Tata Punch: ಸದ್ದಿಲ್ಲದೇ ಟಾಟಾ ಪಂಚ್ ಕಾರಿನ ಈ ವೇರಿಯೆಂಟ್‌ಗಳ ಮಾರಾಟ ಸ್ಥಗಿತ!

ಟಾಟಾ ಮೋಟಾರ್ಸ್ (Tata Motors), ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಪಂಚ್ (Punch) ಜನಪ್ರಿಯ ಸಬ್-ಕಾಂಪ್ಯಾಕ್ಟ್ ಎಸ್‌ಯುವಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಳೆದ ಸೆಪ್ಟೆಂಬರ್ 17 ರಂದು ಈ ಕಾರನ್ನು ನವೀಕರಿಸಿದ ರೂಪದಲ್ಲಿಯೂ ಕಂಪನಿಯು ಬಿಡುಗಡೆಗೊಳಿಸಿತ್ತು. ಸದ್ಯ ಇದೇ ಪಂಚ್ ಎಸ್‌ಯುವಿಯ ಪ್ರಮುಖ ರೂಪಾಂತರಗಳ ಮಾರಾಟವನ್ನು ಯಾವುದೇ ಸುಳಿವನ್ನು ನೀಡದೆ ಸ್ಥಗಿತಗೊಳಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಟಾಟಾ ಕಂಪನಿಯು 'ಪಂಚ್' ಎಸ್‌ಯುವಿಯ ಮಧ್ಯಮ ಶ್ರೇಣಿ ರೂಪಾಂತರಗಳಾದ (Mid-Spec Variants) ಅಡ್ವೆಂಚರ್ (Adventure) ಹಾಗೂ ಅಡ್ವೆಂಚರ್ ರಿದಮ್ (Adventure Rhythm) ಮಾರಾಟವನ್ನು ನಿಲ್ಲಿಸಿದೆ. ಆದರೆ, ಈ ರೂಪಾಂತರಗಳ ಸ್ಥಗಿತಗೊಳಿಸುವಿಕೆಯ ಹಿಂದಿನ ನಿಜವಾದ ಕಾರಣಗಳು ಬಹಿರಂಗಗೊಂಡಿಲ್ಲ. ಇದರೊಂದಿಗೆ ಪಂಚ್ ಕಾರು ಪ್ಯೂರ್, ಪ್ಯೂರ್ (ಒ), ಕ್ರಿಯೇಟಿವ್ ಪ್ಲಸ್, ಅಕಾಂಪ್ಲಿಶ್ಡ್ ಪ್ಲಸ್ ಎಸ್ ಸೇರಿದಂತೆ 8 ರೂಪಾಂತರಗಳೊಂದಿಗೆ ಮಾತ್ರ ಖರೀದಿಗೆ ಲಭ್ಯವಿದೆ.

Tata Punch Adventure And Adventure Rhythm Variant Discontinued Details

ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ನೂತನ ಟಾಟಾ ಪಂಚ್ ಕಾರಿನ ಆರಂಭಿಕ ಶ್ರೇಣಿ ರೂಪಾಂತರ (Base-Spec Variant) 'ಪ್ಯೂರ್' ರೂ. 6.13 ಲಕ್ಷ ಬೆಲೆಯನ್ನು ಒಳಗೊಂಡಿದೆ. ಗರಿಷ್ಠ ಶ್ರೇಣಿ ರೂಪಾಂತರ (Top-Spec Variant) 'ಕ್ರಿಯೇಟಿವ್ ಪ್ಲಸ್ ಎಸ್' ರೂ.9.45 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಪಂಚ್ ಸಿಎನ್‌ಜಿ ರೂಪಾಂತರಗಳ ಬೆಲೆ ರೂ. 7.23 ಲಕ್ಷದಿಂದ ಶುರುವಾಗುತ್ತದೆ.

ನೂತನ ಟಾಟಾ ಪಂಚ್ ಕಾರು 1.2-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಪಡೆದಿದೆ. ಬರೋಬ್ಬರಿ 19 ರಿಂದ 26.99 ಕೆಎಂಪಿಎಲ್‌ವರೆಗೆ ಮೈಲೇಜ್ ಕೂಡ ನೀಡುತ್ತದೆ. ಇದರಲ್ಲಿ 5-ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

Tata Punch Adventure And Adventure Rhythm Variant Discontinued Details

ಈ ಕಾರು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಡುಯಲ್ ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ರೇರ್ ಎಸಿ ವೆಂಟ್‌ಗಳು ಹಾಗೂ ಸನ್‌ರೂಫ್‌ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರವಾಸದ ವೇಳೆ ಹೆಚ್ಚಿನ ಲಗೇಜ್ ಸಾಗಿಸಲು 366 ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್ ಇವಿ (Tata Punch EV) ಸಹ ಖರೀದಿಗೆ ಲಭ್ಯವಿದೆ. ಇದು ರೂ.9.99 ರಿಂದ 14.29 ಲಕ್ಷ ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ, 25 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 35 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 265 ರಿಂದ 365 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ.

ನೂತನ ಟಾಟಾ ಪಂಚ್ ಇವಿಯಲ್ಲಿ 5-ಮಂದಿ ಓಡಾಟ ನಡೆಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.25-ಇಂಚು), ಆಟೋಮೆಟಿಕ್ ಕ್ಲೇಮೇಟ್ ಕಟ್ರೋಲ್, ಏರ್ ಪ್ಯೂರಿಫೈಯರ್, 6-ಸ್ಪೀಕರ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು ಮತ್ತು ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ.

ಒಟ್ಟಾರೆಯಾಗಿ, ಟಾಟಾ ಪಂಚ್ ಕಾರು ಸಾಕಷ್ಟು ಅದ್ಭುತವಾಗಿದೆ. ಪೆಟ್ರೋಲ್/ಸಿಎನ್‌ಜಿ ಚಾಲಿತ ಅಡ್ವೆಂಚರ್ ಮತ್ತು ಅಡ್ವೆಂಚರ್ ರಿದಮ್ ಮಾರಾಟವನ್ನು ಸ್ಥಗಿತಗೊಳಿಸಿರುವುದು ಬೇಸರದ ಸಂಗತಿಯಾಗಿದೆ. ಆದರೂ, ಈ ಎಸ್‌ಯುವಿಯ ಇತರೆ ರೂಪಾಂತರಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಈ ಕಾರನ್ನು ಖರೀದಿ ಮಾಡಿದರೂ ಅಚ್ಚರಿಯಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, October 30, 2024, 15:49 [IST]
English summary
Tata punch adventure and adventure rhythm variant discontinued details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+