ಟಾಟಾ ಪಂಚ್‌ ಇವಿ VS ಟಿಯಾಗೋ ಇವಿ: ಟಾಟಾದ ಬಜೆಟ್‌ ಫ್ರೆಂಡ್ಲಿ ಇವಿಯಲ್ಲಿ ಯಾವುದು ಬೆಸ್ಟ್‌?

ಭಾರತೀಯ ಆಟೋಮೊಬೈಲ್‌ ಕ್ಷೇತ್ರ ನಿಧಾನವಾಗಿ ಎಲೆಕ್ಟ್ರಿಕ್ ಕ್ಷೇತ್ರದತ್ತ ಮುಖ ಮಾಡುತ್ತಿದೆ. ಈಗಾಗಲೇ ದೇಶದಲ್ಲಿ ಹಲವಾರು ಎಲೆಕ್ಟ್ರಿಕ್‌ ಬೈಕ್‌ ಮತ್ತು ಕಾರು ನಿರ್ಮಾಣ ಕಂಪನಿಗಳು ಆರಂಭವಾಗಿದ್ದು, ಈಗಾಗಲೇ ಇರುವ ಕಾರು ಮತ್ತು ಬೈಕ್‌ ನಿರ್ಮಾಣ ಕಂಪನಿಗಳು ಸಹ ಎಲೆಕ್ಟ್ರಿಕ್‌ ವಾಹನಗಳನ್ನು ನಿರ್ಮಾಣ ಮಾಡುತ್ತಿದೆ. ಇದರಲ್ಲಿ ಪ್ರಮುಖವಾದುದು ಟಾಟಾ ಮೋಟಾರ್ಸ್‌.

ಟಾಟಾ ಮೋಟಾರ್ಸ್ ಕುರಿತಾಗಿ ನೋಡುವುದಾದರೆ, ಟಾಟಾ ಪಂಚ್‌ನಿಂದ (TATA Punch) ಹಿಡಿದು ನೆಕ್ಸಾನ್‌ ವರೆಗೆ ಹಲವು ಐಸಿಇ ಕಾರುಗಳನ್ನು ಎಲೆಕ್ಟ್ರಿಕ್‌ ಆಗಿ ಬದಲಾಯಿಸಿವೆ. ಅದರಲ್ಲಿ ಪ್ರಮುಖವಾದುದು ಟಾಟಾ ಪಂಚ್‌ ಇವಿ ಮತ್ತು ಟಾಟಾ ಟಿಯಾಗೋ ಇವಿ. ಇಂದಿನ ಈ ಲೇಖನದಲ್ಲಿ ಟಾಟಾ ಟಿಯಾಗೋ ಇವಿ ಮತ್ತು ಟಾಟಾ ಪಂಚ್‌ ಎಲೆಕ್ಟ್ರಿಕ್‌ ಕಾರಿನ ಕುರಿತಾಗಿ ನೋಡಲಿದ್ದು, ಸಂಪೂರ್ಣ ಮಾಹಿತಿಗಾಗಿ ಕೊನೆಯವರೆಗೆ ಓದಿ.

TATA Punch EV VS TATA Tiago EV Which Is Best To Your Budget

ಬ್ಯಾಟರಿ: ಟಾಟಾ‌ ಈ ಹೊಸ ಪಂಚ್‌ ಇವಿ ಕಾರಿಗೆ ಎರಡು ವೇರಿಯಂಟ್‌ ಅನ್ನು ನೀಡಿದ್ದಾರೆ. ಒಂದು ಟಾಟಾ ಪಂಚ್‌ ಇವಿ ಮತ್ತು ಇನ್ನೊಂದು ಟಾಟಾ ಪಂಚ್‌ ಇವಿ ಲಾಂಗ್‌ ರೇಂಜ್‌. ಪಂಚ್‌ ಇವಿ 25kWh ಬ್ಯಾಟರಿ ಪ್ಯಾಕ್‌ ದೊರಕುತ್ತದೆ ಮತ್ತು ಲಾಂಗ್‌ ರೇಂಜ್‌ ನಲ್ಲಿ 35kWh ಬ್ಯಾಟರಿ ಪ್ಯಾಕ್‌ ದೊರಕುತ್ತದೆ.

ಈ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು IP67-ರೇಟೆಡ್ 24 kWh ಮತ್ತು 19.2 kWh ಬ್ಯಾಟರಿ ಪ್ಯಾಕ್‌ಗಳನ್ನು ಅಳವಡಿಸಲಾಗಿದೆ. ಗ್ರಾಹಕರು ತಮ್ಮ ಅನುಕೂಲತೆಗೆ ತಕ್ಕಂತೆ ತಮಗೆ ಬೇಕಾದ ಬ್ಯಾಟರಿ ಪ್ಯಾಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದು ಟಾಟಾ ಮೋಟಾರ್ಸ್‌ ಒದಗಿಸುವ ಅತ್ಯುತ್ತಮ ಆಯ್ಕೆಯಾಗಿದೆ.

TATA Punch EV VS TATA Tiago EV Which Is Best To Your Budget

ರೇಂಜ್‌: ಪಂಚ್‌ ಇವಿ 25kWh ಬ್ಯಾಟರಿ ಪ್ಯಾಕ್‌ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 315km ಕಿಮೀ ರೇಂಜ್ ನೀಡುತ್ತದೆ. ಇದರ ಮತ್ತೊಂದು ವೇರಿಯಂಟ್‌ ಆದ ಲಾಂಗ್‌ ರೇಂಜ್‌ ನಲ್ಲಿ 35kWh ಬ್ಯಾಟರಿ ಪ್ಯಾಕ್‌ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 421km ಕಿಮೀ ರೇಂಜ್ ನೀಡುತ್ತದೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ IP67-ರೇಟೆಡ್ 24 kWh ಬ್ಯಾಟರಿ ಪ್ಯಾಕ್‌315 ಕಿ.ಮೀ ರೇಂಜ್ ಅನ್ನು ನೀಡಿದರೆ, 19.2 kWh ಬ್ಯಾಟರಿ ಪ್ಯಾಕ್‌ ಸಿಂಗಲ್ ಚಾರ್ಜ್‌ನಲ್ಲಿ 250 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಸಾಧಾರಣ ಸಿಟಿ ಅಗತ್ಯತೆಗಳನ್ನು ಪೂರೈಸಲು ಇದು ಧಾರಾಳ.

TATA Punch EV VS TATA Tiago EV Which Is Best To Your Budget

ಪರ್ಫಾಮೆನ್ಸ್: ಟಾಟಾ ಪಂಚ್‌ ಇವಿ ವೇರಿಯಂಟ್‌ನಲ್ಲಿ ‌ ನೀಡುವುದರ ಜೊತೆಗೆ 80.46bhp/ 114Nm ಪವರ್‌ ಅನ್ನು ಸಹ ಉತ್ಪಾದಿಸುತ್ತದೆ. ಟಾಟಾ ಪಂಚ್‌ ಇವಿಯ ಮತ್ತೊಂದು ವೇರಿಯಂಟ್ ಆದ ಲಾಂಗ್‌ರೇಂಜ್‌ನಲ್ಲಿ 120.7bhp ಮತ್ತು 190Nm ಪವರ್‌ ಅನ್ನು ಸಹ ಉತ್ಪಾದಿಸುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.

ಚಾರ್ಜಿಂಗ್‌: ಟಿಯಾಗೋ ಕಾರಿನಲ್ಲಿ 3.3 kW ಎಸಿ ಚಾರ್ಜ್ ಮತ್ತು 7.2 kW ಎಸಿ ಚಾರ್ಜ್ ಸೌಲಭ್ಯಗಳನ್ನು ಆಯ್ಕೆ ರೂಪದಲ್ಲಿ ನೀಡಲಾಗುತ್ತದೆ. 7.2 kW ಎಸಿ ಚಾರ್ಜ್ ಸೌಲಭ್ಯದ ಮೂಲಕ 3 ಗಂಟೆ 36 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಅನ್ನು ಮಾಡಬಹುದಾಗಿದೆ. ಈ ಟಿಯಾಗೋ ಎಲೆಕ್ಟ್ರಿಕ್ ಕಾರು 50kW ಸಾಮರ್ಥ್ಯದ ಡಿಸಿ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳಲ್ಲಿ ಚಾರ್ಜ್ ಮಾಡಿದ್ದಲ್ಲಿ ಕೇವಲ 57 ನಿಮಿಷಗಳಲ್ಲಿ ಸೊನ್ನೆಯಿಂದ ನೂರರಷ್ಟು ಚಾರ್ಜ್ ಮಾಡಬಹುದಾಗಿದೆ.

ಇನ್ನು ಟಾಟಾ ಪಂಚ್ ಇವಿಯ ಎಲ್ಲಾ ವೇರಿಯಂಟ್‌ಗಳಲ್ಲಿಯೂ 3.3kWh ಚಾರ್ಜರ್‌ ಜೊತೆಗೆ ಬರುತ್ತಿದ್ದು ಇದರ ಸಹಾಯದಿಂದ ಈ ಕಾರು ಸಂಪೂರ್ಣ ಚಾರ್ಜ್‌ ಆಗಲು ಬೇಸ್‌ ವೇರಿಯಂಟ್‌ 9.4 ಗಂಟೆಗಳು ಮತ್ತು ಲಾಂಗ್‌ ರೇಂಜ್‌ ವೇರಿಯಂಟ್ 13.5 ಗಂಟೆಗಳ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ಇದರ ಜೊತೆಗೆ 7.2kWh ಫಾಸ್ಟ್‌ ಚಾರ್ಜಿಂಗ್‌ ಆಯ್ಕೆಯೂ ಸಹ ಲಭ್ಯವಿದ್ದು ಇದರ ಸಹಾಯದಿಂದ ಬೇಸ್‌ ವೇರಿಯಂಟ್‌ 3.6 ಗಂಟೆಗಳು ಮತ್ತು ಲಾಂಗ್‌ ರೇಂಜ್‌ ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಟಾಟಾ ಮೋಟಾರ್ಸ್‌ ಈ ಹೊಸ ಟಾಟಾ ಪಂಚ್‌ ಎಲೆಕ್ಟ್ರಿಕ್‌ ಅನ್ನು ಹೊಸ ಒಂದು ಪ್ಲಾಟ್‌ ಫಾರ್ಮ್‌ನಲ್ಲಿ ಬಿಡುಗಡೆ ಮಾಡಿದ್ದು, ಇದರ ಇತರ ಕಂಪನಿಗಳಿಗೆ ಪ್ರಭಲ ಪ್ರತಿಸ್ಪರ್ಧಿಯಾಗುವುದರಲ್ಲಿ ಎರಡು ಮಾತಿಲ್ಲ. ಸುಮಾರು 10.99 lakh (ex-showroom) ಇಂದು ಆರಂಭವಾಗುವ ಈ ಕಾರು ಇವಿ ಕ್ಷೇತ್ರದಲ್ಲಿ ಟಾಟಾಗೆ ಹೊಸ ಮೈಲುಗಲ್ಲು ಸ್ಥಾಪಿಸುವಲ್ಲಿ ಸಹಕಾರಿಯಾಗದೇ ಇರದು ಎಂಬುದು ನಮ್ಮ ಅಭಿಪ್ರಾಯ.

ಹೊಸ ಟಾಟಾ ಟಿಯಾಗೋ ಎಲೆಕ್ಟ್ರಿಕ್ (Tata Tiago EV) ಕಾರಿನ ಬೆಲೆಯು ರೂ.7.99 ಲಕ್ಷದಿಂದ ರೂ.11.89 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಟಾಟಾ ಮೋಟಾರ್ಸ್ ಕಂಪನಿಯು 2026ರ ವೇಳೆಗೆ ಹತ್ತು ಎಲೆಕ್ಟ್ರಿಕ್ ವಾಹನಗಳ ಪೋರ್ಟ್‌ಫೋಲಿಯೊವನ್ನು ಹೊಂದಲು ಟಾಟಾದ ಯೋಜನೆಗಳ ಭಾಗವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, March 24, 2024, 16:00 [IST]
English summary
Tata punch ev vs tata tiago ev which is best for your budget
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+