Tata: ಟಾಟಾದಿಂದ ದೊಡ್ಡ ಸಿಹಿಸುದ್ದಿ.. ಈಗ ಬಿಟ್ಟರೆ ಮತ್ತೆ ಸಿಗುವುದಿಲ್ಲ, ಮಿಸ್ ಮಾಡಬೇಡಿ!
ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಸಂಸ್ಥೆಯಾಗಿ ಟಾಟಾ ಮೋಟಾರ್ಸ್ (Tata Motors) ಗುರುತಿಸಿಕೊಂಡಿದೆ. ಈ ಮೇನಲ್ಲಿಯೂ ಕಂಪನಿಯ ಆಯ್ದ ಕಾರುಗಳು ನಗದು ರಿಯಾಯಿತಿ, ವಿನಿಮಯ ಬೋನಸ್ ಸೇರಿದಂತೆ ರೂ.60,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಮೊದಲಿಗೆ ಟಾಟಾ ಟಿಯಾಗೊ (Tata Tiago) ಹ್ಯಾಚ್‌ಬ್ಯಾಕ್ ಪಡೆದಿರುವ ಡಿಸ್ಕೌಂಟ್ ಆಫರ್ ಕುರಿತು ಮಾತನಾಡೋಣ. ಈ ಕಾರಿನ ಪೆಟ್ರೋಲ್ ಚಾಲಿತ ಎಕ್ಸ್‌ಟಿ (ಒ), ಎಕ್ಸ್‌ಟಿ ಹಾಗೂ ಎಕ್ಸ್‌ಝಡ್ ರೂಪಾಂತರ (ವೇರಿಯೆಂಟ್)ಗಳು ಒಟ್ಟು ರೂ.60,000 ವರೆಗೆ ರಿಯಾಯಿತಿ ಸೌಲಭ್ಯವನ್ನು ಹೊಂದಿವೆ. ಅದರೊಳಗೆ ರೂ.45,000 ನಗದು ರಿಯಾಯಿತಿ (Cash Discount), ರೂ.10,000 ವಿನಿಮಯ ಬೋನಸ್ (Exchange Bonus) ಹಾಗೂ ರೂ.5,000 ಕಾರ್ಪೊರೇಟ್ ರಿಯಾಯಿತಿಗಳು (Corporate Discount) ಕೂಡ ಸೇರಿವೆ.

ಇನ್ನುಳಿದ ಟಾಟಾ ಟಿಯಾಗೊ ಕಾರಿನ ಪೆಟ್ರೋಲ್ ಮಾದರಿಗಳು ರೂ.35,000 ಹಾಗೂ ಸಿಎನ್‌ಜಿ ಆವೃತ್ತಿಗಳು ರೂ.25,000 ರಿಯಾಯಿತಿಯನ್ನು ಪಡೆದಿವೆ. ದೇಶೀಯ ಮಾರುಕಟ್ಟೆಯಲ್ಲಿ ಈ ಟಿಯಾಗೊ ಹ್ಯಾಚ್‌ಬ್ಯಾಕ್ ರೂ.5.65 ಲಕ್ಷದಿಂದ ರೂ.8.90 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಪ್ರೀಮಿಯಂ ಟಾಟಾ ಆಲ್ಟ್ರೋಜ್ (Tata Altroz) ಹ್ಯಾಚ್‌ಬ್ಯಾಕ್ ಕೂಡ ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಈ ಕಾರಿನ ಡೀಸೆಲ್ ಹಾಗೂ ಪೆಟ್ರೋಲ್ (ಮ್ಯಾನುವಲ್ ಗೇರ್‌ಬಾಕ್ಸ್) ಮಾದರಿಗಳು ಒಟ್ಟು ರೂ.50,000 ವರೆಗೆ ಡಿಸ್ಕೌಂಟ್ ಆಫರ್ ಪಡೆದಿವೆ. ಹಾಗೆಯೇ ಸಿಎನ್‌ಜಿ ಚಾಲಿತ ಮಾದರಿಗಳು ಸರಿ ಸುಮಾರು ರೂ.35,000 ರಿಯಾಯಿತಿ ಸೌಲಭ್ಯವನ್ನು ಹೊಂದಿವೆ.

ನೂತನ ಟಾಟಾ ಆಲ್ಟ್ರೋಜ್ ಕಾರು ರೂ.6.65 ಲಕ್ಷದಿಂದ ರೂ.10.80 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದರ ಪೆಟ್ರೋಲ್ ರೂಪಾಂತರಗಳು 18.50 ರಿಂದ 19.33 ಕೆಎಂಪಿಎಲ್, ಡೀಸೆಲ್ ಮಾದರಿಗಳು 23.64 ಕೆಎಂಪಿಎಲ್ ಹಾಗೂ ಸಿಎನ್‌ಜಿ ಆವೃತ್ತಿಗಳು 26.20 ಕೆಎಂ/ ಕೆಜಿ ಮೈಲೇಜ್ ಕೊಡುತ್ತವೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಏರ್ ಬ್ಯಾಗ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಟಾಟಾ ಟಿಗೂರ್ (Tata Tigor) ಹ್ಯಾಚ್‌ಬ್ಯಾಕ್ ಸಹ ಉತ್ತಮವಾದ ಡಿಸ್ಕೌಂಟ್ ಆಫರ್ ಪಡೆದಿದೆ. ಇದರ ಎಕ್ಸ್‌ಝಡ್ ಪ್ಲಸ್ ಮತ್ತು ಎಕ್ಸ್ಎಂ ಮಾದರಿಗಳು ಒಟ್ಟು ರೂ.55,000 ರಿಯಾಯಿತಿ ಪ್ರಯೋಜನವನ್ನು ಹೊಂದಿವೆ. ಅದರಲ್ಲಿ ರೂ.40,000 ನಗದು ರಿಯಾಯಿತಿ, ರೂ.10,000 ವಿನಿಮಯ ಬೋನಸ್ ಮತ್ತು ರೂ.5,000 ಕಾರ್ಪೊರೇಟ್ ರಿಯಾಯಿತಿಗಳು ಇವೆ.

ಇತರೆ ಪೆಟ್ರೋಲ್ ಚಾಲಿತ ಟಿಗೂರ್ ರೂಪಾಂತರಗಳು ರೂ.30,000 ಹಾಗೂ ಸಿಎನ್‌ಜಿ ಮಾದರಿಗಳು ರೂ.30,000 ನಗದು ರಿಯಾಯಿತಿಯನ್ನು ಹೊಂದಿವೆ. ಈ ಕಾರು ರೂ.6.30 ಲಕ್ಷದಿಂದ ರೂ.9.55 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಟಾಟಾದ ಜನಪ್ರಿಯ ಎಸ್‌ಯುವಿ ನೆಕ್ಸಾನ್ ಒಟ್ಟಾರೆ ರೂ.20,000 ರಿಯಾಯಿತಿಯನ್ನು ಒಳಗೊಂಡಿದೆ. ನಿಮ್ಮ ಗಮನಕ್ಕೆ.. ಈ ಡಿಸ್ಕೌಂಟ್ ಆಫರ್ ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications