ಬಹುನಿರೀಕ್ಷಿತ ಟೆಸ್ಲಾ ಡ್ರೈವರ್‌ಲೆಸ್ ರೋಬೋಟ್ಯಾಕ್ಸಿ ಹಾಗೂ ವ್ಯಾನ್ ಅನಾವರಣ!

ವಿಶ್ವ ಇವಿ ವಾಹನ ತಯಾರಿಕೆಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ಟೆಸ್ಲಾ, ತನ್ನ ಬಹುನಿರೀಕ್ಷಿತ ಚಾಲಕರಹಿತ ರೋಬೋಟ್ಯಾಕ್ಸಿ ಹಾಗೂ ರೋಬೋವ್ಯಾನ್ ಮಾದರಿಗಳನ್ನು ಇಂದು ಬಹಿರಂಗಪಡಿಸಿದೆ. ಇದು ಚಾಲಕರಹಿತ ಮುಕ್ತ ಸಾರಿಗೆ ವಲಯಕ್ಕೆ ಶಕ್ತಿ ನೀಡುತ್ತದೆ ಎಂದು ಕಂಪನಿ ನಂಬಿದ್ದು, ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಕೂಡ ರೋಬೋಟ್ಯಾಕ್ಸಿಗಳ ಪರಿವರ್ತಕ ಶಕ್ತಿಯಲ್ಲಿ ತುಂಬಾ ಬಲವಾಗಿ ನಂಬಿದ್ದಾರೆ. ಕಂಪನಿಯ ಆರ್ಥಿಕ ಭವಿಷ್ಯವನ್ನು ಈ ಉತ್ಪನ್ನಗಳ ಮೇಲೆ ಇಡುವುದು ಕೂಡ ಯೋಗ್ಯವಾಗಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

ಈಗಿನ ಎಲ್ಲಾ ವಾಹನಗಳಿಗಿಂತ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ವಾಹನ ಒಳಗೊಂಡಿರುವುದರಿಂದ ಮೊದಲೇ ಹೇಳಿದಂತೆ ಕಂಪನಿಯ ಆರ್ಥಿಕ ಭವಿಷ್ಯವು ಈ ಉತ್ಪನ್ನದ ಮೇಲಿದೆ. ಚಾಲಕರಹಿತ ಟೆಸ್ಲಾ ವಾಹನವು ಕೇವಲ ಎರಡು ವರ್ಷಗಳಲ್ಲಿ ಬರಲಿದೆ ಎಂದು ಮಸ್ಕ್ ಅವರು ಹಲವು ವರ್ಷಗಳಿಂದ ಭರವಸೆ ನೀಡುತ್ತಲೇ ಇದ್ದರು. ಅನೇಕ ವಿಳಂಬಗಳ ನಂತರ, ಮಸ್ಕ್ ಅಭಿಮಾನಿಗಳು ಮತ್ತು ಹೂಡಿಕೆದಾರರಿಗೆ ಕೊನೆಗೂ ಈ ಚಾಲಕರಹಿತ ರೋಬೊ ವಾಹನಗಳನ್ನು ತೋರಿಸಿದ್ದಾರೆ.

tesla-driverless-cybercab-robotaxi-unveiled

ಈ ರೋಬೊ ಟ್ಯಾಕ್ಸಿ ಹಾಗೂ ವ್ಯಾನ್ ಅನಾವರಣವು ಎಲಾನ್ ಮಸ್ಕ್ ಅವರಿಗೆ ನಿರ್ಣಾಯಕವಾಗಿದೆ, ಏಕೆಂದರೆ ಇದು ಅವರ ಕಂಪನಿಯ ಮೇಲೆ ದೀರ್ಘಕಾಲ ಪರಿಣಾಮ ಬೀರಲಿದೆ. ಈ ಹಿಂದೆ ಸೈಬರ್ ಟ್ರಕ್ ಅನಾವರಣದ ವೇಳೆ ಕಾಣಿಸಿಕೊಂಡ ದೋಷಗಳು ಇಲ್ಲೂ ಕಾಣಿಸಿಕೊಂಡರೆ ವ್ವತಿರಿಕ್ತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಟೆಸ್ಲಾ ರೋಬೋಟ್ಯಾಕ್ಸಿ ಮತ್ತು ಹೊಸ ವ್ಯವಹಾರ ಮಾದರಿಯ ಬಗ್ಗೆ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸುವ ನಿರೀಕ್ಷೆಯಿದೆ.

ಈವೆಂಟ್ ಅನ್ನು ಎಲಾನ್ ಮಸ್ಕ್ ಅವರ X ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಲಾಗಿದೆ. ಯಶಸ್ವಿ ಅನಾವರಣವು ಎಲಾನ್ ಮಸ್ಕ್ ಅವರ ಸ್ವಾಯತ್ತ ಚಾಲನಾ ತಂತ್ರದ (Autonomous driving strategy) ಸುತ್ತಲಿನ ಅನುಮಾನಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಗೆಯೇ ಗ್ರಾಹಕರಿಗೆ ಟೆಸ್ಲಾ ಮೇಲಿನ ನಂಬಿಕೆಯನ್ನು ಹೆಚ್ಚಿಸಲಿದೆ.

tesla-driverless-cybercab-robotaxi-unveiled

ಸದ್ಯ ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಈಗಾಗಲೇ ಚೀನಾ ಮೂಲದ ಬಿವೈಡಿ ಕಂಪನಿಯು ಟೆಸ್ಲಾವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಈ ಪೈಪೋಟಿಯನ್ನು ಎದುರಿಸಿ ಆಧುನಿಕ ವಾಹನಗಳನ್ನು ಗ್ರಾಹಕರ ಮುಂದಿಡುವ ಅನಿವಾರ್ಯತೆ ಟೆಸ್ಲಾಗಿದೆ. ಜೊತೆಗೆ ಟೆಕ್ನಾಲಜಿಯಲ್ಲಿ ಸದಾ ಮುಂದಿರುವುದಾಗಿ ಗುರ್ತಿಸಿಕೊಂಡಿರುವ ಕಾರಣ ಟೆಸ್ಲಾಗೆ ಇದು ನಿರ್ಣಾಯಕವಾಗಿದೆ.

ಎಲಾನ್ ಮಸ್ಕ್ ರೋಬೊ ಟ್ಯಾಕ್ಸಿ ಮೂಲಮಾದರಿಯಲ್ಲಿ ಕೆಲ ಬದಲಾವಣೆಗಳನ್ನು ಆದೇಶಿಸಿದ ನಂತರ ಹಲವಾರು ತಿಂಗಳು ಕಳೆದ ಬಳಿಕ ರೋಬೋಟ್ಯಾಕ್ಸಿಯನ್ನು ಈಗ ಬಹಿರಂಗಪಡಿಸಿದ್ದಾರೆ. ಇದಕ್ಕೂ ಮುನ್ನ ಈ ರೋಬೊ ಟ್ಯಾಕ್ಸಿ ನಿರ್ಮಾಣ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಹಲವಾರು ಪ್ರಮುಖ ಅಧಿಕಾರಿಗಳು ಕಂಪನಿಯನ್ನು ತೊರೆದಿದ್ದಾರೆ ಎಂಬ ವರದಿಗಳು ಕೂಡ ಹೊರಬಂದಿದ್ದವು.

tesla-driverless-cybercab-robotaxi-unveiled

ಪ್ರಸ್ತುತ, ಟೆಸ್ಲಾ ಚಾಲಕ - ಸಹಾಯ ವೈಶಿಷ್ಟ್ಯ (Driver-assist feature) ಗಳೊಂದಿಗೆ ಸಾಫ್ಟ್‌ವೇರ್ ಉತ್ಪನ್ನವನ್ನು ಹೊಂದಿದ್ದು, ಅದು ಪೂರ್ಣ ಸ್ವಯಂ-ಚಾಲನೆ ಅಥವಾ ಎಫ್‌ಎಸ್‌ಡಿ ಎಂದು ಕರೆಯಲಾಗುತ್ತದೆ. ಆದರೆ ಇದಕ್ಕೆ ನಿರಂತರ ಮೇಲ್ವಿಚಾರಣೆಯ ಅಗತ್ಯವಿದೆ. ಈ ತಂತ್ರಜ್ಞಾನವು ಪರಿಪೂರ್ಣವಾಗಿಲ್ಲ ಎಂಬುದು ಹಲವರ ವಾದವಾಗಿದೆ.

ಅಂದರೆ ಪೂರ್ಣ ಸ್ವಯಂ - ಚಾಲನೆ ತಂತ್ರಜ್ಞಾನವನ್ನು ಈ ರೋಬೊ ಟ್ಯಾಕ್ಸಿ ಶೇ100 ರಷ್ಟು ಸಾಭೀತುಪಡಿಸಿಕೊಳ್ಳುವ ಅಗತ್ಯವಿದೆ. ಏಕೆಂದರೆ ಮಾರುಕಟ್ಟೆಗಳಲ್ಲಿ ರೋಬೋಟ್ಯಾಕ್ಸಿಸ್‌ನಿಂದ ಹಣಗಳಿಸಲು ಅಗತ್ಯವಿರುವ ನಿಯಂತ್ರಕ ಅನುಮೋದನೆಗಳಲ್ಲಿ ಟೆಸ್ಲಾ ಹಿಂದುಳಿದಿದೆ. ಹಾಗಾಗಿ ಈ ರೋಬೊ ಟ್ಯಾಕ್ಸಿ ಯೋಜನೆಯು ಯಶಸ್ವಿಯಾದರೆ ಟೆಸ್ಲಾಗೆ ಭವಿಷ್ಯದಲ್ಲಿ ಚಿನ್ನದ ಮೊಟ್ಟೆಯಾಗಲಿದೆ.

More from DriveSpark

Article Published On: Friday, October 11, 2024, 13:44 [IST]
English summary
Tesla driverless cybercab robotaxi unveiled
Read more on tesla
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+