TATA Punch ಕೊಳ್ಳಲು 1 ಲಕ್ಷವೂ ಬೇಡ: ಸಂಪೂರ್ಣ ಲೋನ್, EMI, ಡೌನ್‌ಪೇಮೆಂಟ್ ಮಾಹಿತಿ ನಿಮಗಾಗಿ!
ಭಾರತೀಯರ ಮಧ್ಯಮ ವರ್ಗದವರ ನೆಚ್ಚಿನ ಕಾರು ಬ್ರಾಂಡ್‌ಗಳ ಪಟ್ಟಿಯಲ್ಲಿ ಟಾಟಾ ಮೋಟಾರ್ಸ್ ಯಾವತ್ತೂ ಇದ್ದೇ ಇದೆ. ಟಾಟಾ ಕಾರುಗಳಲ್ಲಿ ಹೆಚ್ಚು ಪ್ರಸಿದ್ದವಾಗಿರುವುದು ಟಾಟಾ ಪಂಚ್ ಎಂದರೆ ತಪ್ಪಾಗಲಾರದು. ಇಂದು ನಾವು ಈ ಕಾರಿನ ಬಗೆಗಿನ ಡೌನ್‌ಪೇಮೆಂಟ್, ಇಎಂಐ ಮತ್ತು ಇತರ ವಿಚಾರಗಳ ಕುರಿತಾಗಿ ನೋಡಲಿದ್ದೇವೆ.
ಮೊದಲಿಗೆ ನಾವು ಈ ಕಾರಿನ (TATA Punch) ಎಕ್ಸ್ ಶೋ ರೂಮ್ ಬೆಲೆ ನೋಡುವುದಾದರೆ 6,12,900 ರೂಗಳು. ಇದಕ್ಕೆ ಆರ್‌ಟಿಒ ಮತ್ತು ಇನ್ಸ್ಟುರೆನ್ಸ್ ಎಲ್ಲಾ ಸೇರಿ ಬೇಸ್ ವೇರಿಯಂಟ್‌ನ ಆನ್ ರೋಡ್ ಬೆಲೆ ಬೆಂಗಳೂರಿನಲ್ಲಿ ಸುಮಾರು 7,48,824 ರೂಗಳಿಗೆ ಸಿಗುತ್ತದೆ.

ಇನ್ನು ಈ ಕಾರಿನ ಇಎಂಐಗಳ ಕುರಿತಾಗಿ ನೋಡುವುದಾದರೆ ಕನಿಷ್ಟವೆಂದರೂ ಸುಮಾರು 75,000 ರೂ ಡೌನ್ ಪೇಮೆಂಟ್ ಪಾವಸಿಸಬೇಕು. 9.8 ಶೇಖಡಾ ಬಡ್ಡಿದರದಲ್ಲಿ 5 ವರ್ಷಕ್ಕೆ ನೀವು ಈ ಕಾರಿನ ಲೋನ್ ಸಿದ್ದಪಡಿಸಿದರೆ ಪ್ರತೀ ತಿಂಗಳು ನೀವು ಸುಮಾರು 14,251 ರೂಗಳನ್ನು ಪಾವತಿಸಬೇಕಾಗುತ್ತದೆ.
ಈ ಕಾರಿನ ಎಂಜಿನ್ ಮತ್ತು ಇತರ ವಿವರಗಳನ್ನು ನೋಡುವುದಾದರೆ, ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್ ಎಸ್‌ಯುವಿ, ರೂ.6 ಲಕ್ಷದಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಸಿಗುವ ಈ ಕಾರು, ರೂಪಾಂತರಗಳಿಗೆ ಅನುಗುಣವಾಗಿ 18.8 ರಿಂದ 26.99 ಕಿ.ಮೀ ಮೈಲೇಜ್ ನೀಡುತ್ತದೆ. 7 - ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

2025ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿರುವ ಟಾಟಾ ಪಂಚ್ ಫೇಸ್‌ಲಿಫ್ಟ್, ಮೈಕ್ರೋ ಎಸ್‌ಯುವಿಯಾಗಿರುವುದರಿಂದ ಮುಂಭಾಗದ ಬಂಪರ್, ಗ್ರಿಲ್‌ನಲ್ಲಿ ಕೆಲವೊಂದು ಬದಲಾವಣೆಗಳು, ಹೊಸದಾದ ಹೆಡ್‌ಲ್ಯಾಂಪ್, ನವೀನ ಬಾನೆಟ್‌ನ್ನು ಪಡೆದಿರುವ ನೀರಿಕ್ಷೆಯಿದೆ. ಜೊತೆಗೆ ಹಿಂಭಾಗದ ವಿನ್ಯಾಸವು ಉತ್ತಮವಾಗಿರಲಿದೆ. ಇದರಿಂದ ಸುಲಭವಾಗಿ ಪಂಚ್ ಪೆಟ್ರೋಲ್ ಕಾರು ಮತ್ತು ಪಂಚ್ ಎಲೆಕ್ಟ್ರಿಕ್ ಕಾರುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಬಹುದು.
ಮುಂಬರಲಿರುವ ನೂತನ ಟಾಟಾ ಪಂಚ್ ಫೇಸ್‌ಲಿಫ್ಟ್ ಪವರ್ ಟ್ರೈನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆಯನ್ನು ಪಡೆಯುವುದಿರುವುದಿಲ್ಲ ಎಂದು ಹೇಳಲಾಗಿದೆ. ಈಗಿರುವಂತೆ 86 hp ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುವ 1.2 - ಲೀಟರ್ ಪೆಟ್ರೋಲ್ ಎಂಜಿನ್, 5 - ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಹೊಂದಿರಲಿದೆ. ಜೊತೆಗೆ ಸಿಎನ್‌ಜಿ ಕಿಟ್ ಆಯ್ಕೆಯನ್ನು ಪಡೆದಿರಬಹುದು.

ಟಾಟಾ ಪಂಚ್ ಇವಿ (Tata Punch EV) ಬಗ್ಗೆ ಹೇಳುವುದಾದರೆ, ಇದು ರೂ.10.99 ಲಕ್ಷ ಆರಂಭಿಕ (ಎಕ್ಸ್ ಶೋರೂಂ) ಬೆಲೆಯನ್ನು ಪಡೆದಿದೆ. 25 kWh ಮತ್ತು 35 kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, ಸಂಪೂರ್ಣ ಚಾರ್ಜ್ ನಲ್ಲಿ ಕ್ರಮವಾಗಿ 315 ರಿಂದ 421 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ.
ಈ ಟಾಟಾ ಪಂಚ್ ಇವಿ, ದೊಡ್ಡದಾದ 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಏರ್ ಪ್ಯೂರಿಫೈಯರ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಸನ್‌ರೂಫ್ ಒಳಗೊಂಡಿದೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್, 360 - ಡಿಗ್ರಿ ಕ್ಯಾಮೆರಾ, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಇವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications