TATA Punch EV - ಟಾಟಾ ಪಂಚ್‌ ಎಲೆಕ್ಟ್ರಿಕ್‌: ಕೇವಲ 5 ಗಂಟೆ ಚಾರ್ಜ್‌ಗೆ 421 Km ರೇಂಜ್‌, ಇದು ನಿಜಾನಾ?

ಟಾಟಾ ಮೋಟಾರ್ಸ್‌ ಈಗಾಗಲೇ ಹೊಸ ಎಲೆಕ್ಟ್ರಿಕ್‌ ಮೈಕ್ರೋ ಎಸ್‌ಯುವಿಯಾದ ಟಾಟಾ ಪಂಚ್‌ ಇವಿಯನ್ನು ಲಾಂಚ್‌ ಮಾಡಿ ವಿತರಣೆಯೂ ಆರಂಭಿಸಿರುವುದು ಎಲ್ಲರಿಗೂ ತಿಳಿದಿದೆ. ಹೊಸ ಫೀಚರ್‌ ಮತ್ತು ಹಲವಾರು ವಿಶೇಷತೆಗಳ ಜೊತೆ ಹೊರ ಬಂದಿರುವುದರಿಂದ ಸಾಮಾನ್ಯ ವರ್ಗದ ಜನರಿಗೆ ಇದೊಂದು ಒಳ್ಳೆಯ ಆಯ್ಕೆಯಾಗಬಲ್ಲದು ಎಂಬುದೇ ಹಲವರ ಅಭಿಪ್ರಾಯ.

ಕಳೆದ ಕೆಲವು ದಿನಗಳ ಹಿಂದೆ ನಾವು ಈ ವಾಹನವನ್ನು ಕಂಪ್ಲೀಟ್ ಆಗಿ ರಿವ್ಯೂವ್‌ ಮಾಡಿದ್ದೆವು. ಆ ಅನುಭವದ ಮೇಲೆ ಇಂದಿನ ಈ ಲೇಖನದಲ್ಲಿ ಹೊಸ ಟಾಟಾ ಪಂಚ್‌ ಎಲೆಕ್ಟ್ರಿಕ್‌ನ ಕುರಿತಾದ ಪ್ರಮುಖ ವಿಷಯಗಳ ಬಗ್ಗೆ ಕಣ್ಣಾಡಿಸಲಿದ್ದೇವೆ. ಇದರಲ್ಲಿ ಡಿಸೈನ್‌, ಫೀಚರ್ಸ್‌, ಬ್ಯಾಟರಿ ಕುರಿತಾದ ಸಂಪೂರ್ಣ ಮಾಹಿತಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

TATA Punch Electric, Things You Need To Know

ಟಾಟಾ ಪಂಚ್ ಡಿಸೈನ್‌: ಹೊಸ ಟಾಟಾ ಪಂಚ್‌ ಎಲೆಕ್ಟ್ರಿಕ್‌ನಲ್ಲಿ ಸಂಪೂರ್ಣ ಎಲ್‌ಇಡಿ ಲೈಟಿಂಗ್‌ ಸೆಟ್‌ಅಪ್‌ ಅನ್ನು ಕಾಣಬಹುದಾಗಿದೆ. ಮುಂಭಾಗದಲ್ಲಿನ ಗ್ರಿಲ್‌ ಸಂಪೂರ್ಣ ಮುಚ್ಚಿದ್ದು ಇದರಲ್ಲಿಯೇ 360 ಡಿಗ್ರೀ ಕ್ಯಾಮೆರಾವನ್ನು ಸಹ ಇರಿಸಲಾಗಿದೆ. ಕಾರಿನ ಗ್ರಿಲ್‌ನಲ್ಲಿಯೇ ನಿಮಗೆ ಚಾರ್ಜಿಂಗ್‌ ಸಾಕೆಟ್‌ ಸಹ ದೊರಕಿದ್ದು, ಇದು ಈ ಕಾರಿನ ವಿನ್ಯಾಸಕ್ಕೆ ಮತ್ತಷ್ಟು ಇಂಬು ನೀಡುತ್ತದೆ ಎನ್ನಬಹುದು.

ಟಾಟಾ ಪಂಚ್‌ ಇವಿ ಇಂಟೀರಿಯರ್‌: ಈ ಟಾಟಾ ಪಂಚ್‌ ಇವಿ ಇಂಟೀರಿಯರ್‌ ಗಮನಿಸಿದರೆ ಎಲ್ಲಾ ಸೀಟ್‌ಗಳಲ್ಲಿಯೂ ಅಂಡರ್‌ ಥೈ ಸಪೋರ್ಟ್‌ ಮತ್ತು ಲೆಗ್‌ರೂಮ್‌, ಹೆಡ್‌ ರೂಮ್‌ ಸಾಕಷ್ಟಿದೆ. ಹಿಂಭಾಗದಲ್ಲಿ ಇಬ್ಬರು ಕುಳಿತುಕೊಳ್ಳುವುದು ಸೂಕ್ತ. ಮುಂಭಾಗಕ್ಕೆ ಬಂದರೆ ಈ ಕಾರಿನಲ್ಲಿ ಡ್ಯುಯಲ್‌ ಟೋನ್‌ ಡ್ಯಾಶ್‌ಬೋರ್ಡ್ ಸಿಗುತ್ತದೆ. ಮಧ್ಯಭಾಗದಲ್ಲಿ 10.25 ಇಂಚ್‌ನ ಒಂದು ಇನ್ಫೋಟೈನ್‌ಮೆಂಟ್‌ ಸಿಸ್ಟಂ ಸಿಗುತ್ತಿದ್ದು, ಇದರಲ್ಲಿ ಹದಿನೇಳಕ್ಕೂ ಅಧಿಕ ಆ್ಯಪ್‌ಗಳು ಲಭ್ಯವಿದೆ.

TATA Punch Electric, Things You Need To Know

ಈ ಕಾರಿನ ಒಳಭಾಗದ ಮತ್ತೊಂದು ಹೈಲೈಟ್ ಎಂದರೆ ಇದರ ಸನ್‌ರೂಫ್‌. ಜೊತೆಗೆ ಮುಂಭಾಗದ ಸೀಟ್‌ಗಳಲ್ಲಿ ವೆಂಟಿಲೇಷನ್‌ ವ್ಯವಸ್ಥೆಯನ್ನು ನೀಡಿದ್ದು, ದೊಡ್ಡ ಬಜೆಟ್‌ನ ಕಾರುಗಳ ಫೀಚರ್‌ ಇದೀಗ ಟಾಟಾ ಪಂಚ್‌ನಲ್ಲೂ ಲಭ್ಯವಾಗಿದೆ. ಆದರೆ ಸೀಟ್‌ಗಳಲ್ಲಿ ಯಾವುದೇ ಪವರ್‌ ಅಡ್ಜಸ್ಟ್‌ಮೆಂಟ್‌ ಲಭ್ಯವಾಗಿಲ್ಲ ಎಂಬುವುದನ್ನೂ ಸಹ ನಾವು ಗಮನಿಸಬೇಕಿದೆ.

ಟಾಟಾ ಪಂಚ್‌ ಇವಿ ಬ್ಯಾಟರಿ ಮತ್ತು ಪವರ್‌‌: ಟಾಟಾ‌ ಈ ಹೊಸ ಪಂಚ್‌ ಇವಿ ಕಾರಿಗೆ ಎರಡು ವೇರಿಯಂಟ್‌ ಅನ್ನು ನೀಡಿದ್ದಾರೆ. ಒಂದು ಟಾಟಾ ಪಂಚ್‌ ಇವಿ ಮತ್ತು ಇನ್ನೊಂದು ಟಾಟಾ ಪಂಚ್‌ ಇವಿ ಲಾಂಗ್‌ ರೇಂಜ್‌. ಟಾಟಾ ಪಂಚ್‌ ಇವಿ ವೇರಿಯಂಟ್‌ನಲ್ಲಿ 25kWh ಬ್ಯಾಟರಿ ಪ್ಯಾಕ್‌ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 315km ಕಿಮೀ ರೇಂಜ್‌ ನೀಡುವುದರ ಜೊತೆಗೆ 80.46bhp/ 114Nm ಪವರ್‌ ಅನ್ನು ಸಹ ಉತ್ಪಾದಿಸುತ್ತದೆ.

ಟಾಟಾ ಪಂಚ್‌ ಇವಿಯ ಮತ್ತೊಂದು ವೇರಿಯಂಟ್ ಆದ ಲಾಂಗ್‌ ರೇಂಜ್‌ ನಲ್ಲಿ 35kWh ಬ್ಯಾಟರಿ ಪ್ಯಾಕ್‌ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 421km ಕಿಮೀ ರೇಂಜ್‌ ನೀಡುವುದರ ಜೊತೆಗೆ120.7bhp ಮತ್ತು 190Nm ಪವರ್‌ ಅನ್ನು ಸಹ ಉತ್ಪಾದಿಸುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.

ಸೇಫ್ಟಿ ಮತ್ತು ಫೀಚರ್‌ಗಳು: ಪಂಚ್‌ ಎಲೆಕ್ಟ್ರಿಕ್‌ ನಲ್ಲಿ ಹಲವಾರು ಸೇಫ್ಟಿ ಫೀಚರ್‌ಗಳಿವೆ. ಈ ಕಾರಿಲ್ಲಿ ಆರು ಏರ್‌ ಬ್ಯಾಗ್‌ಗಳು ಸಹ ಸಿಗುತ್ತದೆ. ಇದರ ಜೊತೆಗೆ ಎಬಿಎಸ್‌ ಮತ್ತು ಇಬಿಡಿ, ಡಿಸ್ಕ್‌ ಬ್ರೇಕ್‌ಗಳು, ಹಿಲ್‌ ಡಿಸೆಂಟ್‌ ಕಂಟ್ರೋಲ್‌, ಹಿಲ್‌ ಹೋಲ್ಡ್‌ ಕಂಟ್ರೋಲ್‌ ಮತ್ತು ಬ್ಲೈಂಡ್‌ ಸ್ಪಾಟ್‌ ವ್ಯೂವ್‌ ಮಿರರ್‌ಗಳು ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 25, 2024, 10:48 [IST]
English summary
Tata punch electric things you need to know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+