಲ್ಲಿ ಕಂಪನಿಯು ನೆಕ್ಸಾನ್ ಸಿಎನ್‌ಜಿ ಕಾನ್ಸೆಪ್ಟ್ ಕಾರನ್ನು ಅನಾವರಣ ಮಾಡಲಿದೆ ಎಂಬ ಮಾಹಿತಿ ಲಭ್ಯವಿದೆ.

ಟಾಟಾ, ನೆಕ್ಸಾನ್ ಸಿಎನ್‌ಜಿ (Nexon CNG) ಮಾತ್ರವಲ್ಲದೆ ನೆಕ್ಸಾನ್ ಇವಿ ಡಾರ್ಕ್ (Nexon EV Dark), ಸಫಾರಿ ಡಾರ್ಕ್ (Safari Dark), ಕರ್ವ್ವ್ ಕಾನ್ಸೆಪ್ಟ್ (Curvv Concept), ಆಲ್ಟ್ರೊಜ್ ರೇಸರ್ ಕಾನ್ಸೆಪ್ಟ್ (Harrier EV Concept) ಸೇರಿದಂತೆ 8 ಕಾರುಗಳನ್ನು ಪ್ರದರ್ಶಿಸಲಿದೆ. ಕಂಪನಿ ಈ ಕಾರುಗಳು ಆಕರ್ಷಕ ವೈಶಿಷ್ಟ್ಯ ಮತ್ತು ವಿನ್ಯಾಸವನ್ನು ಹೊಂದಿರುವ ನೀರಿಕ್ಷೆಯಿದೆ.

Tata Nexon CNG Concept Suv debut Tomorrow: Affordable Price, Mileage Like Bikes

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಅನಾವರಣಗೊಳ್ಳಲಿರುವ ನೆಕ್ಸಾನ್ ಸಿಎನ್‌ಜಿ ಎಸ್‌ಯುವಿ, 1.2-ಲೀಟರ್ ಟರ್ಬೊ ಪೆಟ್ರೋಲ್, ಫ್ಯಾಕ್ಟರಿ ಫಿಟೆಡ್ ಟ್ವಿನ್ ಸಿಲಿಂಡರ್ ಸಿಎನ್‌ಜಿ ಎಂಜಿನ್ ಹೊಂದಿರುವ ಸಾಧ್ಯತೆಯಿದೆ. ಇದರ ಫ್ಯುಯೆಲ್ (ಸಿಎನ್‌ಜಿ) ಟ್ಯಾಂಕ್ 60 ಲೀಟರ್ ಸಾಮರ್ಥ್ಯವನ್ನು ಪಡೆದಿರಲಿದೆ ಎನ್ನಲಾಗಿದೆ. ಈಗಾಗಲೇ, ನೆಕ್ಸಾನ್ ಎಸ್‌ಯುವಿ ಪೆಟ್ರೋಲ್, ಡೀಸೆಲ್ ಹಾಗೂ ಎಲೆಕ್ಟ್ರಿಕ್ ರೂಪದಲ್ಲಿ ದೊರೆಯುತ್ತದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಪಂಚ್ ಸಿಎನ್‌ಜಿ ಕಾರು, 26.99 kmpl ಮೈಲೇಜ್ ನೀಡುತ್ತದೆ. ಮುಂಬರಲಿರುವ ನೆಕ್ಸಾನ್ ಸಿಎನ್‌ಜಿ ಎಸ್‌ಯುವಿ ಅದಕ್ಕಿಂತ ಹೆಚ್ಚಿನ ಮೈಲೇಜ್ ಕೊಡಲಿದೆ ಎಂದು ಅಂದಾಜಿಸಲಾಗಿದೆ. ಇಂಧನ - ಎಲೆಕ್ಟ್ರಿಕ್ ಚಾಲಿತ ನೆಕ್ಸಾನ್, ಕ್ರಮವಾಗಿ ರೂ.8.10 ಲಕ್ಷ, ರೂ.14.74 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿವೆ. ಸಿಎನ್‌ಜಿ ಕಾರು ಇವೆರಡರ ನಡುವೆ ಬೆಲೆಯನ್ನು ಹೊಂದಿರಬಹುದು ಎನ್ನಲಾಗಿದೆ.

Tata Nexon CNG Concept Suv debut Tomorrow: Affordable Price, Mileage Like Bikes?

ಟಾಟಾ ನೆಕ್ಸಾನ್ ಎಸ್‍ಯುವಿ ಮತ್ತೊಂದು ಐತಿಹಾಸಿಕ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ ಎಂದು ಮಂಗಳವಾರ ವರದಿಯಾಗಿತ್ತು. ಈ ಕಾರು, 2017ರಲ್ಲಿ ಬಿಡುಗಡೆಯಾದಗಿನಿಂದ ಈವರೆಗೆ 6 ಲಕ್ಷ ಯುನಿಟ್ ಮಾದರಿಗಳನ್ನು ತಯಾರಿಸಲಾಗಿದೆ. ಇಂಧನ ಚಾಲಿತ ಟಾಟಾ ನೆಕ್ಸಾನ್‌ ಎಸ್‌ಯುವಿ, ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್, ಫಿಯರ್ ಲೆಸ್ ರೂಪಾಂತರ, ಕ್ರಿಯೇಟಿವ್ ಓಷನ್, ಫ್ಲೇಮ್ ರೆಡ್, ಪ್ಯೂರ್ ಗ್ರೇ, ಡೇಟೋನಾ ಗ್ರೇ, ಒಳಗೊಂಡಂತೆ 7 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 1.5-ಲೀಟರ್ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುವ ಈ ಕಾರು, ರೂಪಾಂತರಗಳಿಗೆ ಅನುಗುಣವಾಗಿ 17.01 - 24.08 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ ಪಡೆದಿದೆ.

ಟಾಟಾ ನೆಕ್ಸಾನ್ ಇವಿ ಕುರಿತು ಹೇಳುವುದಾದರೆ, ಇದು ಕ್ರಿಯೇಟಿವ್, ಫಿಯರ್ ಲೆಸ್ ಒಳಗೊಂಡಂತೆ 3 ರೂಪಾಂತರಗಳ ಆಯ್ಕೆಯಲ್ಲಿ ಸಿಗುತ್ತದೆ. 30 ಕೆಡಬ್ಲ್ಯೂಹೆಚ್ ಮತ್ತು 40.5 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್ ನಲ್ಲಿ ಕ್ರಮವಾಗಿ 325 ಕಿ.ಮೀ ರಿಂದ 465 ಕಿ.ಮೀ ಕ್ರಮಿಸುತ್ತದೆ.

ಟಾಟಾ ನೆಕ್ಸಾನ್ ಇವಿ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಆಟೋಮೆಟಿಕ್ ಎಸಿ, ಕ್ರೂಸ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಪಡೆದಿದೆ. ಸುರಕ್ಷತೆಯ ಸಲುವಾಗಿ 6 ಏರ್‌ಬ್ಯಾಗ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 31, 2024, 17:26 [IST]
English summary
Tata nexon cng concept suv debut tomorrow what expected
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+