ಥೇಟ್ ಜಿ G-Wagon ಥರ ಕಾಣಿಸುತ್ತಿದೆ ಈ ಜಿಮ್ನಿ: ದೊಡ್ಡ ದೊಡ್ಡ ಟೈರ್‌ಗಳಿಂದ ಈ ಕಾರಿಗೆ ಲುಕ್ಕೇ ಲುಕ್ಕು
ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಎಲ್ಲರ ಮನೆ ಮಾತಾದ ಎಸ್‌ಯುವಿ ಎಂದರೆ ಅದು ಮಾರುತಿ ಸುಜುಕಿ ಜಿಮ್ನಿ. ಈ ಕಾರು ೨೦೨೩ ರ ಆಟೋ ಎಕ್ಸ್ಪೋದಲ್ಲಿ ಅನಾವರಣ ಮಾಡಿದಾಗಲೇ ಈ ಕಾರು ಭಾರತೀಯ ಆಫ್‌ರೋಡ್ ಎಸ್‌ಯುವಿ ಕ್ಷೇತ್ರದಲ್ಲಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಲಿದೆ ಎಂದು.
ಮಾರುತಿ ಸುಜುಕಿ ಜಿಮ್ನಿಯ ಮತ್ತೊಂದು ವಿಶೇಷವೆಂದರೆ, ಈ ಕಾರೊಂದು ಓಪನ್ ಕ್ಯಾನ್‌ವಾಸ್ ತರಹ. ಈ ಕಾರನ್ನು ನಿಮಗಿಷ್ಟ ಇರುವ ರೀತಿಯಲ್ಲಿ ಬದಲಾಯಿಸಬಹುದು, ಮಾಡಿಫೈ ಮಾಡಬಹುದಾಗಿದೆ. ಈ ಕಾರಣದಿಂದಲೇ ಜಿಮ್ನಿ ಮಾರುಕಟ್ಟೆಗೆ ಬಂದ ಕೆಲವೇ ದಿನಗಳಲ್ಲಿ ಹಲವಾರು ಮಾಡಿಫೈ ಕಿಟ್‌ಗಳನ್ನು ಇತರ ಆಫ್ಟರ್ ಮಾರ್ಕೆಟ್ ಕಂಪನಿಗಳು ಮಾರುಕಟ್ಟೆಗೆ ಪರಿಚಯಿಸಿತ್ತು.

ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ನಾವು ಭಯಂಕರವಾಗಿ ಮಾಡಿಫೈಗೊಂಡಿರುವ ಮಾರುತಿ ಸುಜುಕಿ ಜಿಮ್ನಿಗಳನ್ನು ನೋಡಿದ್ದೇವೆ. ಇಲ್ಲೊಬ್ಬ ವ್ಯಕ್ತಿ ಅದೇ ರೀತಿಯಲ್ಲಿ ತನ್ನ ಕಪ್ಪು ಬಣ್ಣದ ಜಿಮ್ನಿಯನ್ನು ಮಾಡಿಫೈ ಮಾಡಿದ್ದು ಇದು ಥೇಟ್ ಜಿ ವಾಗನ್ ಕಾರನ್ನು ನೋಡಿದ ಹಾಗೆಯೇ ಕಾಣುತ್ತದೆ. ಪಾರ್ಕಿಂಗ್‌ನಿಂದ ಹೊರ ಬರುವ ಸಮಯದಲ್ಲಿ ಈ ಕಾರಿನ ವಿಡಿಯೋ ಶೂಟ್ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ವಿಡಿಯೋದಲ್ಲಿ ಕಂಡು ಬರುವ ಜಿಮ್ನಿಗೆ ದೊಡ್ಡ ದೊಡ್ಡ ಟೈರ್‌ಗಳನ್ನು ಹಾಕಲಾಗಿದ್ದು ಇದು ಈ ಕಾರಿನ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಿಸಿದೆ. ಈ ಕಾರಿನಲ್ಲಿ ಹಲವಾರು ಮಾಡಿಫಿಕೇಷನ್‌ಗಳನ್ನು ಮಾಡಲಾಗಿದ್ದು, ಇದರಲ್ಲಿ ಲಿಫ್ಟ್ ಕಿಟ್ ಸಹ ಒಳಗೊಂಡಿದೆ. ದೊಡ್ಡ ಪ್ರೊಫೈಲ್‌ನ ಟೈರ್‌ಗಳನ್ನು ಹಾಕಿರುವುದರಿಂದ ಇದು ದೊಡ್ಡ ದೊಡ್ಡ ಪ್ರದೇಶಗಳನ್ನು ಏರಲು ಹೆಚ್ಚಿನ ಬೆಂಬಲವನ್ನು ನೀಡುತ್ತದೆ. ಈ ಮೂಲಕ ಈ ಕಾರಿನ ಆಫ್‌ರೋಡ್ ಪರ್ಫಾಮೆನ್ಸ್ ಇನ್ನೂ ಹೆಚ್ಚಾಗಲಿದೆ.

ಇನ್ನು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾರುತಿ ಸುಜುಕಿ ಜಿಮ್ನಿ ಕಾರಿನ ಬಗ್ಗೆ ನೊಡುವುದಾದರೆ ಇದು 5 ಡೋರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಅದಕ್ಕೆ ತಕ್ಕಂತೆಯೇ ವಿನ್ಯಾಸವನ್ನು ಹೊಂದಿದೆ . ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್, ವಾಷರ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಅಲಾಯ್ ವೀಲ್ಸ್, 195/80 ಅಳತೆಯ ಟೈಯರ್ಸ್ ಪಡೆದಿದೆ. ಜೊತೆಗೆ ಇದರ ಫ್ರಂಟ್ ಲುಕ್ ನೋಡುಗರನ್ನು ಸೆಳೆಯುತ್ತದೆ. ರೇರ್ ಆಕರ್ಷವಾಗಿದ್ದು, ಕ್ಯಾಬಿನ್ ಒಳಭಾಗವು ಅತ್ಯುತ್ತಮವಾಗಿದೆ. 4WD (ಫೋರ್ ವೀಲ್ಸ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.
ಜಿಮ್ನಿ 5 ಡೋರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6000 rpmನಲ್ಲಿ 104.8 Ps ಗರಿಷ್ಠ ಪವರ್ ಹಾಗೂ 4000 rpmನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಇದೊಂದು ಆಫ್-ರೋಡ್ ಎಸ್‌ಯುವಿಯಾಗಿದ್ದರೂ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರ 5-ಸ್ವೀಡ್ MT ರೂಪಾಂತರ, 16.94 km/l ಹಾಗೂ 4-ಸ್ವೀಡ್ AT ರೂಪಾಂತರ 16.39km/l ಮೈಲೇಜ್ ನೀಡುತ್ತದೆ. ಈ ಜಿಮ್ನಿ 5 ಡೋರ್ ಸುತ್ತಳತೆ ಬಗ್ಗೆ ಹೇಳುವುದಾದರೆ, ಇದು 3985 ಎಂಎಂ ಉದ್ದ, 1645 ಎಂಎಂ ಅಗಲ, 1720 ಎತ್ತರವಿದ್ದು, 2590 ಎಂಎಂ ಅಳತೆಯ ವೀಲ್ಸ್ ಬೇಸ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications