Tata Punch: ಟಾಟಾ ಪಂಚ್ ಕ್ಯಾಮೊ ಎಡಿಷನ್‌ಗೆ ಹೆಚ್ಚಾಯ್ತು ಬೇಡಿಕೆ... ವಿಶೇಷತೆಗಳೇನು?
ಭಾರತದ ಪ್ರಮುಖ ಎಸ್‌ಯುವಿ ತಯಾರಕರಾದ ಟಾಟಾ ಮೋಟಾರ್ಸ್, ಇತ್ತೀಚೆಗೆ ಹಬ್ಬದ ಅಂಗವಾಗಿ ಟಾಟಾ ಪಂಚ್‌ನ ವಿಶೇಷ ಸೀಮಿತ ಅವಧಿಯ CAMO ಎಡಿಷನ್ ಅನ್ನು ಬಿಡುಗಡೆ ಮಾಡಿತ್ತು. ಸದ್ಯ ಈ ಕಾರಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಉತ್ತಮ ಮಾರಾಟ ಕಾಣುತ್ತಿದೆ. ಈ ವಿಶೇಷ ಆವೃತ್ತಿಯು ಸಾಮಾನ್ಯ ಟಾಟಾ ಪಂಚ್ ಎಸ್‌ಯುವಿಗಿಂತ ಹಲವು ವಿಭಿನ್ನ ವಿನ್ಯಾಸ ಅಂಶಗಳನ್ನು ಪಡೆದುಕೊಂಡಿದೆ. ಹಾಗಾಗಿ ರೂ. 8,44,900 (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಕಾರಿನ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.
ಹೊಸ ಟಾಟಾ ಪಂಚ್ ಕ್ಯಾಮೋ ವಿಶಿಷ್ಟವಾದ CAMO ಮಾದರಿಯನ್ನು ಒಳಗೊಂಡಿರುವ ಪ್ರೀಮಿಯಂ ಸೀವೀಡ್ ಗ್ರೀನ್ ಬಣ್ಣದಲ್ಲಿ ಬರುತ್ತದೆ. ಜೊತೆಗೆ ಈ ಲಿಮಿಟೆಡ್ ಎಡಿಷನ್ ವೈಟ್ ರೂಫ್, R16 ಚಾರ್ಕೋಲ್ ಗ್ರೇ ಅಲಾಯ್ ವೀಲ್‌ಗಳೊಂದಿಗೆ ಆಕರ್ಷಕ ಡಿಸೈನ್‌ನಲ್ಲಿ ಬರುತ್ತದೆ. ಆಸಕ್ತ ಗ್ರಾಹಕರು ಈ ಹೊಸ ಪಂಚ್ CAMO ಎಡಿಷನ್ ಅನ್ನು ಟಾಟಾ ಮೋಟಾರ್ಸ್ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು.

ಹೊಸ ಕಾರಿನಲ್ಲಿ, ವೈರ್‌ಲೆಸ್ ಚಾರ್ಜರ್, ರಿಯರ್ ಎಸಿ ವೆಂಟ್‌ಗಳು, 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ನೀಡಲಾಗಿದೆ. ಕಂಫರ್ಟ್-ಟೆಕ್ ವೈಶಿಷ್ಟ್ಯಗಳ ಸೇರ್ಪಡೆಯು ಟಾಟಾ ಪಂಚ್ ಕ್ಯಾಮೊದಲ್ಲಿ ಪ್ರೀಮಿಯಂ ಮತ್ತು ಚಾಲನಾ ಅನುಭವವನ್ನು ಮತ್ತಷ್ಟು ಹೆಚ್ಚಿಸಿದೆ. ಹಾಗೆಯೇ ವೇಗದ ಸಿ-ಟೈಪ್ ಯುಎಸ್‌ಬಿ ಚಾರ್ಜರ್ ಮತ್ತು ಆರ್ಮ್‌ರೆಸ್ಟ್‌ನೊಂದಿಗೆ ಗ್ರ್ಯಾಂಡ್ ಕನ್ಸೋಲ್ ನೀಡಲಾಗಿದೆ.
ಟಾಟಾ ಪಂಚ್ ಅಕ್ಟೋಬರ್ 2021 ರಲ್ಲಿ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ತನ್ನ ಅದ್ಭುತ ವಿನ್ಯಾಸ, ಬಹುಮುಖ ಮತ್ತು ಆಕರ್ಷಕ ಪರ್ಫಾಮೆನ್ಸ್‌ನಿಂದ ಹೆಚ್ಚು ಮೆಚ್ಚುಗೆಯನ್ನು ಪಡೆದಿದೆ. ಸಣ್ಣ ಎಸ್‌ಯುವಿಯಾದರೂ ವಿಶಾಲವಾದ ಒಳಾಂಗಣ ಮತ್ತು ಸಂಪೂರ್ಣ ಸುರಕ್ಷತೆಯೊಂದಿಗೆ SUV ಗುಣಲಕ್ಷಣಗಳನ್ನು ಕಾಂಪ್ಯಾಕ್ಟ್ ವಿಭಾಗದಲ್ಲಿ ಸಮಗ್ರ ಪ್ಯಾಕೇಜ್ ಅನ್ನು ನೀಡುವ ಮೂಲಕ ಸಣ್ಣ ಫ್ಯಾಮಿಲಿಗಳ ಫೇವರೆಟ್ ಕಾರಾಗಿದೆ.
ಬೆಳೆಯುತ್ತಿರುವ ಜನಪ್ರಿಯತೆ ಟಾಟಾ ಪಂಚ್ ಅನ್ನು FY25 ರಲ್ಲಿ ಎಲ್ಲಾ ವಿಭಾಗಗಳಲ್ಲಿ ಅತಿ ಹೆಚ್ಚು ಮಾರಾಟವಾಗುವ ವಾಹನವನ್ನಾಗಿ ಮಾಡಿದೆ. ಕೇವಲ 10 ತಿಂಗಳಲ್ಲಿ 1 ಲಕ್ಷ ಟಾಟಾ ಪಂಚ್ ಕಾರುಗಳ ಮಾರಾಟ ಹಾಗೂ ಕೇವಲ 34 ತಿಂಗಳಲ್ಲಿ 4 ಲಕ್ಷ ಮಾರಾಟದ ಗಡಿ ದಾಟಿದೆ. ಇಂದಿಗೂ ಬೇಡಿಕೆ ಕಡಿಮೆಯಾಗದೇ ಉತ್ತಮ ಮಾರಾಟದೊಂದಿಗೆ ಮುನ್ನುಗ್ಗುತ್ತಿದೆ. ಈ ಬೇಡಿಕೆಯ ಮೇರೆಗೆ, ಪಂಚ್‌ನ ಸೀಮಿತ CAMO ಕಾರನ್ನು ಪರಿಚಯಿಸಿದ್ದೇವೆ ಎಂದು ಕಂಪನಿ ತಿಳಿಸಿದೆ.
ಭಾರತದ ಸುರಕ್ಷಿತ ಸಬ್-ಕಾಂಪ್ಯಾಕ್ಟ್ SUV ಆಗಿರುವ ಟಾಟಾ ಪಂಚ್, ಪೊಸಿಷನ್ ಮತ್ತು ವೈವಿಧ್ಯಮಯ ಭಾರತೀಯ ಭೂಪ್ರದೇಶಗಳನ್ನು ಸಲೀಸಾಗಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ದೃಢವಾದ ವಿನ್ಯಾಸ, 187 ಎಂಎಂ ಗ್ರೌಂಡ್ ಕ್ಲಿಯರೆನ್ಸ್, ಕಮಾಂಡಿಂಗ್ ಡ್ರೈವಿಂಗ್ ವೀಶೆಷತೆಗಳನ್ನು ಒಳಗೊಂಡಿದೆ. 2021ರ GNCAP ಸುರಕ್ಷತಾ ಮಾನದಂಡಗಳ ಅಡಿಯಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ.
ಟಾಟಾ ಮೋಟಾರ್ಸ್ ತನ್ನ ಪಂಚ್ ಮೈಕ್ರೋ ಎಸ್‌ಯುವಿಯನ್ನು ಪೆಟ್ರೋಲ್, ಡ್ಯುಯಲ್-ಸಿಲಿಂಡರ್ CNG ಮತ್ತು ಎಲೆಕ್ಟ್ರಿಕ್ ಸೇರಿದಂತೆ ಬಹು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಾಗಿಸಿದೆ. ಸದ್ಯ ತನ್ನ ವಿಭಾಗದಲ್ಲಿ ಸಣ್ಣ ಫ್ಯಾಮಿಲಿಗೆ ಉತ್ತಮ ಆಯ್ಕೆಯಾಗಿದ್ದು, ಈಗ ಹೊಸ ಕ್ಯಾಮೊ ಎಡಿಷನ್ ಹಬ್ಬದ ಸೀಸನ್‌ನಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡು ಮುನ್ನುಗ್ಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications