ಟಾಟಾ ಪಂಚ್ ಇವಿಯಲ್ಲಿ ಇಷ್ಟೊಂದು ಫೀಚರ್‌ಗಳಾ?: 6 ಏರ್‌ಬ್ಯಾಗ್‌ಗೆನೇ ಕೊಡೋ ಹಣ ವಸೂಲ್, ಇಷ್ಟು ಮಾತ್ರವಲ್ಲ!
ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆಯನ್ನಿಟ್ಟಿರುವ ಭಾರತದ ಹೆಮ್ಮೆಯ ಕಾರು ನಿರ್ಮಾಣ ಸಂಸ್ಥೆಯಾದ ಟಾಟಾ ಮೋಟಾರ್ಸ್ ನಿನ್ನೆಯಷ್ಟೇ ಟಾಟಾ ಪಂಚ್ ಎಲೆಕ್ಟ್ರಿಕ್ ನ ಮಾಹಿತಿಗಳನ್ನು ಔದ್ಯೋಗಿಕವಾಗಿ ಹೊರ ಹಾಕಿತ್ತು. ಭರಪೂರ ಫೀಚರ್ಸ್‌ಗಳಿಂದ ಕೂಡಿರುವ ಈ ಕಾರು, ಸೆಗ್ಮೆಂಟ್ ಫಸ್ಟ್ ಫೀಚರ್‌ಗಳನ್ನು ಸಹ ಹೊಂದಿದೆ.
ಟಾಟಾ ಮೋಟಾರ್ಸ್ ನಿನ್ನೆ ಔದ್ಯೋಗಿಕವಾಗಿ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಕುರಿತಾದ ಮಾಹಿತಿಗಳನ್ನು ಹೊರ ಬಿಟ್ಟರೂ, ಇದರ ಬಹುಮುಖ್ಯ ವಿಷಯವಾದ ಬ್ಯಾಟರಿ ಮತ್ತು ಚಾರ್ಜಿಂಗ್ ಕುರಿತಾಗಿ ಯಾವುದೇ ಮಾಹಿತಿಗಳನ್ನು ಹೊರ ಹಾಕಿಲ್ಲ ಎಂಬುದು ವಾಸ್ತವ. ಬಹುದಿನದಿಂದ ಜನರು ಈ ಕಾರಿನ ಬ್ಯಾಟರಿ ಮತ್ತು ಇನ್ನಿತರ ವಿಷಯಗಳಿಗಾಗಿ ಎದುರು ನೋಡುತ್ತಿದ್ದರೂ, ಟಾಟಾ ಈ ವಿಷಯಗಳನ್ನು ಮುಂದಿನ ದಿನಗಳಲ್ಲಿ ಹೊರ ಹಾಕುವ ನಿರೀಕ್ಷೆಯಿದೆ.

ಇನ್ನು ಇಂದಿನ ಈ ಲೇಖನದಲ್ಲಿ ಈ ವರ್ಷ ಭಾರತೀಯ ಮಾಂರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ ಎಂದು ನಿರೀಕ್ಷಿಸಲಾಗಿರುವ ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಟಾಪ್ ೫ ಫೀಚರ್ ಕುರಿತಾಗಿ ನೋಡೋಣ. ಈ ಲೇಖನದಲ್ಲಿ ಟಾಟಾ ಇನ್ನೂ ಈ ಕಾರಿನ ಬ್ಯಾಟರಿ ಬಗ್ಗೆ ತಿಳಿಸಿರದೇ ಇರುವ ಕಾರಣ ಆ ಕುರಿತಾಗಿ ಯಾವುದೇ ಮಾಹಿತಿ ಇರುವುದಿಲ್ಲ.
ವೆಂಟಿಲೇಟೆಡ್ ಸೀಟ್: ಹೌದು, ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಟಾಪ್ 5 ಫೀಚರ್‌ನಲ್ಲಿ ನಮ್ಮ ಮೊದಲ ಆಯ್ಕೆ ಇದರ ಮುಂಭಾಗದ ಸೀಟ್‌ನಲ್ಲಿ ಇರುವ ವೆಂಟಿಲೇಟೆಡ್ ಸೀಟ್‌ಗಳು. ಇದು ಸೆಗ್ಮೆಂಟ್ ಫಸ್ಟ್ ಫೀಚರ್ ಆಗಿದ್ದು ತುಂಬಾ ಹೆಚ್ಚಿನ ಬೆಲೆಯಿರುವ ಕಾರುಗಳಲ್ಲಿ ಮಾತ್ರ ಈ ಫೀಚರ್ ಕಾಣಸಿಗುತ್ತಿತ್ತು. ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನಲ್ಲಿ ವೆಂಟಿಲೇಟೆಡ್ ಸೀಟ್ ಸೇರಿರುವುದರಿಂದ ವಾಹನ ಮಾಲೀಕರ ಪ್ರಯಾಣ ಹೆಚ್ಚು ಆರಾಮದಾಯಕವಾಗಿರುತ್ತದೆ.

ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಸ್ಮಾರ್ಟ್ ಡಿಆರ್‌ಎಲ್: ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಟಾಪ್ 5 ಫೀಚರ್‌ನಲ್ಲಿ ನಮ್ಮ ಎರಡನೇ ಆಯ್ಕೆ ಈ ಕಾರಿನಲ್ಲಿ ಸಿಗುತ್ತಿರುವ, ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಸ್ಮಾರ್ಟ್ ಡಿಆರ್‌ಎಲ್. ಇದರಲ್ಲಿ ವೆಲ್ಕಂ ಮತ್ತು ಗುಡ್‌ಬೈ ಫೀಚರ್‌ಗಳಿದ್ದು, ಇದು ಈ ಕಾರಿಗೆ ಇನ್ನೂ ಹೆಚ್ಚಿನ ಕಳೆ ನೀಡುತ್ತದೆ.
360 ಡಿಗ್ರೀ ಕ್ಯಾಮೆರಾ: ಇತ್ತೀಚಿನ ದಿನಗಳಲ್ಲಿ ಇರಬೇಕಾದ ಬಹು ಮುಖ್ಯವಾದ ಫೀಚರ್ ಈ 360 ಡಿಗ್ರೀ ಕ್ಯಾಮೆರಾ. ಟಾಟಾ ಪಂಚ್ ಎಲೆಕ್ಟ್ರಿಕ್‌ನಲ್ಲಿ ಈ ಫೀಚರ್ ಬರುತ್ತಿದ್ದು, ಇದು ಕಾರಿನ ಸುರಕ್ಷತೆಯ ವಿಚಾರದಲ್ಲಿ ಹೆಚ್ಚಿನ ಮಹತ್ವದ್ದಾಗಿದೆ. ಈ ಫೀಚರ್ ಸಹಾಯದಿಂದ ಡ್ರೈವರ್ ಆರಾಮದಾಕವಾಗಿ ಕಾರನ್ನು ಚಲಾಯಿಸಿ ಗುರಿ ತಲುಪಬಹುದಾಗಿದೆ.
ಡಿಸಿ ಫಾಸ್ಟ್ ಚಾರ್ಜಿಂಗ್: ಹೌದು, ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನಲ್ಲಿ ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಲಭ್ಯವಾಗಲಿದೆ ಎಂದು ಟಾಟಾ ತಿಳಿಸಿದೆ. ಇದು ಈ ಕಾರನ್ನು ಕೊಳ್ಳುವವರ ಆಸೆಗೆ ಮತ್ತಷ್ಟು ಇಂಬು ನೀಡಲಿದೆ. ಸದ್ಯಕ್ಕೆ ಟಾಟಾ ಕೇವಲ ಈ ಡಿಸಿ ಚಾರ್ಜಿಂಗ್ ವ್ಯವಸ್ಥೆ ಇದೆ ಎಂದು ಮಾತ್ರ ತಿಳಿಸಿದ್ದು ಈ ಕುರಿತಾದ ಹೆಚ್ಚಿನ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಹೊರಬಿಡಲಿದೆ.
6 ಏರ್‌ಬ್ಯಾಗ್‌ಗಳು: ಟಾಟಾ ಮೋಟಾರ್ಸ್ ಯಾವಾಗಲೂ ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾರುಗಳನ್ನು ನಿರ್ಮಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅದೇ ರೀತಿ ಈ ಕಾರಿನಲ್ಲಿ ನಿಮಗೆ ಆರು ಏರ್‌ಬ್ಯಾಗ್‌ಗಳನ್ನು ಟಾಟಾ ಸ್ಟಾಂಡರ್ಡ್ ಆಗಿಯೇ ನೀಡುತ್ತಿದ್ದು ಇದು ಗ್ರಾಹಕರ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದ ಟಾಟಾ ಪಂಚ್ ಎಲೆಕ್ಟ್ರಿಕ್ ಮೈಕ್ರೋ ಎಸ್‌ಯುವಿಯನ್ನು ಧೈರ್ಯವಾಗಿ ಖರೀದಿ ಮಾಡಬಹುದಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications