ಟಾಟಾ ಪ್ರೇಮಿಗಳಿಗೆ ಸದ್ದಿಲ್ಲದೇ ಸಿಹಿ ಸುದ್ದಿ: 2024 ನೆಕ್ಸಾನ್‌ ಡಾರ್ಕ್‌ ಎಡಿಷನ್‌ ಸದ್ಯದಲ್ಲೇ!

ಸದಾ ಒಂದಿಲ್ಲೊಂದು ರೀತಯಲ್ಲಿ ಸುದ್ದಿಯಾಗುವ ಟಾಟಾ ಮೋಟಾರ್ಸ್‌ನ ಕಾರುಗಳು ಭಾರತೀಯರಿಗೆ ಅಚ್ಚು ಮೆಚ್ಚು ಎಂಬುದು ಎಲ್ಲರಿಗೂ ತಿಳಿದಿದೆ. ಇದಕ್ಕೆ ಪ್ರಮುಖ ಕಾರಣ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಟಾಟಾ ಕಾರುಗಳ ಮಾರಾಟದ ಪ್ರಮಾಣ ಗಣನೀಯ ಮಟ್ಟದಲ್ಲಿ ಏರಿಕೆಯಾಗುತ್ತಿರುವುದು ಮತ್ತು ಟಾಟಾ ತನ್ನ ಕಾರುಗಳಲ್ಲಿ ವಿವಿಧ ರೀತಿಯ ಹೊಸತನವನ್ನು ಪರೀಕ್ಷಿಸುತ್ತಿರುವುದು.

ಇದೀಗ ಟಾಟಾ ಪಾಳಯದಿಂದ ಭಾರತೀಯ ಕಾರು ಪ್ರೀಯರಿಗೆ ಮತ್ತೊಂದು ಹೊಸ ಸುದ್ದಿಯೊಂದು ಬಂದಿದ್ದು ಎಲ್ಲರ ಕಣ್ಣರಳಿಸಿವೆ. ಟಾಟಾ ಮೋಟಾರ್ಸ್‌ ತನ್ನ ಹೊಸ 2024 ನೆಕ್ಸಾನ್‌ ಗೆ ಡಾರ್ಕ್‌ ಎಡಿಷನ್‌ ಟಚ್‌ (TATA Nexon Dark Edition) ನೀಡುತ್ತಿದೆ. ಈಗಾಗಲೇ ಟಾಟಾ ಮೋಟಾರ್ಸ್‌ ದೆಹಲಿಯಲ್ಲಿ ನಡೆದ 2024 ರ ಭಾರತ್‌ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಟಾಟಾದ ಮುಂಬರಲಿರುವ ಹಲವು ಕಾರುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು.

TATA Nexon Dark Edition to be launched very soon in India.

ಇತ್ತೀಚೆಗಷ್ಟೇ ಟಾಟಾ ತನ್ನ ಜನಪ್ರಿಯ ಮಾಡೆಲ್‌ಗಳಾದ ಹ್ಯಾರಿಯರ್‌, ಸಫಾರಿ ಮತ್ತು ನೆಕ್ಸಾನ್‌ಗೆ ಫೇಸ್‌ಲಿಫ್ಟ್‌ ಟಚ್‌ ಅನ್ನು ನೀಡಿತ್ತು. ಈಗಾಗಲೇ ಹ್ಯಾರಿಯರ್‌, ಮತ್ತು ಸಫಾರಿಯ ಡಾರ್ಕ್‌ ಎಡಿಷನ್‌ಗಳು ಈಗಾಗಲೇ ಮಾರಾಟದಲ್ಲಿದ್ದು, ಗ್ರಾಹಕರಿಂದ ಭಾರೀ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ. ಇದೀಗ ಟಾಟಾ ತನ್ನ ಹೊಸ ನೆಕ್ಸಾನ್‌ ಫೇಸ್‌ಲಿಫ್ಟ್‌ ಮಾಡೆಲ್ ಅನ್ನು ಡಾರ್ಕ್‌ ಎಡಿಷನ್‌ ಆವೃತ್ತಿಯಲ್ಲೂ ಲಾಂಚ್‌ ಮಾಡಲಿದೆ. ಈ ಹಿಂದೆಯೂ ನೆಕ್ಸಾನ್‌ ಅನ್ನು ಟಾಟಾ ಮೋಟಾರ್ಸ್‌ ಡಾರ್ಕ್‌ ಎಡಿಷನ್‌ ಆವೃತ್ತಿಯಲ್ಲಿ ಲಾಂಚ್ ಮಾಡಿತ್ತು.

ಹೊಸ ಟಾಟಾ ನೆಕ್ಸಾನ್‌ ಬಗ್ಗೆ ನೋಡುವುದಾದರೆ, ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ ಎಸ್‌ಯುವಿ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು. ಕಂಪನಿಯು ಗ್ರಾಹಕರಿಂದ ಬಂದ ಬೇಡಿಕೆಯನ್ನು ಮನಗಂಡು ಇಂಧನ ಚಾಲಿತ ನೆಕ್ಸಾನ್ ಎಸ್‌ಯುವಿಯನ್ನು ಎಲೆಕ್ಟ್ರಿಕ್ ಅವತಾರದಲ್ಲಿಯೂ ಲಾಂಚ್ ಮಾಡಿತ್ತು.

TATA Nexon Dark Edition to be launched very soon in India.

ಈ ನೆಕ್ಸಾನ್ ಕಾರು, 6 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಫಿಯರ್‌ಲೆಸ್ ಪರ್ಪಲ್, ಕ್ರಿಯೇಟಿವ್ ಓಷನ್, ಪ್ರಿಸ್ಟಿನ್ ವೈಟ್, ಪ್ಯೂರ್ ಗ್ರೇ, ಡೇಟೋನಾ ಗ್ರೇ ಮತ್ತು ಫ್ಲೇಮ್ ರೆಡ್. ಮುಖ್ಯವಾಗಿ, ಫ್ಲೇಮ್ ರೆಡ್ ಮತ್ತು ಡೇಟೋನಾ ಗ್ರೇ ಬಣ್ಣಗಳನ್ನು ಹೊಂದಿರುವ ಕಾರು, ವೈಟ್ ಅಥವಾ ಬ್ಲ್ಯಾಕ್ ಬಣ್ಣದ ರೂಫ್ ಆಯ್ಕೆಯಲ್ಲಿ ಸಿಗುತ್ತದೆ.

ಸೆಂಟರ್ ಕನ್ಸೋಲ್‌ ಕೆಳಭಾಗದಲ್ಲಿ ಆಟೋಮೆಟಿಕ್ ಏರ್ ಕಂಡೀಷನ್ ಸಿಸ್ಟಮ್ ಅನ್ನು ಕಂಟ್ರೋಲ್ ಮಾಡುವುದಕ್ಕೆ ಟಚ್ ಸೆನ್ಸಿಟಿವ್ ಕೆಪ್ಯಾಸಿಟಿವ್ ನೀಡಲಾಗಿದೆ. ಇದು, ಬೂಟ್ ಓಪನ್ ಮಾಡುವುದು. 360-ಡಿಗ್ರಿ ಕ್ಯಾಮೆರಾ ನಿಯಂತ್ರಣ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುತ್ತದೆ. ಡ್ಯಾಶ್‌ನಲ್ಲಿರುವ ಮತ್ತೊಂದು ಪ್ರಮುಖ ಹೈಲೈಟ್ ಹೊಸದಾದ 10.25-ಇಂಚಿನ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದು, ದೊಡ್ಡ ಗ್ರಾತ್ರದಲ್ಲಿ ರೂಟ್ ಮ್ಯಾಪ್ ತೋರಿಸಿ, ಚಾಲಕನಿಗೆ ನ್ಯಾವಿಗೇಷನ್ ವಿವರವನ್ನು ಒದಗಿಸುತ್ತದೆ.

ಈ ಮೂಲಕ ಹೊಸ ಟಾಟಾ ನೆಕ್ಸಾನ್ ಕ್ಯಾಬಿನ್ ಒಳಭಾಗವು ಸಾಕಷ್ಟು ಆಕರ್ಷಕವಾಗಿದೆ. ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ISOFIX ಚೈಲ್ಡ್ ಸೀಟ್ ಆಂಕರಿಂಗ್ ಪಾಯಿಂಟ್ಸ್, ಪಾರ್ಕಿಂಗ್ ಸೆನ್ಸರ್ಸ್, ಎಮರ್ಜೆನ್ಸಿ ಹಾಗೂ ಬ್ರೇಕ್ ಡೌನ್ ಕಾಲ್ ಅಸ್ಸಿಸ್ಟನ್ಸ್ ಸೇರಿದಂತೆ ವಿವಿಧ ಫೀಚರ್ಸ್ ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, February 24, 2024, 9:00 [IST]
English summary
Tata nexon dark edition to be launched very soon in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+