Tata Nexon EV: ಟಾಟಾ ನೆಕ್ಸಾನ್ ಇವಿ ಬೆಲೆ ರೂ.1.20 ಲಕ್ಷ ಇಳಿಕೆ.. ಯಾವ ರೂಪಾಂತರಕ್ಕೆ ಎಷ್ಟು?, 465 ಕಿ.ಮೀ ಓಡುತ್ತದೆ
ಟಾಟಾ ಮೋಟಾರ್ಸ್ (Tata Motors) ಮಂಗಳವಾರ ನೆಕ್ಸಾನ್ ಇವಿ (Nexon EV) ದರವನ್ನು ದೊಡ್ಡಮಟ್ಟದಲ್ಲಿ ಇಳಿಸಿ, ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿತ್ತು. ರೂ.20,000 ದಿಂದ ರೂ.1.20 ಲಕ್ಷ ವರೆಗೆ ಬೆಲೆಯನ್ನು ಕಡಿಮೆಗೊಳಿಸಿದ್ದು, ದರ ಇಳಿಕೆ ನಂತರ ಯಾವ ರೂಪಾಂತರಕ್ಕೆ ಎಷ್ಟಾಗಿದೆ ಎಂಬುದರ ಕುರಿತ ವಿವರ ಇಲ್ಲಿದೆ.
ಟಾಟಾ ನೆಕ್ಸಾನ್ ಇವಿ ಕ್ರೆಯೆಟಿವ್ ಪ್ಲಸ್ ಎಂಆರ್ ರೂಪಾಂತರ ರೂ.14.49 ಲಕ್ಷ, ಫಿಯರ್ ಲೆಸ್ ಎಂಆರ್ ರೂ.15.99 ಲಕ್ಷ, ಫಿಯರ್ ಲೆಸ್ ಪ್ಲಸ್ ಎಂಆರ್ ರೂ.16.49 ಲಕ್ಷ, ಫಿಯರ್ ಲೆಸ್ ಪ್ಲಸ್ ಎಸ್ ಎಂಆರ್ ರೂ.16.99 ಲಕ್ಷ, ಎಂಪವರ್ಡ್ ಎಂಆರ್ ರೂ.17.49 ಲಕ್ಷ, ಫಿಯರ್ ಲೆಸ್ ಎಲ್ಆರ್ ರೂ.16.99 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಹಾಗೆಯೇ ಫಿಯರ್ ಲೆಸ್ ಪ್ಲಸ್ ಎಲ್ಆರ್ ರೂ.17.49 ಲಕ್ಷ, ಫಿಯರ್ ಲೆಸ್ ಪ್ಲಸ್ ಎಸ್ ಎಲ್ಆರ್ ರೂ.17.99 ಲಕ್ಷ, ಎಂಪವರ್ಡ್ ಪ್ಲಸ್ ಎಲ್ಆರ್ ರೂ.19.29 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಈ ಟಾಟಾ ನೆಕ್ಸಾನ್ ಇವಿ ಫೇಸ್‌ಲಿಫ್ಟ್, ಫ್ಲೇಮ್ ರೆಡ್, ಪ್ರಿಸ್ಟಿನ್ ವೈಟ್, ಇಂಟೆನ್ಸಿ ಟೀಲ್, ಎಂಪವರ್ಡ್ ಆಕ್ಸೈಡ್ ಸೇರಿದಂತೆ 5 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.
ಹೊಚ್ಚ ಹೊಸ ಟಾಟಾ ನೆಕ್ಸಾನ್ ಇವಿಯು 30 ಕೆಡಬ್ಲ್ಯೂಹೆಚ್ ಮತ್ತು 40.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಲಭ್ಯವಿದೆ. ಇದರಲ್ಲಿ ಬಳಸಿರುವ ಎಲೆಕ್ಟ್ರಿಕ್ ಮೋಟಾರ್ ರೂಪಾಂತರಗಳಿಗೆ ಅನುಗುಣವಾಗಿ 127 ಬಿಹೆಚ್‌ಪಿ ಹಾಗೂ 143 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ), 215 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಈ ಕಾರನ್ನು ಒಮ್ಮೆಲೇ ಪೂರ್ತಿ ಚಾರ್ಜ್ ಮಾಡಿದರೆ, 325 ಕಿ.ಮೀ ರಿಂದ 465 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ. ಇಕೋ, ಸಿಟಿ, ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್ ಆಯ್ಕೆಯನ್ನು ಒಳಗೊಂಡಿದ್ದು, ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ನೆಕ್ಸಾನ್ ಇವಿ ಬ್ಯಾಟರಿ ಪ್ಯಾಕ್, 10-80% ಚಾರ್ಜ್ ಆಗಲು 56 ನಿಮಿಷ ಬೇಕಾಗುತ್ತದೆ. ಅದೇ ಮನೆ ವಿದ್ಯುತ್ ಉಪಯೋಗದಲ್ಲಿ 10 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ.
ಟಾಟಾ ನೆಕ್ಸಾನ್ ಇವಿಯಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ವಿನ್ಯಾಸದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, ಆಕರ್ಷಕ ಸ್ಲಿಕ್ ಸ್ಪ್ಲಿಟ್ ಹೆಡ್‌ಲ್ಯಾಂಪ್, ಎಲ್ಇಡಿ ಲೈಟ್ ಸ್ಟ್ರಿಪ್ ಅನ್ನು ಹೊಂದಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ.
ಸುರಕ್ಷತೆಯಲ್ಲಿಯೂ ಟಾಟಾ ನೆಕ್ಸಾನ್ ಇವಿ ಅತ್ಯುತ್ತಮವಾಗಿದ್ದು, 6-ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಆಲ್ - ವೀಲ್ ಡಿಸ್ಕ್ ಬ್ರೇಕ್ಸ್, ಹಿಲ್ ಹೋಲ್ಡ್, ಡಿಸೆಂಟ್ ಕಂಟ್ರೋಲ್, ಆಟೋ-ಡಿಮ್ಮಿಂಗ್ ಐಆರ್‌ವಿಎಂ, ಬ್ಲೈಂಡ್ ವ್ಯೂ ಮಾನಿಟರ್, 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ. ಈ ಕಾರಿಗೆ ನೆಕ್ಸಾನ್ ಇವಿಗೆ ಮಹೀಂದ್ರಾ ಎಕ್ಸ್‌ಯುವಿ400 ಇವಿ ದೊಡ್ಡ ಪ್ರತಿಸ್ಪರ್ಧಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications