Tata: ಟಾಟಾ ಟಿಯಾಗೊ ಇವಿ ದರ ರೂ.70,000 ಇಳಿಕೆ.. ಬೆಂಗಳೂರಿನಲ್ಲಿ ಆನ್-ರೋಡ್ ಬೆಲೆ ಎಷ್ಟು?

ಟಾಟಾ ಮೋಟಾರ್ಸ್ (Tata Motors) ಪ್ರಮುಖ ಕಾರು ತಯಾರಕ ಕಂಪನಿಯಾಗಿ ಖ್ಯಾತಿಗಳಿಸಿದೆ. ಫೆ.10ರಂದು ಟಿಯಾಗೊ ಎಲೆಕ್ಟ್ರಿಕ್ ಕಾರಿನ ಬೆಲೆಯನ್ನು ರೂ.20,000 ದಿಂದ ರೂ.70,000ವರೆಗೆ ಕಡಿತಗೊಳಿಸಿ, ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿತ್ತು. ಇದೀಗ ಈ ಕಾರಿನ ಆನ್-ರೋಡ್ ದರದ ಬಗ್ಗೆ ವಿವರಗಳು ಬಹಿರಂಗಗೊಂಡಿವೆ.

ಬೆಂಗಳೂರು (Bengaluru) ನಗರದಲ್ಲಿ ಟಾಟಾ ಟಿಯಾಗೊ ಇವಿ (Tata Tiago EV)ಯ ಬೇಸ್ ವೇರಿಯೆಂಟ್ ರೂ.8.43 ಲಕ್ಷ, ಟಾಪ್ ಎಂಡ್ ವೇರಿಯೆಂಟ್ ರೂ.12.62 ಲಕ್ಷ, ಮುಂಬೈನಲ್ಲಿ ಬೇಸ್ ವೇರಿಯೆಂಟ್ ರೂ.8.42 ಲಕ್ಷ ಹಾಗೂ ಟಾಪ್ ಎಂಡ್ ವೇರಿಯೆಂಟ್ 12.61 ಲಕ್ಷ, ದೆಹಲಿಯಲ್ಲಿ ಬೇಸ್ ವೇರಿಯೆಂಟ್ ರೂ.8.46 ಮತ್ತು ಟಾಪ್ ಎಂಡ್ ವೇರಿಯೆಂಟ್ ರೂ.12.65 ಲಕ್ಷ ಆನ್-ರೋಡ್ (On-Road) ದರವನ್ನು ಹೊಂದಿವೆ.

Tata Tiago EV On-Road Prices Bengalurulore Including Top Cities: 315 Km Range

ಚೆನ್ನೈನಲ್ಲಿ ಬೇಸ್ ವೇರಿಯೆಂಟ್ ರೂ.8.44 ಲಕ್ಷ, ಟಾಪ್ ಎಂಡ್ ವೇರಿಯೆಂಟ್ ರೂ.12.62, ಕೋಲ್ಕತ್ತಾದಲ್ಲಿ ಕ್ರಮವಾಗಿ ರೂ.8.42 ಲಕ್ಷ ಹಾಗೂ ರೂ.12.61 ಲಕ್ಷ, ಹೈದರಾಬಾದಿನಲ್ಲಿ ರೂ.9.54 ಲಕ್ಷ ಮತ್ತು ರೂ.14.27 ಲಕ್ಷ, ಪುಣೆಯಲ್ಲಿ ರೂ.8.42 ಲಕ್ಷ, ರೂ.12.61 ಲಕ್ಷ, ಅಹಮದಾಬಾದ್ ನಲ್ಲಿ ರೂ.8.42 ಲಕ್ಷ ಮತ್ತು ರೂ.13.32 ಲಕ್ಷ ಆನ್-ರೋಡ್ ಬೆಲೆಯನ್ನು ಪಡೆದಿವೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ ಇವಿ, ಎಕ್ಸ್ಇ, ಎಕ್ಸ್‌ಟಿ, ಎಕ್ಸ್‌ಝಡ್ ಪ್ಲಸ್ ಸೇರಿದಂತೆ ವಿವಿಧ ರೂಪಾಂತರ ಮತ್ತು ಸಿಗ್ನೇಚರ್ ಟೀಲ್ ಬ್ಲೂ, ಡೇಟೋನಾ ಗ್ರೇ, ಟ್ರಾಪಿಕಲ್ ಮಿಸ್ಟ್, ಪ್ರಿಸ್ಟಿನ್ ವೈಟ್ ಒಳಗೊಂಡಂತೆ ಆಕರ್ಷಕ ಬಣ್ಣಗಳೊಂದಿಗೆ ದೊರೆಯುತ್ತದೆ. ವಿನ್ಯಾಸದ ದೃಷ್ಟಿಯಿಂದಲೂ ಈ ಕಾರು ಅತ್ಯುತ್ತಮವಾಗಿದ್ದು, 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

Tata Tiago EV On-Road Prices Bengalurulore Including Top Cities: 315 Km Range

ಈ ಕಾರು, 2 ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಅವುಗಳೆಂದರೆ 19.2 ಕೆಡಬ್ಲ್ಯೂಹೆಚ್ ಮತ್ತು 24 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್. ಇವುಗಳಿಗೆ ಅನುಗುಣವಾಗಿ ಪೂರ್ತಿ ಚಾರ್ಜ್ ನಲ್ಲಿ 250 ಕಿಲೋಮೀಟರ್ ರಿಂದ 315 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 100 - 200 ಕಿ.ಮೀ ಅಂತರವಿರುವ ನಗರಗಳ ನಡುವೆ ಸಂಚರಿಸಲು ಟಿಯಾಗೊ ಇವಿ ಹೆಚ್ಚು ಸೂಕ್ತವೆಂದು ಹೇಳಬಹುದು.

ಟಾಟಾ ಟಿಯಾಗೊ ಇವಿಯ ಚಾರ್ಜಿಂಗ್ ವಿಚಾರಕ್ಕೆ ಬರುವುದಾದರೆ, ಡಿಸಿ ಫಾಸ್ಟ್ ಚಾರ್ಜರ್ ಉಪಯೋಗಿಸಿದಾಗ ಈ ಕಾರಿನ ಬ್ಯಾಟರಿ 10-80% ಚಾರ್ಜ್ ಆಗಲು 57 ನಿಮಿಷ ಬೇಕಾಗುತ್ತದೆ. 15ಎ ಸಾಕೆಟ್ ಚಾರ್ಜರ್ ಬಳಕೆಯಲ್ಲಿ ಬ್ಯಾಟರಿ ಪ್ಯಾಕ್ ಅನ್ವಯ 6.9 ರಿಂದ 8.7 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ. ಹಾಗೆಯೇ ಈ ಕಾರು, 3.3 ಕೆಡಬ್ಲ್ಯೂ ಎಸಿ ಚಾರ್ಜರ್ ಮತ್ತು 7.2 ಕೆಡಬ್ಲ್ಯೂ ಎಸಿ ಚಾರ್ಜರ್ ಆಯ್ಕೆಯಲ್ಲಿಯೂ ಲಭ್ಯವಿದೆ.

Tata Tiago EV On-Road Prices Bengalurulore Including Top Cities: 315 Km Range

ಈ ಟಿಯಾಗೊ ಇವಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌, ಕ್ರೂಸ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಏರ್‌ಬ್ಯಾಗ್‌, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, February 19, 2024, 12:49 [IST]
English summary
Tata tiago ev on road price bengaluru including top cities 315 km range
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+