Tata: 24 Km ಮೈಲೇಜ್, 5-ಸೀಟರ್.. 8 ಲಕ್ಷದ ಈ ಜನಪ್ರಿಯ ಕಾರಿಗೆ ರಿಯಾಯಿತಿ ಘೋಷಣೆ!
ದಿವಂಗತ ರತನ್ ಟಾಟಾ ಒಡೆತನದ ಟಾಟಾ ಮೋಟಾರ್ಸ್ (Tata Motors), ಪ್ರಖ್ಯಾತ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ನೆಕ್ಸಾನ್ (Nexon) ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿಯಾಗಿ ಹೊರಹೊಮ್ಮಿದೆ. ರಾಜ್ಯಾದ್ಯಂತ ಈ ನವೆಂಬರ್‌ನಲ್ಲಿ ನೆಕ್ಸಾನ್ ಕಾರಿನ ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ರೂಪಾಂತರಗಳು (ವೇರಿಯೆಂಟ್) ಉತ್ತಮ ಹಣಕಾಸಿನ ಪ್ರಯೋಜನಗಳನ್ನು ಹೊಂದಿವೆ. ಸಿಎನ್‌ಜಿ ಚಾಲಿತ ರೂಪಾಂತರಗಳಿಗೆ ಯಾವುದೇ ರಿಯಾಯಿತಿ ನೀಡಲಾಗಿಲ್ಲ. ಬನ್ನಿ.. ಈ ಕಾರಿನ ಯಾವ ರೂಪಾಂತರ ಎಷ್ಟು 'ಡಿಸ್ಕೌಂಟ್ ಆಫರ್' ಹೊಂದಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಟಾಟಾ ನೆಕ್ಸಾನ್ (Tata Nexon) ಎಸ್‌ಯುವಿಯ ಸ್ಮಾರ್ಟ್ (ಒ), ಸ್ಮಾರ್ಟ್ ಪ್ಲಸ್, ಸ್ಮಾರ್ಟ್ ಪ್ಲಸ್ ಎಸ್, ಪ್ಯೂರ್, ಪ್ಯೂರ್ ಎಸ್ ಹೊರತುಪಡಿಸಿದ ಎಲ್ಲ 2024ರ ಪೆಟ್ರೋಲ್ ಚಾಲಿತ ರೂಪಾಂತರಗಳು, ಒಟ್ಟು 30,000 ರಿಯಾಯಿತಿ ಹೊಂದಿವೆ. ಇದರೊಳಗೆ ರೂ.20,000 ಗ್ರಾಹಕ ರಿಯಾಯಿತಿ ಅಥವಾ ನಗದು ರಿಯಾಯಿತಿ (Consumer Discount) ಹಾಗೂ ರೂ.10,000 ವಿನಿಮಯ/ ಸ್ಕ್ರ್ಯಾಪ್ ಬೋನಸ್ (Exchange/ Scrappage Bonus) ಕೂಡ ಸೇರಿದೆ.

ಈ ನೆಕ್ಸಾನ್ ಕಾರಿನ ಸ್ಮಾರ್ಟ್ (ಒ), ಸ್ಮಾರ್ಟ್ ಪ್ಲಸ್, ಸ್ಮಾರ್ಟ್ ಪ್ಲಸ್ ಎಸ್, ಪ್ಯೂರ್, ಪ್ಯೂರ್ ಎಸ್ ಹೊರತುಪಡಿಸಿದ ಎಲ್ಲ ಡೀಸೆಲ್ ಚಾಲಿತ ರೂಪಾಂತರಗಳು (ವೇರಿಯೆಂಟ್) ಕೂಡ ಭರ್ಜರಿ ಹಣಕಾಸಿನ ಪ್ರಯೋಜನಗಳನ್ನು ಒಳಗೊಂಡಿವೆ. ಇವುಗಳಿಗೂ ಬರೋಬ್ಬರಿ ರೂ.30,000 ರಿಯಾಯಿತಿ ನೀಡಲಾಗಿದೆ. ಈ ಡಿಸ್ಕೌಂಟ್‌ನಲ್ಲಿ ರೂ.20,000 ಗ್ರಾಹಕ ರಿಯಾಯಿತಿ ಮತ್ತು ರೂ.10,000 ಸ್ಕ್ರ್ಯಾಪ್ ಬೋನಸ್ ಇದೆ.
ನೂತನ ಟಾಟಾ ನೆಕ್ಸಾನ್ ಎಸ್‌ಯುವಿಯ ಪೆಟ್ರೋಲ್/ ಡೀಸೆಲ್ ಚಾಲಿತ ಪ್ಯೂರ್ & ಪ್ಯೂರ್ ಎಸ್ ರೂಪಾಂತರಗಳು (ವೇರಿಯೆಂಟ್), ಒಟ್ಟು ರೂ.25,000 ಹಣಕಾಸಿನ ಪ್ರಯೋಜನಗಳನ್ನು ಹೊಂದಿವೆ. ಇದರೊಳಗೆ ರೂ.15,000 ಗ್ರಾಹಕ ರಿಯಾಯಿತಿ ಹಾಗೂ ರೂ.10,000 ಸ್ಕ್ರ್ಯಾಪ್ ಬೋನಸ್ ಸಹ ಸೇರಿದೆ.

ಇದೇ ನೆಕ್ಸಾನ್ ಕಾರಿನ ಪೆಟ್ರೋಲ್ ಚಾಲಿತ ಸ್ಮಾರ್ಟ್ (ಒ), ಸ್ಮಾರ್ಟ್ ಪ್ಲಸ್ ಮತ್ತು ಸ್ಮಾರ್ಟ್ ಪ್ಲಸ್ ಎಸ್ ರೂಪಾಂತರಗಳು ಸರಿ ಸುಮಾರು ರೂ.10,000 ರಿಯಾಯಿತಿ ಹೊಂದಿವೆ. ಡೀಸೆಲ್ ಚಾಲಿತ ಸ್ಮಾರ್ಟ್ ಪ್ಲಸ್ ಹಾಗೂ ಸ್ಮಾರ್ಟ್ ಪ್ಲಸ್ ಎಸ್ ರೂಪಾಂತರಗಳು ಕೂಡ ಬರೋಬ್ಬರಿ ರೂ.10,000 ಹಣಕಾಸಿನ ಪ್ರಯೋಜನ ಪಡೆದಿವೆ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹೊಚ್ಚ ಹೊಸ ಟಾಟಾ ನೆಕ್ಸಾನ್ ಎಸ್‌ಯುವಿಯ ಆರಂಭಿಕ ಶ್ರೇಣಿ ರೂಪಾಂತರ (ಎಂಟ್ರಿ ಲೆವೆಲ್ ವೇರಿಯೆಂಟ್) ರೂ.8 ಲಕ್ಷ ಬೆಲೆಯನ್ನು ಹೊಂದಿದೆ. ಗರಿಷ್ಠ ಶ್ರೇಣಿ ರೂಪಾಂತರ (ಟಾಪ್ ಎಂಡ್ ವೇರಿಯೆಂಟ್) ರೂ.15 ಲಕ್ಷ (ಎಕ್ಸ್ ಶೋರೂಂ) ದರವನ್ನು ಒಳಗೊಂಡಿದೆ.

ಈ ಕಾರು 1.2-ಲೀಟರ್ ಟರ್ಬೊ ಪೆಟ್ರೋಲ್, 1.5-ಲೀಟರ್ ಡೀಸೆಲ್ ಹಾಗೂ 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್/ 7-ಸ್ಪೀಡ್ ಡುಯಲ್ ಕ್ಲಚ್ ಟ್ರಾಸ್ಮಿಷನ್ (ಡಿಸಿಟಿ) ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. 17.18 ರಿಂದ 24 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ.
ನೂತನ ನೆಕ್ಸಾನ್ ಎಸ್‌ಯುವಿಯಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.25-ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (10.25-ಇಂಚು), ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ನಿಮ್ಮ ಗಮನಕ್ಕೆ.. ಈ ರಿಯಾಯಿತಿ ಪ್ರಯೋಜನಗಳು ಕರ್ನಾಟಕಕ್ಕೆ ಮಾತ್ರ ಅನ್ವಯವಾಗಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications