ರತನ್ ಟಾಟಾ ಕಂಪನಿಯ ಈ ಜನಪ್ರಿಯ ಕಾರಿನ ಮಾರಾಟದಲ್ಲಿ ಕುಸಿತ: ಕಾರಣವೇನು?

ಟಾಟಾ ಟಿಯಾಗೊ ಭಾರತೀಯ ಗ್ರಾಹಕರಲ್ಲಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. 2024ರ ಆಗಸ್ಟ್ ತಿಂಗಳಿನ ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್ ಮಾರಾಟ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಪ್ರಕಾರ, 2024ರ ಆಗಸ್ಟ್ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ 4,733 ಟಿಯಾಗೊ ಕಾರುಗಳನ್ನು ಮಾರಾಟ ಮಾಡಿದೆ. 2023ರ ಆಗಸ್ಟ್ ತಿಂಗಳಿನಲ್ಲಿ 9,463 ಟಾಟಾ ಟಿಯಾಗೊ ಕಾರುಗಳು ಮಾರಾಟವಾಗಿವೆ. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.50 ರಷ್ಟು ಕುಸಿತವಾಗಿದೆ. ಭಾರಿ ಕುಸಿತ ಕಂಡರೂ, 2024ರ ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್-10 ಹ್ಯಾಚ್‌ಬ್ಯಾಕ್ ಕಾರುಗಳ ಪಟ್ಟಿಯಲ್ಲಿ ಟಿಯಾಗೊ 7ನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಟಾಟಾ ಟಿಯಾಗೊ (Tata Tiago) ಕಾರು ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಮಾರಾಟವಾಗುತ್ತಿದೆ. ಇವುಗಳ ಒಟ್ಟು ಮಾರಾಟದ ಅಂಕಿಅಂಶಗಳನ್ನು ನಾವು ಮೇಲೆ ತಿಳಿಸಿದ್ದೇವೆ. ಹೀಗಿದ್ದರೂ, ಟಾಟಾ ಟಿಯಾಗೋ ಮಾರಾಟದಲ್ಲಿ ಶೇಕಡಾ 50 ರಷ್ಟು ಕುಸಿತವನ್ನು ದಾಖಲಿಸಿರುವುದು ಕಳವಳಕಾರಿ ಸಂಗತಿಯಾಗಿದೆ. ಟಾಟಾ ಟಿಯಾಗೊದ IC ಎಂಜಿನ್ ಆವೃತ್ತಿಗಳಿಗೆ ಸಂಬಂಧಿಸಿದಂತೆ, ಪೆಟ್ರೋಲ್ ಮತ್ತು CNG ಆಯ್ಕೆಗಳನ್ನು ನೀಡಲಾಗುತ್ತದೆ.

Tata Tiago

ಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊದ ಐಸಿ ಎಂಜಿನ್ ಆವೃತ್ತಿಗಳ ಆರಂಭಿಕ ಬೆಲೆ ಕೇವಲ 5 ಲಕ್ಷ ರೂ. ಆಗಿದೆ. ಕಡಿಮೆ ಬೆಲೆಗೆ ಸಿಗುವ ಕಾರಾದರೂ ಅತ್ಯುತ್ತಮ ಮೈಲೇಜ್ ಅನ್ನು ಹೊಂದಿದೆ. CNG/ಮ್ಯಾನ್ಯುವಲ್ ರೂಪಾಂತರಗಳು ಪ್ರತಿ ಕೆಜಿಗೆ 26.49 ಕಿಮೀ ಮೈಲೇಜ್ ನೀಡುತ್ತವೆ ಎಂದು ಹೇಳಲಾಗುತ್ತದೆ, ಆದರೆ CNG/AMD ರೂಪಾಂತರಗಳು ಪ್ರತಿ ಕೆಜಿಗೆ 28.06 ಕಿಮೀ ಮೈಲೇಜ್ ನೀಡುತ್ತವೆ ಎಂದು ವರದಿಯಾಗಿದೆ.

ಈ ಎಲ್ಲಾ ಮೈಲೇಜ್‌ಗಳು ARAI ನಿಂದ ಪ್ರಮಾಣೀಕರಿಸಲ್ಪಟ್ಟಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಮತ್ತೊಂದೆಡೆ, ಟಾಟಾ ಟಿಯಾಗೊ ಇವಿ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ 7.99 ಲಕ್ಷ ರೂ. ಇದು ಎಕ್ಸ್ ಶೋರೂಂ ಬೆಲೆಯೂ ಆಗಿದೆ. ಒಂದು ಬ್ಯಾಟರಿ ಆಯ್ಕೆಯು 250 ಕಿ.ಮೀ ರೇಂಜ್ ಅನ್ನು ಒದಗಿಸುತ್ತದೆ ಮತ್ತು ಇನ್ನೊಂದು ಬ್ಯಾಟರಿ ಆಯ್ಕೆಯು 315 ಕಿ.ಮೀ ರೇಂಜ್ ಅನ್ನು ಒದಗಿಸುತ್ತದೆ ಎಂದು ವರದಿಯಾಗಿದೆ.

Tata Tiago

ಟಾಟಾ ಟಿಯಾಗೊ ಕಾರು ಮಿಡ್ನೈಟ್ ಪ್ಲಮ್, ಡೇಟೋನಾ ಗ್ರೇ, ಓಪಲ್ ವೈಟ್, ಅರಿಜೋನಾ ಬ್ಲೂ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ದೊರೆಯುತ್ತದೆ. ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್‌ 2 ಪವರ್ ಟ್ರೇನ್ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಇದರ 1.2-ಲೀಟರ್ ಪೆಟ್ರೋಲ್ ಎಂಜಿನ್ 86 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 113 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.

ಜೊತೆಗೆ 5-ಸ್ವೀಡ್ ಮ್ಯಾನುವಲ್ ಅಥವಾ 5-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ. ಸಿಎನ್‌ಜಿ ಚಾಲಿತ ಕಾರು ಸಹ ಇದೇ ಎಂಜಿನ್ ಆಯ್ಕೆಯನ್ನು ಹೊಂದಿದೆ. ಆದರೆ 73.5 ಪಿಎಸ್ ಪವರ್ ಮತ್ತು 95 ಎನ್ಎಂ ಪೀಕ್ ಟಾರ್ಕ್ ಮಾತ್ರ ಹೊರಹಾಕಲಿದ್ದು, 5-ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ನೊಂದಿಗೆ ಲಭ್ಯವಿದೆ.

Tata Tiago

ಪೆಟ್ರೋಲ್ ರೂಪಾಂತರಗಳು 19.43 ರಿಂದ 20.01 ಕೆಎಂಪಿಎಲ್, ಸಿಎನ್‌ಜಿ ಮಾದರಿಗಳು 26.49 ರಿಂದ 28.06 ಕೆಎಂ/ಕೆಜಿ ಮೈಲೇಜ್ ಕೊಡುತ್ತವೆ. ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್‌ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್‌ನ ಡಿಸ್ಪ್ಲೇ, 8-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, September 22, 2024, 15:00 [IST]
English summary
Tata tiago sales decline in august 2024 details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+