Tata: ಮಧ್ಯಮ ವರ್ಗದವರ ಕನಸು ನನಸು.. ಪ್ರಮುಖ ಕಾರುಗಳಿಗೆ ದೊಡ್ಡ ರಿಯಾಯಿತಿ, ರೂ.5 ಲಕ್ಷ ಆರಂಭಿಕ ಬೆಲೆ
ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಜನಮನ್ನಣೆ ಗಳಿಸಿದೆ. ಈ ಮಾರ್ಚ್ ತಿಂಗಳು ಟಿಯಾಗೊ, ಟಿಗೂರ್ ಹಾಗೂ ನೆಕ್ಸಾನ್ ಸೇರಿದಂತೆ ವಿವಿಧ ಮಾದರಿಗಳ ಮೇಲೆ ದೊಡ್ಡ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಟಾಟಾದ ಆರಂಭಿಕ ಆವೃತ್ತಿಯಾಗಿರುವ ಟಿಯಾಗೊ (Tiago) ಕಾರಿನ 2023ರ ಮ್ಯಾನುವಲ್ ರೂಪಾಂತರ ರೂ.45,000 ಹಾಗೂ ಆಟೋಮೆಟಿಕ್ ಮಾದರಿ ರೂ.45,000 ಗ್ರಾಹಕ ರಿಯಾಯಿತಿ (Consumer Discount)ಯನ್ನು ಒಳಗೊಂಡಿವೆ. 2024ರ ಟಿಯಾಗೊ ಎಕ್ಸ್‌ಟಿ ಹಾಗೂ ಎಕ್ಸ್ಎಂ ರೂಪಾಂತರಗಳು ರೂ.25,000 ಡಿಸ್ಕೌಂಟ್ ಹೊಂದಿದ್ದು, ಉಳಿದ ಆವೃತ್ತಿಗಳು ರೂ.20,000 ರಿಯಾಯಿತಿಯನ್ನು ಪಡೆದಿವೆ.

ಟಾಟಾ ಟಿಯಾಗೊ 2023ರ ಸಿಎನ್‌ಜಿ ಮಾದರಿ ರೂ.50,000 ಮತ್ತು 2024ರ ಸಿಎನ್‌ಜಿ ಕಾರು ರೂ.15,000 ಡಿಸ್ಕೌಂಟ್ ಅನ್ನು ಒಳಗೊಂಡಿದೆ. ಟಾಟಾ ಟಿಗೂರ್ (Tata Tigor) 2023ರ ಮಾದರಿ ರೂ.50,000 ಹಾಗೂ 2024ರ ಆವೃತ್ತಿ ರೂ.20,000 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಜನಪ್ರಿಯ ಮೆಕ್ರೋ ಎಸ್‌ಯುವಿ ಟಾಟಾ ಪಂಚ್ ರೂ.5000 ಕಾರ್ಪೊರೇಟ್ ಡಿಸ್ಕೌಂಟ್ ಮಾತ್ರ ಪಡೆದಿದೆ.
ಟಾಟಾ ಆಲ್ಟ್ರೋಜ್ (Tata Altroz) ಕಾರಿನ 2023ರ ಮ್ಯಾನುವಲ್ ಗೇರ್ ಬಾಕ್ಸ್ ಪೆಟ್ರೋಲ್ ರೂಪಾಂತರ ರೂ.35,000, ಡಿಸಿಟಿ ಮಾದರಿ ರೂ.15,000 ರಿಯಾಯಿತಿಯನ್ನು ಹೊಂದಿದೆ. ಈ ವರ್ಷದ (2024) ಆಲ್ಟ್ರೋಜ್ ಪೆಟ್ರೋಲ್ ಮ್ಯಾನುವಲ್ ಆವೃತ್ತಿ ರೂ.15,000 ಡಿಸ್ಕೌಂಟ್ ಪಡೆದಿದೆ. 2023ರ ಆಲ್ಟ್ರೋಜ್ ಡೀಸೆಲ್ ರೂಪಾಂತರ ರೂ.30,000, ಸಿಎನ್‌ಜಿ ಮಾದರಿ ರೂ.15,000 ಮತ್ತು 2024ರ ಆಲ್ಟ್ರೋಜ್ ಡಿಸೇಲ್ ಕಾರು ರೂ.15,000 ರಿಯಾಯಿತಿಯನ್ನು ಹೊಂದಿದೆ.

2023ರ ಬಿಡುಗಡೆಗೊಂಡ ಹಿಂದಿನ ತಲೆಮಾರಿನ (Pre-Facelift) ನೆಕ್ಸಾನ್ ಮ್ಯಾನುವಲ್ ಗೇರ್ ಬಾಕ್ಸ್ ಪೆಟ್ರೋಲ್ ಮಾದರಿ 40,000 ಹಾಗೂ ಆಟೋಮೆಟಿಕ್ ರೂಪಾಂತರ ರೂ.20,000 ರಿಯಾಯಿತಿಯನ್ನು ಪಡೆದಿದೆ. ಅದೇರೀತಿಯಲ್ಲಿ ಡೀಸೆಲ್ ಆಟೋಮೆಟಿಕ್ ಆವೃತ್ತಿ ರೂ.20,000 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. 2023ರ ಹೊಸ ನೆಕ್ಸಾನ್ ಫೇಸ್‌ಲಿಫ್ಟ್ ಪೆಟ್ರೋಲ್ ಕಾರು ಸಹ ರೂ.20,000 ಮತ್ತು ಡೀಸೆಲ್ ಮಾದರಿಯು ರೂ.25,000 ಡಿಸ್ಕೌಂಟ್ ಒಳಗೊಂಡಿದೆ.
ಹಳೆಯ ತಲೆಮಾರಿನ (Pre-facelift) ಟಾಟಾ ಹ್ಯಾರಿಯರ್ (Harrier) ಹಾಗೂ ಸಫಾರಿ (Safari) ಎಸ್‌ಯುವಿಗಳು ರೂ.50,000 ಹಾಗೂ ನೂತನ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್ ಮಾದರಿಗಳು ರೂ.40,000 ರಿಯಾಯಿತಿಯನ್ನು ಹೊಂದಿವೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಹ್ಯಾರಿಯರ್ ರೂ.15.49 ಲಕ್ಷದಿಂದ ರೂ.26.44 ಲಕ್ಷ, ಸಫಾರಿ ಕಾರು ರೂ.16.19 ಲಕ್ಷದಿಂದ ರೂ.27.34 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ.

ಟಿಯಾಗೊ ಕಾರಿನ ಬಗ್ಗೆ ಮಾತನಾಡುವುದಾದರೆ, ಇದು ರೂ.5.65 ಲಕ್ಷದಿಂದ ರೂ.8.90 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, ಪೆಟ್ರೋಲ್ ರೂಪಾಂತರಗಳು 19.43 ರಿಂದ 20.01 ಕೆಎಂಪಿಎಲ್, ಸಿಎನ್‌ಜಿ ಚಾಲಿತ ಮಾದರಿಗಳು 26.49 - 28.06 ಕೆಎಂ/ಕೆಜಿ ಮೈಲೇಜ್ ನೀಡುತ್ತವೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಪಡೆದಿದೆ.
ಟಾಟಾ ಟಿಗೂರ್ (Tata Tigor) ರೂ.6.30 ಲಕ್ಷದಿಂದ ರೂ.9.55 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್ ಬ್ಯಾಗ್ ಹೊಂದಿದೆ.
ಟಾಟಾ ಆಲ್ಟ್ರೋಜ್ (Tata Altroz) ಕಾರು, ರೂ.6.65 ದಿಂದ ರೂ.10.80 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಪಡೆದಿದೆ. ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ಆಯ್ಕೆಯಲ್ಲಿ ದೊರೆಯುತ್ತದೆ. ಈ ಕಾರಿನಲ್ಲಿ 5 ಮಂದಿ ಪ್ರಯಾಣಿಸಬಹುದು. ಸುರಕ್ಷತೆಗಾಗಿ ಈ ಕಾರು ಗ್ಲೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ. ನಿಮ್ಮ ಗಮನಕ್ಕೆ.. ಈ ರಿಯಾಯಿತಿ ಪ್ರಯೋಜನಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಡೀಲರ್ ಶಿಪ್ ಸಂಪರ್ಕಿಸಿರಿ.


Click it and Unblock the Notifications