TATA: ಟಾಟಾದ ಹೊಸ ಎಲೆಕ್ಟ್ರಿಕ್ ಕಾರು ತೆಗೆದುಕೊಳ್ಳುವವರಿಗೆ ಶುಭಸುದ್ದಿ.. ಏನದು?

ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಸಂಸ್ಥೆಯಾಗಿ ಟಾಟಾ ಮೋಟಾರ್ಸ್ (Tata Motors) ಖ್ಯಾತಿ ಗಳಿಸಿದೆ. 2024ರ ಹಣಕಾಸು ವರ್ಷದಲ್ಲಿ ಕಂಪನಿಯು 13.63% ಮಾರುಕಟ್ಟೆ ಪಾಲನ್ನು ಹೊಂದಿದ್ದು, ಪ್ರಮುಖ 10 ಕಾರು ತಯಾರಕ ಸಂಸ್ಥೆಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸರಿ ಸುಮಾರು 2 ದಶಕಕ್ಕೂ ಹೆಚ್ಚಿನ ಅವಧಿಯಿಂದ ಎಸ್‌ಯುವಿ (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್)ಗಳನ್ನು ಮಾರಾಟ ಮಾಡುತ್ತಿದೆ. ಸದ್ಯ ಬರೋಬ್ಬರಿ 20 ಲಕ್ಷ ಯುನಿಟ್ ಎಸ್‌ಯುವಿ ಮಾರಾಟಗೊಳಿಸುವ ಹೊಸ ಇತಿಹಾಸ ನಿರ್ಮಿಸಿದ್ದು, ಸಂಭ್ರಮಾಚರಣೆಯಲ್ಲಿ ತೊಡಗಿದೆ. ಅದರ ಭಾಗವಾಗಿ ನೆಕ್ಸಾನ್ ಇವಿ ಹಾಗೂ ಪಂಚ್ ಇವಿಗಳಿಗೆ ಜುಲೈ ತಿಂಗಳಲ್ಲಿ (2024) ಭಾರೀ ಹಣಕಾಸು ಪ್ರಯೋಜನವನ್ನು ಘೋಷಿಸಿದೆ.

ಮೊದಲಿಗೆ ದೊಡ್ಡ ಮಟ್ಟದಲ್ಲಿ ರಿಯಾಯಿತಿ ಸೌಲಭ್ಯ ಪಡೆದಿರುವ ಟಾಟಾ ನೆಕ್ಸಾನ್ ಇವಿ (Tata Nexon EV) ಬಗ್ಗೆ ಮಾತನಾಡೋಣ. ಈ ಕಾರು ರೂ.1.3 ಲಕ್ಷದವರೆಗೆ ಹಣಕಾಸಿನ ಪ್ರಯೋಜನವನ್ನು ಹೊಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ನೂತನ ನೆಕ್ಸಾನ್ ಇವಿ ರೂ.14.49 ಲಕ್ಷದಿಂದ ರೂ.19.49 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.

Tata Nexon EV And Punch Ev Get Upto Rs 1 3 Lakh Benefit In July 2024 Details

ನೆಕ್ಸಾನ್ ಎಲೆಕ್ಟ್ರಿಕ್ ಕಾರು 30 ಹಾಗೂ 40.5 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಪಡೆದಿದ್ದು, ಪೂರ್ತಿ ಚಾರ್ಜ್‌ನಲ್ಲಿ 325 ಕಿ.ಮೀ ರಿಂದ 465 ಕಿ.ಮೀ ಓಡುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಸಬಹುದು. ಈ ಕಾರಿನ ಬ್ಯಾಟರಿ ಪ್ಯಾಕ್ ಡಿಸಿ ಫಾಸ್ಟ್ ಚಾರ್ಜರ್ ಬಳಕೆಯಲ್ಲಿ 10-80% ಚಾರ್ಜ್ ಆಗಲು ಕೇವಲ 56 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಹೊಚ್ಚ ಹೊಸ ಟಾಟಾ ನೆಕ್ಸಾನ್ ಇವಿ ಅತ್ಯಾಧುನಿಕ ವಿನ್ಯಾಸ (ಡಿಸೈನ್)ವನ್ನು ಹೊಂದಿದ್ದು, ಫ್ಲೇಮ್ ರೆಡ್, ಪ್ರಿಸ್ಟಿನ್ ವೈಟ್, ಇಂಟೆನ್ಸಿ ಟೀಲ್, ಡೇಟೋನಾ ಗ್ರೇ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಸಂಖ್ಯೆ ಲಗೇಜ್ ಸಾಗಿಲು 350 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

Tata Nexon EV And Punch Ev Get Upto Rs 1 3 Lakh Benefit In July 2024 Details

ನೆಕ್ಸಾನ್ ಇವಿಯು 10.25-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಆಟೋ ಎಸಿ, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸಲು 6-ಏರ್‌ಬ್ಯಾಗ್‌, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಆಲ್-ವೀಲ್ ಡಿಸ್ಕ್ ಬ್ರೇಕ್‌ನ್ನು ಹೊಂದಿದೆ.

ಟಾಟಾ ಪಂಚ್ ಇವಿ (Tata Punch EV) ಕೂಡ ಉತ್ತಮ ಹಣಕಾಸಿನ ಸೌಲಭ್ಯ ಪಡೆದಿದ್ದು, ರೂ.30,000ವರೆಗೆ ರಿಯಾಯಿತಿಯನ್ನು ಒಳಗೊಂಡಿದೆ. ಇದು ರೂ.10.99 ಲಕ್ಷದಿಂದ ರೂ.15.49 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಖರೀದಿದಾರರಿಗೆ ಲಭ್ಯವಿದೆ. 25 ಹಾಗೂ 35 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 315 ರಿಂದ 421 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.

Tata Nexon EV And Punch Ev Get Upto Rs 1 3 Lakh Benefit In July 2024 Details

ಪಂಚ್ ಇವಿಯಲ್ಲಿಯೂ 5 ಜನರು ಓಡಾಟವನ್ನು ನಡೆಸಬಹುದು. ಈ ಕಾರಿನ ಬ್ಯಾಟರಿ ಪ್ಯಾಕ್ ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಶೇಕಡ 10-80% ಚಾರ್ಜ್ ಆಗುವುದಕ್ಕೆ 56 ನಿಮಿಷ ಬೇಕಾಗುತ್ತದೆ.10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಏರ್ ಪ್ಯೂರಿಫೈಯರ್, ಸನ್‌ರೂಫ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯ (ಫೀಚರ್)ಗಳನ್ನು ಪಡೆದಿದೆ.

ಈ ಹಿಂದೆ, ಟಾಟಾ ಮೋಟಾರ್ಸ್ ಒಟ್ಟು 1.5 ಲಕ್ಷ ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವುದರೊಂದಿಗೆ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿತ್ತು. 2023ರ ಹಣಕಾಸು ವರ್ಷದಲ್ಲಿ ಮಾರಿದ 50,000 ಯುನಿಟ್‌ಗೆ ಹೋಲಿಕೆ ಮಾಡಿದರೆ, 2024ರ ಹಣಕಾಸು ವರ್ಷದಲ್ಲಿ ಭರ್ತಿ 73,800 ಯುನಿಟ್‌ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿತ್ತು.

ನಿಮ್ಮ ಗಮನಕ್ಕೆ.. ಹಣಕಾಸು ಪ್ರಯೋಜನಗಳು ರೂಪಾಂತರ (ವೇರಿಯೆಂಟ್)ಗಳನ್ನು ಅವಲಂಭಿಸಿ, ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಟಾಟಾ ಶೋರೂಂಗೆ ಭೇಟಿ ನೀಡಿರಿ.

Article Published On: Tuesday, July 9, 2024, 17:20 [IST]
English summary
Tata nexon ev and punch ev get upto rs 1 3 lakh benefit in july 2024 details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+