ಟಾಟಾ ಬಜೆಟ್ ಕಾರು.. 24 ಕಿ.ಮೀ ಮೈಲೇಜ್, 5 ಜನ ಆರಾಮವಾಗಿ ಪ್ರಯಾಣಿಸಬಹುದು!
Tata nexon cng: ಗರಿಷ್ಟ ಗುಣಮಟ್ಟ ಹಾಗೂ ಅತ್ಯಂತ ಸುರಕ್ಷಿತ ಕಾರುಗಳನ್ನು ನಿರ್ಮಿಸುವ ಬ್ರಾಂಡ್ ಆಗಿ ಜನಪ್ರಿಯತೆ ಪಡೆದಿರುವ ಟಾಟಾ ಮೋಟಾರ್ಸ್, ಇತ್ತೀಚೆಗೆ ಅತ್ಯುತ್ತ ಮೈಲೇಜ್ ನೀಡುವ ನೆಕ್ಸಾನ್ ಸಿಎನ್‌ಜಿ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಹೊಸ ಟಾಟಾ ನೆಕ್ಸಾನ್ ಸಿಎನ್‌ಜಿ ಎಸ್‌ಯುವಿಯು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಡಿಮೆ ಬೆಲೆಯಿಂದಾಗಿ ಈಗಾಗಲೇ ಉತ್ತಮ ಬುಕಿಂಗ್‌ಗಳನ್ನು ಸ್ವೀಕರಿಸಿರುವ ಕಂಪನಿಯು ಇದೀಗ ಡೆಲಿವರಿ ನೀಡಲು ದೇಶಾದ್ಯಂತ ಹಲವಾರು ಶೋರೂಂಗಳಿಗೆ ಕಾರನ್ನು ತಲುಪಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಕಾರಿನ ಬೆಲೆ ಹಾಗೂ ಮೈಲೇಜ್ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.
ಹೊಸ ಟಾಟಾ ನೆಕ್ಸಾನ್ ಸಿಎನ್‌ಜಿ ಕಾರು ಸ್ಮಾರ್ಟ್ (ಒ), ಸ್ಮಾರ್ಟ್ ಪ್ಲಸ್, ಸ್ಮಾರ್ಟ್ ಪ್ಲಸ್ ಎಸ್, ಪ್ಯೂರ್, ಪ್ಯೂರ್ ಎಸ್, ಕ್ರಿಯೇಟಿವ್ ಪ್ಲಸ್, ಫಿಯರ್ಲೆಸ್ ಪ್ಲಸ್ ಎಸ್ ಎಂಬ ಆಕರ್ಷಕ ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಇದರ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.99 ಲಕ್ಷಗಳಾಗಿದೆ.

ಹೊಸ ಟಾಟಾ ನೆಕ್ಸಾನ್ ಸಿಎನ್‌ಜಿ ಕಾರಿನಲ್ಲಿ 5 ಜನರು ಆರಾಮವಾಗಿ ಕುಳಿತು ದೂರದ ಪಟ್ಟಣಗಳಿಗೆ ಪ್ರಯಾಣಿಸಬಹುದು. ಜೊತೆಗೆ ಇದರಲ್ಲಿ ಡ್ಯುಯಲ್ ಸಿಲಿಂಡರ್ ತಂತ್ರಜ್ಞಾನ ಇದ್ದರೂ, ಹೆಚ್ಚಿನ ಲಗ್ಗೇಜ್ ಸಾಗಿಸಲು ಈ ಕಾರು 321 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿರುವುದು ವಿಶೇಷ.
ಟಾಟಾ ನೆಕ್ಸಾನ್ ಸಿಎನ್‌ಜಿ 1.2 - ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್/ಸಿಎನ್‌ಜಿ ಎಂಜಿನ್ ಆಯ್ಕೆಯಿಂದ ನಿಯಂತ್ರಿಸಲ್ಪಡುತ್ತದೆ, ಇದು 99 ಬಿಹೆಚ್ ಪವರ್ ಮತ್ತು 170 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 6 ಸ್ಪೀಡ್‌ನ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ವೈಶಿಷ್ಟ್ಯಗಳು: ವೈರ್ ಲೆಸ್ ಚಾರ್ಜಿಂಗ್, ಬ್ಲೈಂಡ್ ಸ್ಪಾಟ್, ಬ್ಲೈಂಡ್ ಸ್ಪಾಟ್ ಮಾನಿಟರ್, 10.25 ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್ ರೂಫ್, 360 ಡಿಗ್ರಿ ಕ್ಯಾಮೆರಾ, ಕೂಲ್ಡ್ ಫ್ರಂಟ್ ಸೀಟ್‌ಗಳು ಮುಂತಾದ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಇಂಧನ ಚಾಲಿತ ಟಾಟಾ ನೆಕ್ಸಾನ್ ಎಸ್‌ಯುವಿಯ ಬೆಲೆ ರೂ. 8 ಲಕ್ಷ ರೂ. (ಎಕ್ಸ್ ಶೋರೂಂ)ಗಳಿಂದ ಆರಂಭವಾಗುತ್ತದೆ. ಇದರ ಟಾಪ್ ವೇರಿಯೆಂಟ್ ಬೆಲೆಯು ರೂ.15.50 ಲಕ್ಷ (ಎಕ್ಸ್ ಶೋರೂಂ) ಬೆಲೆಯಿದೆ. ಇದು 1.2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.

ಹಾಗೆಯೇ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ವಿಷಯಕ್ಕೆ ಬಂದರೆ, ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.12.49 ಲಕ್ಷದಿಂದ ರೂ.17.19 ಲಕ್ಷಗಳಾಗಿದೆ. ಇದು 40.5, 46.08 ಕಿಲೋವ್ಯಾಟ್ (ಕಿಲೋವ್ಯಾಟ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಇದು ಪೂರ್ಣ ಚಾರ್ಜ್‌ನಲ್ಲಿ 390 ರಿಂದ 489 ಕಿ.ಮೀ ರೇಂಜ್ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications