ಪೈಪೋಟಿ ಹೆಚ್ಚಾಯ್ತು... ಟಾಟಾ ಪ್ರತಿಷ್ಠೆಗೆ ಸವಾಲ್... ಸಣ್ಣ ಕಾರಿನಲ್ಲೇ ಸನ್‌ರೂಫ್ ನೀಡಲು ಸಜ್ಜು!
ಭಾರತೀಯ ಆಟೋ ಉದ್ಯಮವು ಹೆಮ್ಮರವಾಗಿ ಬೆಳೆದುನಿಂತಿದ್ದು, ಇಂದು ವಿಶ್ವದ ನಾಲ್ಕನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿ ಭಾರತ ಗುರ್ತಿಸಿಕೊಂಡಿದೆ. ನಿತ್ಯ ಯಾವುದೋ ಒಂದು ಕಾರಿನ ಬಗ್ಗೆ ಅಪ್‌ಡೇಟ್‌ಗಳು, ಬಿಡುಗಡೆಗಳು, ಕುತೂಹಲಕಾರಿ ಮಾಹಿತಿ ಹೊರಬೀಳಿತ್ತಿರುತ್ತದೆ. ಗ್ರಾಹಕರನ್ನು ಸೆಳೆಯಲು ಪೈಪೋಟಿಯೊಂದಿಗೆ ಕಾರುಗಳಲ್ಲಿ ವಿಶೇಷ ಫೀಚರ್‌ಗಳನ್ನು ನೀಡಲಾಗುತ್ತಿದೆ.
ಈಗಲೂ ಟಾಟಾದಿಂದ ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ತನ್ನ ಜನಪ್ರಿಯ ನೆಕ್ಸಾನ್ ಪನಾರಮಿಕ್ ಸನ್‌ರೂಫ್ ಹೊಂದಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಟಾಟಾ ಮೋಟಾರ್ಸ್‌ಗೆ ಭಾರೀ ಜನಪ್ರಿಯತೆ ತಂದುಕೊಟ್ಟಿರುವ ಹಾಗೂ ಹೆಚ್ಚು ಮಾರಾಟವಾಗುವ ಈ ಕಾಂಪ್ಯಾಕ್ಟ್ ಎಸ್‌ಯುವಿ ಶೀಘ್ರದಲ್ಲೇ 'ಡ್ಯುಯಲ್ ಪ್ಯಾನ್ ಸನ್‌ರೂಫ್' (Dual-pane sunroof) ಪಡೆಯಲಿದೆ ಎಂಬುದು ಈಗ ಬಹಿರಂಗಗೊಂದಿದೆ. ಪ್ರಸ್ತುತ, ನೆಕ್ಸಾನ್ ಅನ್ನು ಸ್ಮಾರ್ಟ್ + ಎಸ್ ರೂಪಾಂತರದಿಂದ ಪ್ರಾರಂಭಿಸಿ ಕೇವಲ 'ಸಿಂಗಲ್ ಪ್ಯಾನ್' (Single Pan) ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಸನ್‌ರೂಫ್‌ನೊಂದಿಗೆ ಮಾತ್ರ ನೀಡಲಾಗುತ್ತಿದೆ.

'ಟಾಟಾ ನೆಕ್ಸಾನ್' ಪ್ರಸ್ತುತ ಸ್ಮಾರ್ಟ್, ಸ್ಮಾರ್ಟ್ +, ಪ್ಯೂರ್, ಕ್ರಿಯೇಟಿವ್ +, ಕ್ರಿಯೇಟಿವ್ +, ಫಿಯರ್‌ಲೆಸ್ ಮತ್ತು ಫಿಯರ್‌ಲೆಸ್ + ಎಂಬ ಏಳು ಟ್ರಿಮ್‌ಗಳಲ್ಲಿ ಲಭ್ಯವಿದೆ. ಈ ಎಲ್ಲಾ ವೇರಿಯೆಂಟ್‌ಗಳನ್ನು S (ಸನ್‌ರೂಫ್) ಆವೃತ್ತಿಯೊಂದಿಗೆ ಆಯ್ಕೆ ಮಾಡಬಹುದು, ಅಂದರೆ ಇದು ವೈಶಿಷ್ಟ್ಯಗಳ ಪಟ್ಟಿಗೆ ಸನ್‌ರೂಫ್ ಅನ್ನು ಸೇರಿಸುತ್ತದೆ. ಈಗ, ಡ್ಯುಯಲ್ ಪನೋರಮಿಕ್ ಸನ್‌ರೂಫ್ ಅನ್ನು ಟಾಪ್-ಸ್ಪೆಕ್ ಫಿಯರ್ ಲೆಸ್+ ವೇರಿಯೆಂಟ್‌ನೊಂದಿಗೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಪೈಪೋಟಿ ಹಚ್ಚಾಗಿದೆ: ವಿಶೇಷಯವೇನೆಂದರೆ, ದೇಶದ ಜನಪ್ರಿಯ ಎಸ್‌ಯುವಿ ತಯಾರಕರಾದ ಮಹೀಂದ್ರಾ ಅವರು, ಇತ್ತೀಚೆಗೆ ಹೊಸ Mahindra XUV 3XO ಎಸ್‌ಯುವಿಯನ್ನು ಬಿಡುಗಡೆ ಮಾಡಿದ್ದಾರೆ. ಇದು ತನ್ನ ವಿಭಾಗದಲ್ಲಿಯೇ ಈ ವೈಶಿಷ್ಟ್ಯವನ್ನು ಪಡೆದ ಏಕೈಕ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಇದಲ್ಲದೆ, ಅದರ ಪ್ರಾಬಲ್ಯವನ್ನು ಮತ್ತಷ್ಟು ಹೆಚ್ಚಿಸಲು, ಕಾರು ತಯಾರಕರು ADAS ಸೂಟ್‌ನಂತಹ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸಹ ನೀಡಿದ್ದಾರೆ.

