ಟಾಟಾ ಪಂಚ್‌ ಎಲೆಕ್ಟ್ರಿಕ್‌ ಕೊಳ್ಳುತ್ತಿದ್ದೀರಾ?: ಡೌನ್‌ಪೇಮೆಂಟ್‌, EMI, ಲೋನ್‌ ಕುರಿತಾದ ಸಂಪೂರ್ಣ ಮಾಹಿತಿ!

ನಮಗೆ ಟಾಟಾ ಪಂಚ್‌ ಕಾರಿನ ಬಗ್ಗೆ ವಿಶೇಷವಾದ ಪರಿಚಯ ಬೇಕಾಗಿಲ್ಲ ಎಂದೇ ಹೇಳಬಹುದು. ಈಗಾಗಲೇ ಐಸಿಇ ಮತ್ತು ಎಲೆಕ್ಟ್ರಿಕ್‌ ರೂಪಾಂತರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿದೆ. ಇಂದಿನ ಈ ಲೇಖನದಲ್ಲಿಪಂಚ್‌ ಎಲೆಕ್ಟ್ರಿಕ್‌ನ ಬೆಲೆ ಎಷ್ಟು, ಈ ಕಾರಿನ ಇಎಂಐ, ಡೌನ್‌ ಪೇಮೆಂಟ್‌ ಮತ್ತು ಇನ್ನಿತರ ಲೋನ್‌ ವಿಚಾರವಾಗಿ ನೋಡೋಣ ಬನ್ನಿ.

ಟಾಟಾ ಪಂಚ್‌ ಎಲೆಕ್ಟ್ರಿಕ್ (TATA Punch Electric) ಕಾರಿನ ಬೆಲೆಯನ್ನು ನೋಡುವುದಾದರೆ ಈ ಕಾರಿನ ಎಕ್ಸ್‌ ಶೋ ರೂಮ್‌ ಬೆಲೆ ಸುಮಾರು 10,99,000 ರೂಗಳು. ಇದಕ್ಕೆ ಆರ್‌ಟಿಒ ಟ್ಯಾಕ್ಸ್‌, ಮತ್ತು ಇನ್ಸ್ಯುರೆನ್ಸ್ ಸೇರಿದರೆ ಬೆಂಗಳೂರಿನಲ್ಲಿ ಈ ಟಾಟಾ ಪಂಚ್‌ ಎಲೆಕ್ಟ್ರಿಕ್‌ನ ಆರಂಭಿಕ ಬೆಲೆ ಸುಮಾರು 11,72,933 ರೂಗಳು. ಇನ್ನು ಆನ್‌ ರೋಡ್‌ ಬೆಲೆ ಆಯಾ ರಾಜ್ಯಕ್ಕೆ ಅನುಗುಣವಾಗಿ ಏರುಪೇರಾಗಿರುತ್ತದೆ.

TATA Punch Electric Buyers Guide Downpayment EMI And Other Details

ಇನ್ನು ಈ ಕಾರಿನ ಡೌನ್‌ಪೇಮೆಂಟ್‌ ಮತ್ತು ಇಎಂಐ ಕುರಿತಾಗಿ ನೋಡುವುದಾದರೆ, ಕನಿಷ್ಟವೆಂದರೂ ನಿವು ಸುಮಾರು 1,17,000 ರೂಗಳನ್ನು ಡೌನ್‌ಪೇಮೆಂಟ್‌ ಮಾಡಬೇಕಾಗುತ್ತದೆ. ಹೀಗಾದಾಗ ನಿಮ್ಮ ಒಟ್ಟು ಲೋನ್‌ ಹಣ ಸುಮಾರು 10,55,933. ಇದಕ್ಕೆ ನೀವು ಐದು ವರ್ಷ ಲೋನ್‌ ಮಾಡಿದರೆ 9% ಬಡ್ಡಿಯಲ್ಲಿ ಪ್ರತೀ ತಿಂಗಳು ಸುಮಾರು 22332 ರೂಗಳನ್ನು ಕಟ್ಟಬೇಕಾಗುತ್ತದೆ. ಒಟ್ಟು ಹಣಕ್ಕೆ ನೀವು 2,83,987 ರೂಗಳನ್ನು ನೀವು ಬಡ್ಡಿಯಾಗಿ ನೀಡಬೇಕಾಗುತ್ತದೆ.

ಟಾಟಾ ಪಂಚ್‌ ಎಲೆಕ್ಟ್ರಿಕ್‌, ಸದ್ಯಕ್ಕೆ ಅತೀ ಹೆಚ್ಚು ಪ್ರಾಕ್ಟಿಕಲ್‌ ಆಗಿರುವ ಕಾರೆಂದರೆ ತಪ್ಪಾಗಲಾರದು. ಟಾಟಾ ಮೋಟಾರ್ಸ್‌ ಈ ಕಾರಿಗೆ ಎರಡು ವೇರಿಯಂಟ್‌ ಅನ್ನು ನೀಡಿದ್ದಾರೆ. ಟಾಟಾ ಪಂಚ್‌ ಇವಿ ಮತ್ತು ಇನ್ನೊಂದು ಟಾಟಾ ಪಂಚ್‌ ಇವಿ ಲಾಂಗ್‌ ರೇಂಜ್‌. ಟಾಟಾ ಪಂಚ್‌ ಇವಿ ವೇರಿಯಂಟ್‌ನಲ್ಲಿ 25kWh ಬ್ಯಾಟರಿ ಪ್ಯಾಕ್‌ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 315km ಕಿಮೀ ರೇಂಜ್‌ ನೀಡುವುದರ ಜೊತೆಗೆ 80.46bhp/ 114Nm ಪವರ್‌ ಅನ್ನು ಸಹ ಉತ್ಪಾದಿಸುತ್ತದೆ.

TATA Punch Electric Buyers Guide Downpayment EMI And Other Details

ಟಾಟಾ ಪಂಚ್‌ ಇವಿಯ ಮತ್ತೊಂದು ವೇರಿಯಂಟ್ ಆದ ಲಾಂಗ್‌ ರೇಂಜ್‌ ನಲ್ಲಿ 35kWh ಬ್ಯಾಟರಿ ಪ್ಯಾಕ್‌ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 421km ಕಿಮೀ ರೇಂಜ್‌ ನೀಡುವುದರ ಜೊತೆಗೆ120.7bhp ಮತ್ತು 190Nm ಪವರ್‌ ಅನ್ನು ಸಹ ಉತ್ಪಾದಿಸುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.

ಇನ್ನು ಟಾಟಾ ಪಂಚ್ ಇವಿಯ ಎಲ್ಲಾ ವೇರಿಯಂಟ್‌ಗಳಲ್ಲಿಯೂ 3.3kWh ಚಾರ್ಜರ್‌ ಜೊತೆಗೆ ಬರುತ್ತಿದ್ದು ಇದರ ಸಹಾಯದಿಂದ ಈ ಕಾರು ಸಂಪೂರ್ಣ ಚಾರ್ಜ್‌ ಆಗಲು ಬೇಸ್‌ ವೇರಿಯಂಟ್‌ 9.4 ಗಂಟೆಗಳು ಮತ್ತು ಲಾಂಗ್‌ ರೇಂಜ್‌ ವೇರಿಯಂಟ್ 13.5 ಗಂಟೆಗಳ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ಇದರ ಜೊತೆಗೆ 7.2kWh ಫಾಸ್ಟ್‌ ಚಾರ್ಜಿಂಗ್‌ ಆಯ್ಕೆಯೂ ಸಹ ಲಭ್ಯವಿದ್ದು ಇದರ ಸಹಾಯದಿಂದ ಬೇಸ್‌ ವೇರಿಯಂಟ್‌ 3.6 ಗಂಟೆಗಳು ಮತ್ತು ಲಾಂಗ್‌ ರೇಂಜ್‌ ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

TATA Punch Electric Buyers Guide Downpayment EMI And Other Details

ಟಾಟಾ ಪಂಚ್‌ ಇವಿಯ ಆಕ್ಸಿಲರೇಷನ್‌‌ ನೋಡುವುದಾದರೆ, 0-100km/h ತಲುಪಲು ಇದು ಕೇವಲ 9.5 ಸೆಕೆಂಡ್‌ ಕಾಲಾವಕಾಶವನ್ನು ತೆಗೆದುಕೊಳ್ಳುತ್ತಿದ್ದು, ಇದರ ಟಾಪ್‌ ಸ್ಪೀಡ್‌ 140km/h. ಇನ್ನು ಈ ಕಾರಿನಲ್ಲಿ ಇಕೋ, ಸ್ಪೋರ್ಟ್ಸ್ ಮತ್ತು ಸಿಟಿ ಎಂಬ ಮೂರು ಡ್ರೈವಿಂಗ್‌ ಮೋಡ್‌ಗಳು ಸಹ ದೊರಕುತ್ತದೆ. ಇದರಲ್ಲಿ ರೀಜೆನ್‌ ಬ್ರೇಕಿಂಗ್‌ ವ್ಯವಸ್ಥೆಯೂ ದೊರಕುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 27, 2024, 16:18 [IST]
English summary
Tata punch electric buyers guide downpayment emi and other details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+