Tata: ಟಾಟಾದಿಂದ ದೊಡ್ಡ ಘೋಷಣೆ.. ಏನದು?

ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಗುರುತಿಸಿಕೊಂಡಿದ್ದು, ಕಳೆದ ಎರಡು ವರ್ಷದಿಂದ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿಯೂ ಮುಂಚೂಣಿಯಲ್ಲಿದೆ. ಈ ಮೇ ತಿಂಗಳು ಕಂಪನಿಯ ನೆಕ್ಸಾನ್ ಹಾಗೂ ಟಿಯಾಗೊ ಇವಿಗಳು ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಹೊಂದಿವೆ.

2023ರಲ್ಲಿ ಉತ್ಪಾದಿಸಿ ಮಾರಾಟವಾಗದಿರುವ ಟಾಟಾ ನೆಕ್ಸಾನ್ ಇವಿ (Tata Nexon EV) ಮಾದರಿಗಳು, ಒಟ್ಟು ರೂ.75,000 ವರೆಗೆ ರಿಯಾಯಿತಿ ಸೌಲಭ್ಯವನ್ನು ಹೊಂದಿವೆ. ಅದರಲ್ಲಿ ರೂ.50,000 ನಗದು ರಿಯಾಯಿತಿ (Cash Discount), ರೂ.20,000 ವಿನಿಮಯ ಬೋನಸ್ (Exchange Bonus) ಮತ್ತು ರೂ.5,000 ಕಾರ್ಪೊರೇಟ್ ರಿಯಾಯಿತಿ (Corporate Discount) ಕೂಡ ಸೇರಿದೆ.

Tata Nexon Ev And Tiago Ev Have Upto Rs 75 000 Discount In May 2024

ಅದೇ ರೀತಿಯಲ್ಲಿ 2024ರಲ್ಲಿ ತಯಾರಿಸಲಾಗಿರುವ ಟಾಟಾ ನೆಕ್ಸಾನ್ ಇವಿಯ ಎಂಪವರ್ಡ್ ಪ್ಲಸ್ ಎಲ್ಆರ್ ಹಾಗೂ ಎಂಪವರ್ಡ್ ಪ್ಲಸ್ ಎಲ್ಆರ್ ಡಾರ್ಕ್ ರೂಪಾಂತರ (ವೇರಿಯೆಂಟ್)ಗಳು ರೂ.55,000 ವರೆಗೆ ಡಿಸ್ಕೌಂಟ್ ಆಫರ್‌ನ್ನು ಹೊಂದಿವೆ. ದೇಶೀಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರು, ರೂ.14.74 ಲಕ್ಷದಿಂದ ರೂ.19.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.

ಟಾಟಾ ನೆಕ್ಸಾನ್ ಇವಿಯಲ್ಲಿ 30 ಕೆಡಬ್ಲ್ಯೂಹೆಚ್ ಮತ್ತು 40.5 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಬಳಕೆ ಮಾಡಲಾಗಿದೆ. ಅದಕ್ಕೆ ತಕ್ಕಂತೆ ಭರ್ತಿ ಚಾರ್ಜ್ ನಲ್ಲಿ 325 ರಿಂದ 465 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಈ ಕಾರಿನ ಬ್ಯಾಟರಿಯು ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಕೇವಲ 56 ನಿಮಿಷದಲ್ಲಿ 10 ರಿಂದ 80% ಚಾರ್ಜ್ ಆಗುತ್ತದೆ.

Tata Nexon Ev And Tiago Ev Have Upto Rs 75 000 Discount In May 2024

ಈ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಯು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌, ಆಲ್-ವೀಲ್ ಡಿಸ್ಕ್ ಬ್ರೇಕ್ಸ್, ಹಿಲ್ ಹೋಲ್ಡ್, ಡಿಸೆಂಟ್ ಕಂಟ್ರೋಲ್ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಟಾಟಾ ಟಿಯಾಗೊ ಇವಿ (Tata Tiago EV) ಕೂಡ ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಪಡೆದಿದೆ. 2023ರಲ್ಲಿ ತಯಾರಿಸಿದ ಟಿಯಾಗೊ ಎಲೆಕ್ಟ್ರಿಕ್ ಕಾರುಗಳು ಒಟ್ಟು ರೂ.72,000 ವರೆಗೆ ಡಿಸ್ಕೌಂಟ್ ಆಫರ್‌ನ್ನು ಒಳಗೊಂಡಿದೆ. 2024ರ ಮಾದರಿಗಳು ರೂ.52,000 ವರೆಗೆ ರಿಯಾಯಿತಿಯನ್ನು ಹೊಂದಿವೆ. ಭಾರತದಲ್ಲಿ ನೂತನ ಟಿಯಾಗೊ ಇವಿ ರೂ.7.99 ಲಕ್ಷದಿಂದ ರೂ.11.89 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ.

Tata Nexon Ev And Tiago Ev Have Upto Rs 75 000 Discount In May 2024

ಈ ಟಿಯಾಗೊ ಎಲೆಕ್ಟ್ರಿಕ್ ಕಾರು 19.2 ಕೆಡಬ್ಲ್ಯೂಹೆಚ್ ಮತ್ತು 24 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 250 ಕಿಲೋಮೀಟರ್ ರಿಂದ 315 ಕಿಲೋಮೀಟರ್ ಓಡುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಡಿಸಿ ಫಾಸ್ಟ್ ಚಾರ್ಜರ್ ಬಳಕೆಯಲ್ಲಿ ಈ ಕಾರಿನ ಬ್ಯಾಟರಿಯು 10-80% ಚಾರ್ಜ್ ಆಗಲು 57 ನಿಮಿಷಗಳು ಬೇಕಾಗುತ್ತದೆ.

ಟಾಟಾ ಟಿಯಾಗೊ ಇವಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌, ಕ್ರೂಸ್ ಕಂಟ್ರೋಲ್ ಒಳಗೊಂಡಂತೆ ಸಾಕಷ್ಟು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಏರ್‌ಬ್ಯಾಗ್‌, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ. ನಿಮ್ಮ ಗಮನಕ್ಕೆ.. ಈ ರಿಯಾಯಿತಿಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ವಿವರಗಳಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, May 8, 2024, 20:25 [IST]
English summary
Tata nexon ev and tiago ev have upto rs 75000 discount in may 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+