ಸದ್ಯ ಹೆಚ್ಚು ಮಾರಾಟದಲ್ಲಿರುವ ಟಾಟಾ ನೆಕ್ಸಾನ್‌ಗೆ Mahindra XUV 3XO ತೀವ್ರ ಪೈಪೋಟಿ ನೀಡುವ ಜೊತೆಗೆ ನೆಕ್ಸಾನ್ ಮಾರಾಟದಲ್ಲಿ ಇಳಿಕೆಯಾಗುವ ಸಾಧ್ಯತೆ ಕೂಡ ಇದೆ. ಹಾಗೆಯೇ ಹೆಚ್ಚಿನ ಪ್ರಾಥಮಿಕ ಪ್ರತಿಸ್ಪರ್ಧಿಗಳು ಈಗ ತಮ್ಮ ಟಾಪ್-ಸ್ಪೆಕ್ ರೂಪಾಂತರಗಳೊಂದಿಗೆ ಲೆವೆಲ್ 1 ಮತ್ತು ಲೆವೆಲ್ 2 ADAS ಅನ್ನು ನೀಡುತ್ತಿದ್ದಾರೆ. ಹಾಗಾಗಿಯೇ ಟಾಟಾ ಮೋಟಾರ್ಸ್ ಈ ಪೈಪೋಟಿಯನ್ನು ಎದುರಿಸಲು ಹೊಸ ಡ್ಯುಯಲ್ ಪನಾರಮಿಕ್ ಸನ್‌ರೂಫ್ ಅನ್ನು ನೀಡಲು ಮುಂದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳದಿದ್ದರೂ, ಕಾರಿನಲ್ಲಿ ಇನ್ನೂ ಹಲವು ಆಧುನಿಕ ಫೀಚರ್‌ಗಳನ್ನು ಸೇರಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
60 ನಿಮಿಷಗಳಲ್ಲಿ 50 ಸಾವಿರ ಬುಕ್ಕಿಂಗ್: ಮಹೀಂದ್ರಾ XUV 3XO ಬುಕ್ಕಿಂಗ್ ಆರಂಭವಾದ ಮೊದಲ 60 ನಿಮಿಷಗಳಲ್ಲಿ ಬರೋಬ್ಬರಿ 50,000 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಸ್ವೀಕರಿಸಿದೆ. ಕಂಪನಿ ಪ್ರಕಾರ, ಮಹೀಂದ್ರಾ XUV 3XO ಮೊದಲ 10 ನಿಮಿಷಗಳಲ್ಲಿಯೇ 27,000 ಕ್ಕೂ ಹೆಚ್ಚು ಬುಕಿಂಗ್‌ಗಳು ದಾಖಲಾಗಿವೆ. ಅಸಾಧಾರಣ ವಿನ್ಯಾಸ, ಪ್ರೀಮಿಯಂ ಒಳಾಂಗಣ, ಆರಾಮದಾಯಕ ಸವಾರಿ, ಅತ್ಯಾಧುನಿಕ ತಂತ್ರಜ್ಞಾನ, ರೋಮಾಂಚಕ ಕಾರ್ಯಕ್ಷಮತೆಯು ಕಾರಿನ ಬೇಡಿಕೆ ಹೆಚ್ಚಿಸಿದೆ.
ಸುರಕ್ಷತೆ: ಮಹೀಂದ್ರಾ XUV 3XO ಲೆವೆಲ್ 2 ADAS ತಂತ್ರಜ್ಞಾನ, ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, EBD ಜೊತೆಗೆ ABS, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಡಿಸ್ಕ್ ಬ್ರೇಕ್, ರೋಲ್ ಓವರ್ ಮಿಟಿಗೇಶನ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ವೆಹಿಕಲ್ ಡೈನಾಮಿಕ್ಸ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಅನ್ನು ಹೊಂದಿದೆ.
ವೈಶಿಷ್ಟ್ಯಗಳು: ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಯೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನವೀಕರಿಸಿದ 7-ಸ್ಪೀಕರ್ ಒಳಗೊಂಡ ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಆಂಬಿಯೆಂಟ್ ಸೌಂಡ್ ಮೋಡ್‌ಗಳು, ಹಿಂಬದಿಯಲ್ಲಿ ಎಸಿ ವೆಂಟ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಇನ್ನಷ್ಟು ಫಿಚರ್ಸ್ ಗಳನ್ನು ಹೊಂದಿದೆ.


Click it and Unblock the Notifications