ಹಬ್ಬಕ್ಕೆ ಬಿಡುಗಡೆಯಾದ ಹೊಸ ಟಾಟಾ ಪಂಚ್ ಕ್ಯಾಮೊ ಎಡಿಷನ್ ಕಾರಿನ ವಿಶೇಷತೆಗಳು!
ಪ್ರಮುಖ ಎಸ್‌ಯುವಿ ತಯಾರಕರಾದ ಟಾಟಾ ಮೋಟಾರ್ಸ್, ಇತ್ತೀಚೆಗೆ ಟಾಟಾ ಪಂಚ್‌ನ ವಿಶೇಷ ಆವೃತ್ತಿಯಾದ CAMO ಎಡಿಷನ್ ಅನ್ನು ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿದ್ದಾರೆ. ಇದು ರೂ. 8,44,900 (ಎಕ್ಸ್ ಶೋ ರೂಂ ನವದೆಹಲಿ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ವೈಟ್ ರೂಫ್, R16 ಚಾರ್ಕೋಲ್ ಗ್ರೇ ಅಲಾಯ್ ವೀಲ್‌ಗಳು ಮತ್ತು ವಿಶಿಷ್ಟವಾದ CAMO ಮಾದರಿಯನ್ನು ಒಳಗೊಂಡಿರುವ ಪ್ರೀಮಿಯಂ ಸೀವೀಡ್ ಗ್ರೀನ್ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಈ ಹೊಸ ಕಾರಿನ ಕುರಿತ ಹೆಚ್ಚಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಟಾಟಾ ಪಂಚ್ ವಿಶಾಲವಾದ ಒಳಾಂಗಣ ಮತ್ತು ಸಂಪೂರ್ಣ ಸುರಕ್ಷತೆ ಹಾಗೂ SUV ಗುಣಲಕ್ಷಣಗಳನ್ನು ಹೊಂದಿರುವ ಕಾರಣ, ಬೆಳೆಯುತ್ತಿರುವ ಜನಪ್ರಿಯತೆ ಟಾಟಾ ಪಂಚ್ ಅನ್ನು FY25 ರಲ್ಲಿ ಎಲ್ಲಾ ವಿಭಾಗಗಳಲ್ಲಿ ಅತಿ ಹೆಚ್ಚು ಮಾರಾಟವಾಗುವ ವಾಹನವನ್ನಾಗಿ ಮಾಡಿದೆ. ಈ ಬೇಡಿಕೆಯ ಮೇರೆಗೆ, ನಾವು ಈಗ ಪಂಚ್‌ನ ಸೀಮಿತ CAMO ಕಾರನ್ನು ಪರಿಚಯಿಸಿದ್ದೇವೆ ಎಂದು ಕಂಪನಿ ಹೇಳಿದೆ.

ಹೊಸ ಕ್ಯಾಮೊ ಎಡಿಷನ್ ಕಾರಿನಲ್ಲಿ ವೈರ್‌ಲೆಸ್ ಚಾರ್ಜರ್, ರಿಯರ್ ಎಸಿ ವೆಂಟ್‌ಗಳು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇನೊಂದಿಗೆ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಆರ್ಮ್‌ರೆಸ್ಟ್‌ನೊಂದಿಗೆ ಗ್ರ್ಯಾಂಡ್ ಕನ್ಸೋಲ್‌ನಂತಹ ಕಂಫರ್ಟ್-ಟೆಕ್ ವೈಶಿಷ್ಟ್ಯಗಳು, ವೇಗದ ಸಿ-ಟೈಪ್ ಯುಎಸ್‌ಬಿ ಚಾರ್ಜರ್ ಸೇರ್ಪಡೆಯು ಟಾಟಾ ಪಂಚ್ ಕ್ಯಾಮೊದಲ್ಲಿ ನೀಡಲಾಗಿದೆ.
ಇವಿಷ್ಟೇ ಅಲ್ಲದೇ ಪರ್ಫಾಮೆನ್ಸ್ ವಿಷಯದಲ್ಲಿ ಟಾಟಾ ಪಂಚ್ ರೋಮಾಂಚಕ ಚಾಲನಾ ಅನುಭವವನ್ನು ನೀಡುತ್ತದೆ. ಇನ್ನು ಸುರಕ್ಷತೆ ವಿಷಯಕ್ಕೆ ಬಂದರೆ 2021ರ GNCAP ಸುರಕ್ಷತಾ ಮಾನದಂಡಗಳ ಅಡಿಯಲ್ಲಿ ಪ್ರತಿಷ್ಠಿತ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿರುವ ಪಂಚ್, ಭಾರತದ ಸುರಕ್ಷಿತ ಸಬ್-ಕಾಂಪ್ಯಾಕ್ಟ್ SUV ಆಗಿದೆ.
ಇದರ ದೃಢವಾದ ವಿನ್ಯಾಸ, 187 ಎಂಎಂ ಗ್ರೌಂಡ್ ಕ್ಲಿಯರೆನ್ಸ್, ಕಮಾಂಡಿಂಗ್ ಡ್ರೈವಿಂಗ್ ಪೊಸಿಷನ್ ಮತ್ತು ವೈವಿಧ್ಯಮಯ ಭೂಪ್ರದೇಶಗಳನ್ನು ಸಲೀಸಾಗಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಇದೇ ಕಾರಣಕ್ಕೆ ಕಾರು ಉತ್ತಮ ಮಾರಾಟವನ್ನು ಕಾಣುತ್ತಿದ್ದು, ಕೇವಲ 10 ತಿಂಗಳಲ್ಲಿ 1 ಲಕ್ಷ ಮಾರಾಟ ಹಾಗೂ ಕೇವಲ 34 ತಿಂಗಳಲ್ಲಿ 4 ಲಕ್ಷ ಮಾರಾಟದ ಗಡಿ ದಾಟಿದೆ.
ಟಾಟಾ ಮೋಟಾರ್ಸ್ ತನ್ನ ಪಂಚ್ ಮೈಕ್ರೋ ಎಸ್‌ಯುವಿಯನ್ನು ಸದ್ಯ ತನ್ನ ವಿಭಾಗದಲ್ಲಿ ಸಣ್ಣ ಫ್ಯಾಮಿಲಿಗೆ ಉತ್ತಮ ಆಯ್ಕೆಯಾಗಿದ್ದು, ಈಗ ಹೊಸ ಕ್ಯಾಮೊ ಎಡಿಷನ್ ಹಬ್ಬದ ಸೀಸನ್‌ನಲ್ಲಿ ಯಾವ ಮಟ್ಟಕ್ಕೆ ಬೇಡಿಕೆ ಪಡೆಯಲಿದೆ ಕಾದು ನೋಡಬೇಕಿದೆ. ಪೆಟ್ರೋಲ್, ಡ್ಯುಯಲ್-ಸಿಲಿಂಡರ್ CNG ಮತ್ತು ಎಲೆಕ್ಟ್ರಿಕ್ ಸೇರಿದಂತೆ ಬಹು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಾಗಿಸಿದೆ.
ಅಕ್ಟೋಬರ್ 2021 ರಲ್ಲಿ ಬಿಡುಗಡೆಯಾದಾಗಿನಿಂದ, ಪಂಚ್ ತನ್ನ ಅದ್ಭುತ ವಿನ್ಯಾಸ, ಬಹುಮುಖ ಮತ್ತು ಆಕರ್ಷಕ ಪರ್ಫಾಮೆನ್ಸ್‌ನಿಂದ ಹೆಚ್ಚು ಮೆಚ್ಚುಗೆಯನ್ನು ಪಡೆದಿದೆ. ಇದೇ ಕಾರಣಕ್ಕೆ ಹೊಸ ಕ್ಯಾಮೊ ಎಡಿಷನ್ ಅನ್ನು ಬಿಡುಗಡೆ ಮಾಡಿದ್ದೇವೆ ಎಂದು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications