TATA Nexon: ಮತ್ತೊಮ್ಮೆ ಗ್ರಾಹಕರಿಗೆ ಆಘಾತ ನೀಡದ ಟಾಟಾ... ನೆಕ್ಸಾನ್ ಕೊಳ್ಳುವವರ ಗಮನಕ್ಕೆ!
ಟಾಟಾ ಮೋಟಾರ್ಸ್ ಭಾರತದ ಅತೀ ಯಶಸ್ವಿ ಕಾರು ನಿರ್ಮಾಣ ಕಂಪನಿ ಎಂದು ಹೇಳಿದರೆ ಅದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಭಾರತೀಯರ ನಾಡಿ ಮಿಡಿತವನ್ನು ಸಂಪೂರ್ಣವಾಗಿ ಅರಿತಿರುವ ಟಾಟಾ ಮೋಟಾರ್ಸ್, ಅದಕ್ಕೆ ತಕ್ಕುದಾದ ವಾಹನಗಳನ್ನು ಸಿದ್ದ ಪಡಿಸಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಇದೀಗ ಕೆಲವು ತಿಂಗಳ ಹಿಂದೆಯಷ್ಟೇ ಟಾಟಾ ತನ್ನ ಜನಪ್ರಿಯ ಕಾರು ಮಾದರಿಯಾದ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಿತ್ತು. ಕಳೆದ ಬಾರಿಯ ನೆಕ್ಸಾನ್‌ಗಿಂತ ಹೆಚ್ಚು ಸ್ಟೈಲಿಶ್ ಆಗಿ ಮೂಡಿ ಬಂದಿದ್ದು, ಈಗಾಗಲೇ ಸಾಕಷ್ಟು ಬುಕಿಂಗ್ ಅನ್ನು ಪಡೆದುಕೊಂಡಿದೆ. ಇದು ಲಾಂಚ್ ಆದಾಗ ಸುಮಾರು ೮.೦೯ ಲಕ್ಷ ಎಕ್ಸ್ ಶೋ ರೂಮ್ ಬೆಲೆಗೆ ಪರಿಚಯಾತ್ಮಕ ಬೆಲೆಯಾಗಿ ಪರಿಚಯಿಸಿತ್ತು. ಆದರೆ ಇದೀಗ ಅದರ ಕಾಲಾವಧಿ ಮುಗಿದಿದ್ದು ಈ ಕಾರಿನ ಬೆಲೆ ಹೆಚ್ಚಾಗಿದೆ.

ಹೌದು, ಟಾಟಾ ನೆಕ್ಸಾನ್‌ನ (TATA Nexon) ಪರಿಚಯಾತ್ಮಕ ಬೆಲೆ ಮುಗಿದಿರುವ ಕಾರಣ ಈ ಕಾರು ಸುಮಾರು 20000 ರೂಗಳಷ್ಟು ದುಬಾರಿಯಾಗಲಿದೆ. ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ ಎಸ್‌ಯುವಿ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು. ಕಂಪನಿಯು ಗ್ರಾಹಕರಿಂದ ಬಂದ ಬೇಡಿಕೆಯನ್ನು ಮನಗಂಡು ಇಂಧನ ಚಾಲಿತ ನೆಕ್ಸಾನ್ ಎಸ್‌ಯುವಿಯನ್ನು ಎಲೆಕ್ಟ್ರಿಕ್ ಅವತಾರದಲ್ಲಿಯೂ ಲಾಂಚ್ ಮಾಡಿತ್ತು.
ಇನ್ನು ಈ ಟಾಟಾ ನೆಕ್ಸಾನ್‌ನ ಡಿಸೈನ್ ಮತ್ತು ಇನ್ನಿತರ ವಿಷಯಗಳ ಬಗ್ಗೆ ನೊಡುವುದಾದರೆ, ಈ ಕಾರಿನ ಹೊರ ಭಾಗದ ಡಿಸೈನ್ ಬಗ್ಗೆ ಕೂಲಂಕಷವಾಗಿ ಮಾತನಾಡೋಣ. ನೆಕ್ಸಾನ್ ಎಸ್‌ಯುವಿ, ರಸ್ತೆಯಲ್ಲಿ ಹೋಗುವಾಗ, ಒಂದು ಕ್ಷಣ ಪ್ರತಿಯೊಬ್ಬರನ್ನು ತನ್ನತ್ತ ಸೆಳೆಯುವಂತಹ ನೋಟವನ್ನು ಹೊಂದಿದೆ. ಹಿಂದಿನ ಮಾದರಿಗೆ ಹೋಲಿಸಿದರೆ, ಸಾಕಷ್ಟು ಬದಲಾವಣೆಗಳನ್ನು ಪಡೆದಿದೆ. ನೆಕ್ಸಾನ್‌ನ ಹೊರಭಾಗದ ವಿನ್ಯಾಸವೂ ಬಹುತೇಕ ಕಂಪನಿಯ ಕರ್ವ್ವ್ (Curvv) ಕಾನ್ಸೆಪ್ಟ್ ಕಾರಿಗೆ ಹೋಲಿಕೆಯಾಗುತ್ತದೆ.

ಹೊಸ (2023) ನೆಕ್ಸಾನ್, ಅಕ್ಕಪಕ್ಕದ ಭಾಗಗಳು (sides) ಅಷ್ಟಾಗಿ ಯಾವುದೇ ಬದಲಾವಣೆ ಪಡೆದಿಲ್ಲ. ಏರೋ ಇನ್ಸೆರ್ಟ್ಸ್ ಜೊತೆಯಲ್ಲಿ ಹೊಸದಾದ 16 ಇಂಚಿನ ಅಲಾಯ್ ವೀಲ್ಸ್ ಅನ್ನು ಹೊಂದಿದೆ. ಇದರೊಟ್ಟಿಗೆ, ನೂತನ ಕಾರಿನ ಟಾಪ್ ಎಂಡ್ ಮಾದರಿಗಳು ಬಿಳಿ (white) ಅಥವಾ ಕಪ್ಪು (black) ಬಣ್ಣದಲ್ಲಿ ಮೇಲ್ಚಾವಣಿ (roof) ಆಯ್ಕೆಯನ್ನು ಪಡೆದಿರುತ್ತವೆ. ನಿಮಿಷ್ಟದ ಬಣ್ಣವನ್ನು ನೀವೇ ಆರಿಸಿಕೊಳ್ಳಬಹುದು.
ಈ ಕಾರಿನ ಬಣ್ಣಗಳ ಕುರಿತಾಗಿ ಮಾತನಾಡುವುದಾದರೆ, ಈ ನೆಕ್ಸಾನ್ ಕಾರು, 6 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಫಿಯರ್‌ಲೆಸ್ ಪರ್ಪಲ್, ಕ್ರಿಯೇಟಿವ್ ಓಷನ್, ಪ್ರಿಸ್ಟಿನ್ ವೈಟ್, ಪ್ಯೂರ್ ಗ್ರೇ, ಡೇಟೋನಾ ಗ್ರೇ ಮತ್ತು ಫ್ಲೇಮ್ ರೆಡ್. ಮುಖ್ಯವಾಗಿ, ಫ್ಲೇಮ್ ರೆಡ್ ಮತ್ತು ಡೇಟೋನಾ ಗ್ರೇ ಬಣ್ಣಗಳನ್ನು ಹೊಂದಿರುವ ಕಾರು, ವೈಟ್ ಅಥವಾ ಬ್ಲ್ಯಾಕ್ ಬಣ್ಣದ ರೂಫ್ ಆಯ್ಕೆಯಲ್ಲಿ ಸಿಗುತ್ತದೆ.
ನೆಕ್ಸಾನ್ ಎರಡು ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. 1.2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 118.2 bhp ಗರಿಷ್ಠ ಪವರ್ ಹಾಗೂ 170 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಅಥವಾ 6 ಸ್ವೀಡ್ ಮ್ಯಾನುವಲ್, 6 ಸ್ವೀಡ್ ಅಥವಾ 7 ಸ್ವೀಡ್ ಡುಯಲ್ ಕ್ಲಚ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications