ಟಾಟಾ ಪಂಚ್ ಇವಿ ರಿವ್ಯೂ ವಿಡಿಯೋ ನಿಮಗಾಗಿ: ಕೈಗೆಟಕುವ ಬೆಲೆಯಲ್ಲಿ ಟಾಟಾದ ಬ್ರಹ್ಮಾಸ್ತ್ರ!
ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ಭಾರತದಲ್ಲಿ ಅವರ ಮತ್ತೊಂದು ಹೊಸ ಎಲೆಕ್ಟ್ರಿಕ್ ವಾಹನವಾದ ಟಾಟಾ ಪಂಚ್ ಎಲೆಕ್ಟ್ರಿಕ್ ಅನ್ನು ಬಿಡುಗಡೆ ಮಾಡಿತ್ತು. ನಾವಿಂದು ಅನ್ನು ಸಂಪೂರ್ಣವಾಗಿ ರಿವ್ಯೂವ್ ಮಾಡಿದ್ದು ಇದಕ್ಕೆ ಸಂಭಂಧಿಸಿದ ವಿಡಿಯೋವನ್ನು ಕನ್ನಡ ಡ್ರೈವ್‌ಸ್ಪಾರ್ಕ್ ಯ್ಯೂಟ್ಯೂಬ್, ಫೇಸ್‌ಬುಕ್‌ಗಳಲ್ಲಿ ಪೋಸ್ಟ್ ಮಾಡಿದ್ದೇವೆ.
ಹೊಸ ಒಂದು ಪ್ಲಾಟ್‌ಫಾರ್ಮ್‌ನಲ್ಲಿ ಈ ಕಾರನ್ನು ಬಿಡುಗಡೆ ಮಾಡಿದ್ದು, ಇದರ ಐಸಿಇ ಎಂಜಿನ್ ಟಾಟಾ ಪಂಚ್‌ಗಿಂತ ಈ ಕಾರಿನ ಫೀಚರ್‌ಗಳು ಸಂಪೂರ್ಣವಾಗಿ ವ್ಯತ್ಯಸ್ಥವಾಗಿದೆ. ನೋಟದಲ್ಲಿ ಸಾಮಾನ್ಯ ಪಂಚ್ ಅನ್ನೇ ಹೋಲಿದರೂ ಫೀಚರ್ ಮತ್ತು ಇತರ ವಿಚಾರಗಳಲ್ಲಿ ಈ ಕಾರು ಸಾಮಾನ್ಯ ಪಂಚ್ ಅನ್ನು ಹಿಂದಿಕ್ಕುತ್ತಿದೆ ಎಂದೇ ಹೇಳಬಹುದು.
ಮೊದಲ ನೋಟದಲ್ಲಿ ಟಾಟಾ ಪಂಚ್ ಎಲೆಕ್ಟ್ರಿಕ್ (TATA Punch EV) ಅನ್ನು ನೋಡಿದರೆ ಥೇಟ್ ಟಾಟಾ ಪಂಚ್ ಐಸಿಇ ಎಂಜಿನ್ ಕಾರಿನಂತೆಯೇ ಕಾಣುತ್ತದೆ. ಹವದು, ಇದರ ಗಾತ್ರ ಮತ್ತು ಇತರ ಬಹುತೇಕ ಡಿಸೈನ್ ವಿನ್ಯಾಸಗಳು ಆ ಕಾರಿನಂತೆಯೇ ಇದ್ದು ಪೆಟ್ರೋಲ್ ಬದಲಾಗಿ ಇದು ಎಲೆಕ್ಟ್ರಿಕ್‌ನಲ್ಲಿ ಲಭ್ಯವಿರುವುದೇ ಪ್ರಮುಖವಾದ ಬದಲಾವಣೆ. ಆದರೆ ಇದರಲ್ಲಿ ಆ ಕಾರಿಗಿಂತಲೂ ಹಲವು ಫೀಚರ್‌ಗಳನ್ನು ಸೇರಿಸಲಾಗಿದ್ದು ಇದು ಜನರ ಮನಸ್ಸನ್ನು ಗೆಲ್ಲುವುದರಲ್ಲಿ ಎರಡು ಮಾತಿಲ್ಲ.
ಹೊಸ ಟಾಟಾ ನೆಕ್ಸಾನ್‌ನಂತೆ ಈ ಕಾರಿನಲ್ಲೂ ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು ಇದ್ದು, ಈ ಕಾರಿನ ಡಿಸೈನ್ ಅನ್ನು ಮತ್ತಷ್ಟು ಪ್ರೀಮಿಯಂ ಗೊಳಿಸುತ್ತಿದೆ. ಇನ್ನು ಈ ಡಿಆರ್‌ಎಲ್‌ನ ಮಧ್ಯ ಕೆಳಭಾಗದಲ್ಲಿಯೇ ಟಾಟಾ ಲೋಗೋ ಸಹ ದೊರಕುತ್ತದೆ. ಇನ್ನು ಈ ಲೋಗೋ ಕಪ್ಪು ಮತ್ತು ಬಿಳುಪು ಫಿನಿಶಿಂಗ್‌ನಲ್ಲಿ ನೀಡಿದ್ದಾರೆ. ಬಂಪರ್ ಸಹ ಸಾಧಾರಣ ಪಂಚ್‌ಗಿಂತಲೂ ಕೊಂಚ ವಿಭಿನ್ನವಾಗಿದೆ.

ಕಾರಿನ ಒಳಭಾಗದ ಎಲ್ಲಾ ಸೀಟ್‌ಗಳಲ್ಲಿಯೂ ಅಂಡರ್ ಥೈ ಸಪೋರ್ಟ್ ಮತ್ತು ಲೆಗ್‌ರೂಮ್, ಹೆಡ್ ರೂಮ್ ಸಾಕಷ್ಟಿದೆ. ಹಿಂಭಾಗದಲ್ಲಿ ಇಬ್ಬರು ಕುಳಿತುಕೊಳ್ಳುವುದು ಸೂಕ್ತ. ಮುಂಭಾಗಕ್ಕೆ ಬಂದರೆ ಈ ಕಾರಿನಲ್ಲಿ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ಸಿಗುತ್ತದೆ. ಮಧ್ಯಭಾಗದಲ್ಲಿ 10.25 ಇಂಚ್‌ನ ಒಂದು ಇನ್ಫೋಟೈನ್‌ಮೆಂಟ್ ಸಿಸ್ಟಂ ಸಿಗುತ್ತಿದ್ದು, ಇದರಲ್ಲಿ ಹದಿನೇಳಕ್ಕೂ ಅಧಿಕ ಆ್ಯಪ್‌ಗಳು ಲಭ್ಯವಿದೆ.
ಟಾಟಾ ಪಂಚ್ ಎರಡು ವೇರಿಯಂಟ್ ನಲ್ಲಿ ಲಭ್ಯವಿದೆ. ಒಂದು ಟಾಟಾ ಪಂಚ್ ಇವಿ ಮತ್ತು ಇನ್ನೊಂದು ಟಾಟಾ ಪಂಚ್ ಇವಿ ಲಾಂಗ್ ರೇಂಜ್. ಟಾಟಾ ಪಂಚ್ ಇವಿ ವೇರಿಯಂಟ್‌ನಲ್ಲಿ 25kWh ಬ್ಯಾಟರಿ ಪ್ಯಾಕ್ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 315km ಕಿಮೀ ರೇಂಜ್ ನೀಡುವುದರ ಜೊತೆಗೆ 80.46bhp/ 114Nm ಪವರ್ ಅನ್ನು ಸಹ ಉತ್ಪಾದಿಸುತ್ತದೆ.

ಟಾಟಾ ಪಂಚ್ ಇವಿಯ ಮತ್ತೊಂದು ವೇರಿಯಂಟ್ ಆದ ಲಾಂಗ್ ರೇಂಜ್ ನಲ್ಲಿ 35kWh ಬ್ಯಾಟರಿ ಪ್ಯಾಕ್ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 421km ಕಿಮೀ ರೇಂಜ್ ನೀಡುವುದರ ಜೊತೆಗೆ120.7bhp ಮತ್ತು 190Nm ಪವರ್ ಅನ್ನು ಸಹ ಉತ್ಪಾದಿಸುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.


Click it and Unblock the Notifications