Tata: 24 ಕಿ.ಮೀ ಮೈಲೇಜ್ ನೀಡುವ ಬೆಸ್ಟ್ ಟಾಟಾ ಕಾರು: ಬೆಲೆ ಕೇವಲ ರೂ. 8.99 ಲಕ್ಷ
ಭಾರತದಲ್ಲಿ ಟಾಟಾ ಮೋಟಾರ್ಸ್ ನೀಡುವ ಅತ್ಯುತ್ತಮ ಸುರಕ್ಷಿತ ಕಾರುಗಳಲ್ಲಿ ನೆಕ್ಸಾನ್ ಕೂಡ ಒಂದು, ಇತ್ತೀಚೆಗೆ ಈ ಕಾರು ಭಾರತ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಗಳಿಸಿದೆ. ಸಣ್ಣ ಕುಟುಂಬಕ್ಕೆ ಇದು ಬೆಸ್ಟ್ ಕಾರಾಗಿದ್ದು, ಐದು ಮಂದಿ ಪ್ರಯಾಣಕ್ಕೆ ಸಾಕಷ್ಟು ಸ್ಥಳಾವಕಾಶವನ್ನು ನೀಡುತ್ತದೆ. ಸುರಕ್ಷತಾ ವೈಶಿಷ್ಟ್ಯಗಳು ಸೇರಿದಂತೆ ಸಮಗ್ರ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಟಾಟಾ ನೆಕ್ಸಾನ್ ಬೇಸ್ ಮಾಡೆಲ್ ಪೆಟ್ರೋಲ್-ಮ್ಯಾನುವಲ್ ಬೆಲೆಯು ರೂ.8 ಲಕ್ಷಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಟಾಪ್-ಎಂಡ್ ಡೀಸೆಲ್-ಆಟೋಮ್ಯಾಟಿಕ್ ವೇರಿಯೆಂಟ್ ಬೆಲಯು ರೂ.15.80 ಲಕ್ಷಗಳವರೆಗೆ (ಎಕ್ಸ್ ಶೋರೂಂ) ಹೋಗುತ್ತದೆ.
ಗ್ರಾಹಕರಿಗೆ ಸಿಹಿ ಸುದ್ದಿಯೇನೆಂದರೆ ಈ ಕಾರಿನಲ್ಲಿ ಸಿಎನ್‌ಜಿ ಆಯ್ಕೆ ಕೂಡ ಇದ್ದು, ಇದರ ಬೆಲೆಯು ರೂ. 8.99 ಲಕ್ಷ (ಎಕ್ಸ್ ಶೋರೂಂ)ಗಳಿಂದ 14.59 ಲಕ್ಷ ರೂ. (ಎಕ್ಸ್ ಶೋರೂಂ)ಗಳವರೆಗೆ ಇದೆ. ಈ ಕಾರಿನ ಬಗೆಗಿನ ಫೀಚರ್ಸ್, ಸುರಕ್ಷತೆ, ಎಂಜಿನ್, ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳನ್ನು ಕೆಳಗೆ ನೋಡೋಣ.

ಸುರಕ್ಷತೆ: ಎಲ್ಲಾ ವೇರಿಯೆಂಟ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸಾರ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್ ಜೊತೆಗೆ ಇಬಿಡಿ, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್ ಇವೆ. ಹೈ ಸ್ಪೆಕ್ ವೇರಿಯೆಂಟ್‌ಗಳು ಬ್ಲೈಂಡ್ ವ್ಯೂ ಮಾನಿಟರ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ನೊಂದಿಗೆ 360-ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯುತ್ತವೆ.
ಎಂಜಿನ್: ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ಮೊದಲನೇಯದು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ನೊಂದಿಗೆ ಬರುತ್ತದೆ. ಹಾಗೆಯೇ ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಕೂಡ ಹೊಂದಿದೆ. ಇಲ್ಲಿ ಎರಡು ರೀತಿಯ 6-ಸ್ಪೀಡ್ ಎಎಂಟಿ ಅಥವಾ 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಆಯ್ಕೆಗಳು ಇವೆ.

ಎರಡನೇಯದು 1.5 - ಲೀಟರ್ ಡೀಸೆಲ್ ಡೀಸೆಲ್ ಎಂಜಿನ್ ಆಗಿದ್ದು, ಇದು ಹೆದ್ದಾರಿಗಳಲ್ಲಿ ಉತ್ತಮ ಮೈಲೇಜ್‌ಗೆ ಆಲ್ ರೌಂಡರ್ ಎಂದು ಪರಿಗಣಿಸಲಾಗುತ್ತದೆ. ಟಾಟಾ ನೆಕ್ಸಾನ್ ನೊಂದಿಗೆ, ಇದು 6 - ಸ್ಪೀಡ್ ಮ್ಯಾನುವಲ್ ಅಥವಾ 6 - ಸ್ಪೀಡ್ ಎಎಂಟಿಯೊಂದಿಗೆ ಜೋಡಿಸಲ್ಪಟ್ಟಿದೆ.
ಮೈಲೇಜ್: 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮ್ಯಾನುವಲ್‌ನಲ್ಲಿ 17.44 ಕಿ.ಮೀ ಮೈಲೇಜ್, ಆಟೋಮ್ಯಾಟಿಕ್‌ನಲ್ಲಿ 17.18 ಕಿ.ಮೀ ಮೈಲೇಜ್, ಸಿಎನ್‌ಜಿನಲ್ಲಿ ಕೆ.ಜಿಗೆ 24 ಕಿ.ಮೀ ಮೈಲೇಜ್ ನೀಡುತ್ತದೆ. ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ ಮ್ಯಾನುವಲ್‌ನಲ್ಲಿ 23.23 ಕಿ.ಮೀ ಮೈಲೇಜ್, ಆಟೋಮ್ಯಾಟಿಕ್‌ನಲ್ಲಿ 24.08 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಆದ್ರೆ ನಿಜವಾದ ಮೈಲೇಜ್ ಸುಮಾರು 4-5 ಕಿ.ಮೀ ಕಡಿಮೆ ಇರಬಹುದು.

ಫೀಚರ್ಸ್: ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು (ಒಂದು ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಇನ್ನೊಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್), ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ (ಕ್ರಿಯೇಟಿವ್ +), ಕನೆಕ್ಟೆಡ್ ಕಾರ್ ಟೆಕ್ನಾಲಜಿ, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋ ಎಸಿ, , ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಹೊಂದಿದೆ.
ಇವಿಷ್ಟೇ ಅಲ್ಲದೇ ನೆಕ್ಸಾನ್ ವಾಯ್ಸ್-ಆಕ್ಟಿವೇಟೆಡ್ ಸನ್ ರೂಫ್ ಪ್ರೀಮಿಯಂ ಕ್ಯಾಬಿನ್ ಫಿಟ್ ಮೆಂಟ್ ಆಗಿದ್ದು, ಕಡಿಮೆ-ಸ್ಪೆಕ್ ಸ್ಮಾರ್ಟ್ + ಎಸ್ ರೂಪಾಂತರದಲ್ಲೂ ಸಹ ಲಭ್ಯವಿದೆ. ನೆಕ್ಸಾನ್ ಸಿಎನ್‌ಜಿ ಪನೋರಮಿಕ್ ಸನ್ ರೂಫ್ ಅನ್ನು ಸಹ ಪಡೆಯುತ್ತದೆ, ಇದನ್ನು ಇನ್ನೂ ನೆಕ್ಸಾನ್ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications